ಉಡುಪಿ : ಬ್ರಹ್ಮಾವರ ತಾಲ್ಲೂಕಿನ ಮಣೂರು ಹರ್ತಟ್ಟು ಮತ್ತು ಮೂಡುಗಿಳಿಯಾರು ವ್ಯಾಪ್ತಿಯಲ್ಲಿ ವಿಶೇಷವಾಗಿ ನಾಗರಪಂಚಮಿ ಹಬ್ಬವನ್ನು ಇಲ್ಲಿನ ಸಾರ್ವಜನಿಕರು ಆಚರಣೆ ಮಾಡಿದರು.
ನಾಗರ ಪಂಚಮಿ ಎನ್ನುವುದು ವರ್ಷದ ಪ್ರಥಮ ಹಬ್ಬವಾಗಿದ್ದು ಇಲ್ಲಿ ಸಂಭ್ರಮದಿಂದ ಎಲ್ಲರೂ ಆಚರಣೆಯನ್ನು ಮಾಡಿಕೊಂಡು ಬಂದಿದ್ದೇವೆ ಅಲ್ಲದೆ ಇಲ್ಲಿ ವಿಶೇಷವಾದ ಕಾರ್ಣಿಕವಿದ್ದು ಪ್ರತಿವರ್ಷದಂತೆ ಈ ವರ್ಷವೂ ಸಹ ನಾವೆಲ್ಲರೂ ಒಟ್ಟಾಗಿ ಸೇರಿ ನಾಗನಿಗೆ ಹೂ ಹಣ್ಣುಗಳನ್ನು ಹಾಕಿ ಅಲಂಕಾರ ಮಾಡಿ ಹಾಲು ತುಪ್ಪದ ಜೊತೆಗೆ ಅಭಿಷೇಕ ಮಾಡುವುದರ ಮೂಲಕ ನಾಗರ ಪಂಚಮಿಯನ್ನು ಆಚರಿಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಸನಾತನ ಧರ್ಮದಲ್ಲಿ ಪ್ರಾಣಿಗಳಿಗೂ ಪೂಜೆಯನ್ನು ಸಲ್ಲಿಸುತ್ತಾ ಬಂದಿದ್ದು ಅದರಲ್ಲಿ ನಾಗರಹಾವು ಸಹ ಒಂದು ಈ ದಕ್ಷಿಣ ಕನ್ನಡ ಭಾಗದಲ್ಲಿ ನಾವು ತುಂಬಾ ಆರಾಧನೆ ಮಾಡಿಕೊಂಡು ಬಂದಿದ್ದು ನಮ್ಮ ಹಿಂದೂ ಧರ್ಮದ ಪ್ರತೀತಿಯ ಪ್ರಕಾರ ಭೂಮಂಡಲವನ್ನು ಹೊತ್ತವನು ಆದಿಶೇಷ ಆತನಿಗೆ ನಾವು ಪೂಜೆ ಸಲ್ಲಿಸುವುದರ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ ನಮ್ಮ ಈ ಪರಶುರಾಮ ಕ್ಷೇತ್ರದ ದಕ್ಷಿಣ ಕನ್ನಡದಲ್ಲಿ ನಾಗನ ಆರಾಧಕರಾಗಿದ್ದೇವೆ ಅದೇ ರೀತಿ ಅವರವರ ಪದ್ಧತಿಯಲ್ಲಿ ಇವತ್ತು ನಾಗನನ್ನು ಆರಾಧಿಸುತ್ತಾರೆ.
ಇವತ್ತು ತುಂಬಾ ವಿಶೇಷವಾದ ದಿನ ಸಂತಾನ ಭಾಗ್ಯ ಕಂಕಣ ಬಲ ಕಣ್ಣಿನ ದೃಷ್ಟಿ ಇಂತಹ ಹಣವು ಸಮಸ್ಯೆಗಳನ್ನು ಪರಿಹಾರ ಮಾಡುವುದು ನಮ್ಮ ನಾಗನೆಂಬುದು ನಂಬಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಅಲ್ಲದೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಪುನಸ್ಕಾರಕ್ಕೆ ಸಾರ್ವಜನಿಕರು ಸೇವೆ ಸಲ್ಲಿಸಲು ಬಂದಿದ್ದು ಶಿಸ್ತು ಸಂಯಮದಿಂದ ಸರಿಯಾಗಿ ಸಾಲಿನಲ್ಲಿ ಹಣ್ಣು ಪ್ರಸಾದವನ್ನು ಸ್ವೀಕರಿಸುವುದರ ಮೂಲಕ ನಾಗರ ಪಂಚಮಿಯನ್ನು ವಿಜೃಂಭಣೆಯಿಂದ ಆಚರಿಸಿದರು.
✍️ ಆರತಿ ಗಿಳಿಯಾರು