ಕಾರವಾರ: ಹೊನ್ನಾವರ ಪಟ್ಟಣದ ಕೆ ಎಚ್ ಕಾಲೋನಿ ರಸ್ತೆ ತೀರಾ ಹದಗೆಟ್ಟಿದ್ದು ಕಳಪೆಕಾಮಗಾರಿಯಾಗಿದ್ದು ಹೊಂಡ ಗುಂಡಿಗಳಿಂದ ಕುಡಿದ ರಸ್ತೆಯಿಂದಾಗಿ ವಾಹನ ಸವಾರರು ಹಾಗೂ ಪಾದಾಚಾರಿಗಳು ಶಪಿಸುತ್ತಾ ತೆರಳುವ ಪರಿಸ್ಥಿತಿ ಎದುರಾಗಿದೆ.
ಜವಾಬ್ದಾರಿಯುತ ಸ್ಥಾನದಲ್ಲಿ ಇರುವರರು ಸಿಕ್ಕಿದಷ್ಟು ಗುಳುಂ ಸ್ವಾಹಾ ಮಾಡಿಕೊಂಡು ಕಣ್ಣುಮಿಚ್ಚಿ ಕುಳಿತರೆ ಸಾರ್ವಜನಿಕರ ಗೋಳು ಕೇಳವರು ಯಾರು ಎಂಬ ಪ್ರಶ್ನೆ ಉಂಟಾಗಿದೆ.
ಕೆ ಎಚ್ ಕಾಲೋನಿಯ ರಸ್ತೆಯಲ್ಲಿ ಮಳೆ ನೀರು ಸರಾಗವಗಲು ಹೋಗಲು ಚರಂಡಿಯ ವ್ಯವಸ್ತೆ ಕುಡಾ ಇಲ್ಲದೆ ಮಳೆಯ ನೀರು ರಸ್ತೆಯಲ್ಲಿಯೆ ಹರಿಯುವುದರಿಂದ ಪಾದಚಾರಿಗಳಿಗೆ ತುಂಬಾ ತೊಂದರೆ ಅಗುತ್ತಿದ್ದು ಅಷ್ಟೇ ಅಲ್ಲದೆ ರಸ್ತೆಗಳು ಹೊಂಡ ಹೊಂಡ ವಾಗಿ ನೀರುಗಳು ತುಂಬಿದ್ದು ಜನರು ಪರದಾಡುವಂತಾಗಿದೆ.
ಪಟ್ಟಣ ಪಂಚಾಯಿತ ಸದಸ್ಯರು ಹಾಗೂ ಗುತ್ತಿಗೆದಾರರು ಬೇಜವಾಬ್ದಾರಿಯೆ ಕಾರಣ ಎಂದು ಜನರು ಅಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.ಪಟ್ಟಣ ಪಂಚಾಯಿತರವರು ಈ ರಸ್ತೆಯನ್ನು ಕೂಡಲೇ ಸರಿ ಪಡಿಸದಿದ್ದಲ್ಲಿ ಸಾರ್ವಜನಿಕರ ಅಕ್ರೋಶವನ್ನು ಎದುರಿಸ ಬೇಕಾದಿತು.
ಅನುದಾನಗಳು ಬಂದರು ಗುಣಮಟ್ಟದ ರಸ್ತೆಗಳು ನಿರ್ಮಾಣವಾಗುತ್ತಿಲ್ಲ ಗುಣಮಟ್ಟದ ಕಾಮಗಾರಿ ಮಾಡುವ ಬದಲು ಕಳಪೆ ಕಾಮಾಗಾರಿ ಮಾಡಿ ಜನರ ಜೀವದ ಜೊತೆ ಆಟ ಅಡುತ್ತಿದ್ದಾರೆ.ಪ್ರತಿಯೊಂದು ಕಡೆಯಲ್ಲು ರಸ್ತೆಗಳ ಪರಿಸ್ಥಿತಿ ನೋಡಿದರೆ ಎಷ್ಟು ಜನರ ಪ್ರಾಣ ಕಳೆದು ಕೊಳುವ ಪರಿಸ್ಥಿತಿ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಈಗಲಾದರು ಪಟ್ಟಣ ಪಂಚಾಯಿತ ಮುಖ್ಯಾದಿಕಾರಿ ಹಾಗೂ ಪಟ್ಟಣ ಪಂಚಾಯಿತ ಸದಸ್ಯರು ಗಮನ ಹರಿಸಿ ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸ ಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ,
ಹೊನ್ನಾವರ ಉತ್ತರ ಕನ್ನಡ ಜಿಲ್ಲಾ ವರದಿಗಾರರು ರೂಪಾ