ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು.

ಉಡುಪಿ : ಕುಂದಾಪುರ ತಾಲ್ಲೂಕಿನ ದಿನಾಂಕ 20-11-2024 ಗ್ರಾಮ ಸಭೆ ನಡೆದಿದ್ದು ಗ್ರಾಮದ ಕೆಲವೊಂದು ಮೂಲಭೂತ ಸೌಕರ್ಯಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಯೊಂದು ನಡೆದಿತ್ತು.

ಸಾರ್ವಜನಿಕರ ಈ ಚರ್ಚೆಯ ಶುರುವಲ್ಲೇ ಅರಣ್ಯ ಅಧಿಕಾರಿಗಳು ಮಾಹಿತಿಯನ್ನು ನೀಡುತ್ತಿರುವ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಗ್ರಾಮದಲ್ಲಿ ದೊಡ್ಡಮಟ್ಟದ ಅರಣ್ಯ ಮರಗಳ ನಾಶವಾಗುತ್ತಿರುವುದರ ಬಗ್ಗೆ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಭಾಗದಲ್ಲಿ ಅರಣ್ಯ ಮರ ನಾಶವಾಗುತ್ತಿರುವುದು ನಿಮ್ಮ ಗಮನಕ್ಕೆ ಇರುತ್ತದೆ ಕಾಡು ಕಳ್ಳರು ಕಾಡು ಮರಗಳನ್ನು ನಾಶ ಮಾಡಿ ಯಾರ ಭಯವೂ ಇಲ್ಲದೆ ರಾಜಾರೋಷವಾಗಿ ಮರಗಳನ್ನು ಸಾಗುತ್ತಿರುವುದು ಸಾರ್ವಜನಿಕರಾದ ನಮ್ಮ ಗಮನಕ್ಕೆ ಇರುತ್ತದೆ ನೀವು ಅರಣ್ಯ ಅಧಿಕಾರಿಗಳಾಗಿ ಅವರ ಜೊತೆ ಕೈಜೋಡಿಸಿಕೊಂಡು ಅರಣ್ಯ ಮರಗಳನ್ನು ರಕ್ಷಣೆ ಮಾಡದೆ ಮರ ಕಡಿಯುವ ಕಟುಕರ ಜೊತೆ ಕೈ ಜೋಡಿಸಿಕೊಂಡು ಬಂದಿದ್ದೀರಿ ಇದೇ ರೀತಿ ಮುಂದುವರಿದರೆ ಸಾರ್ವಜನಿಕರಾದ ನಾವು ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ನಿಮ್ಮ ವಿರುದ್ಧ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಅರಣ್ಯ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಸೂಚಿಸಿದರು.

ನಂತರ ಮಾತನಾಡಿದ ನೀರಾವರಿ ಇಲಾಖೆ ಅಧಿಕಾರಿಯನ್ನು ಸ್ಥಳೀಯ ಕೃಷಿಕರು ತರಾಟೆಗೆ ತೆಗೆದುಕೊಂಡು ನಮ್ಮ ಊರಿನ ನದಿಯ ನೀರು ನಮಗೆ ಉಪಯೋಗಕ್ಕೆ ಬರುತ್ತಿಲ್ಲ ವ್ಯವಸ್ಥಿತವಾದ ಕಾಲುವೆಗಳು ಸೇತುವೆಗಳಾಗಲಿ ಡ್ಯಾಮ್ ಗಳಾಗಲಿ ರಚನೆಯಾಗಿಲ್ಲ ಈ ವಿಚಾರವನ್ನು ಪ್ರತಿ ಗ್ರಾಮ ಸಭೆಯಲ್ಲೂ ಎಷ್ಟೋ ವರ್ಷಗಳಿಂದ ಚರ್ಚೆ ಮಾಡಿಕೊಂಡು ಬಂದಿದ್ದೇವೆ ನಿಮ್ಮ ಇಲಾಖೆ ಇದೇ ರೀತಿ ಕೃಷಿಕರಿಗೆ ಅನುಕೂಲವಾಗುವಂತೆ ವ್ಯವಸ್ಥಿತ ರೀತಿಯಲ್ಲಿ ಡ್ಯಾಮ್ ಗಳನ್ನು ರಚನೆ ಮಾಡಿಕೊಡುತ್ತೇವೆ ಎಂದು ಸುಳ್ಳು ಹೇಳಿ ಪ್ರತಿ ಗ್ರಾಮಸಭೆಗೆ ನೀರಾವರಿ ಇಲಾಖೆ ಸ್ಥಳೀಯ ಮಟ್ಟದ ಅಧಿಕಾರಿಗಳೇ ಬಂದು ಹೋಗುತ್ತಿರುವುದು ಅಸಮಾಧಾನವಾಗಿದ್ದು ಇನ್ನು ಮುಂದೆ ಗ್ರಾಮಸಭೆಗೆ ನೀವು ಬರಬಾರದು ನಿಮ್ಮ ಹಿರಿಯ ಅಧಿಕಾರಿಗಳೇ ಬಂದು ನಮಗೆ ಉತ್ತರವನ್ನು ನೀಡಬೇಕು ಇಲ್ಲವಾದರೆ ನಿಮ್ಮನ್ನು ಮುಂದಿನ ಗ್ರಾಮ ಸಭೆಗೆ ಬಂದದ್ದೇ ಆದರೆ ಹೊರಗೆ ಹೋಗಲು ಬಿಡುವುದಿಲ್ಲ ಎಲ್ಲಿಗೆ ಹೋಗುತ್ತೀರಿ ನೋಡುತ್ತೇವೆ ಎಂದು ಧಮ್ಕಿ ಹಾಕಿ ಸಾರ್ವಜನಿಕರು ಅಧಿಕಾರಿಗಳಿಗೆ ಎಚ್ಚರಿಕೆಯ ನೀಡಿರುತ್ತಾರೆ.

ನಂತರ ಮಾತನಾಡಿದ ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಬರುವ ಕೃಷಿ ಉತ್ಪನ್ನಗಳು ಹಾಗೂ ಕೃಷಿ ಯಂತ್ರೋಪಕರಣಗಳು ಹಾಗೂ ಕೃಷಿ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿದ್ದರು ನಂತರ ಮಾತನಾಡಿದ ಗ್ರಾಮಸ್ಥರು ಕೃಷಿಗೆ ಸಂಬಂಧಿಸಿದ ಭೂಮಿಗೆ ಹೋಗಲು ಅನುಕೂಲವಾದ ದಾರಿ ಇಲ್ಲದೆ ಕೃಷಿ ಭೂಮಿಗೆ ಬೀಜ ಹಾಗೂ ಗೊಬ್ಬರಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎನ್ನುವ ವಿಚಾರವನ್ನು ಕೃಷಿ ಇಲಾಖೆಯ ಅಧಿಕಾರಿಯ ಎದುರು ತಮ್ಮ ಅಳಲನ್ನು ತೋಡಿಕೊಂಡಿರುತ್ತಾರೆ.

ಕೃಷಿ ಇಲಾಖೆಯಲ್ಲಿ ಎಷ್ಟೇ ಸವಲತ್ತುಗಳಿದ್ದರೇನು? ಅದನ್ನು ಪಡೆದುಕೊಂಡು ಕೃಷಿ ಭೂಮಿಗೆ ತೆಗೆದುಕೊಂಡು ಹೋಗಲು ದಾರಿಯೇ ಇಲ್ಲದಿದ್ದರೆ ನಾವು ಕೃಷಿಕರಾಗುವುದಾದರೂ ಹೇಗೆ ಎನ್ನುವ ಪ್ರಶ್ನೆಯನ್ನು ಅವರ ಬಳಿ ಕೇಳಿ ತಮಗಾದ ಸಮಸ್ಯೆಗಳನ್ನು ಗ್ರಾಮ ಸಭೆಯಲ್ಲಿ ಹಂಚಿಕೊಂಡಿರುತ್ತಾರೆ.

ನಂತರ ಮಾತನಾಡಿದ ಮೆಸ್ಕಾಂ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ವಿವರಿಸಿದ ನಂತರ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡಲು ಪ್ರಾರಂಭಿಸಿದರು.ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿತಿ ಯಾವುದೇ ಪರವಾನಿಗೆ ತೆಗೆದುಕೊಳ್ಳದೆ ರಸ್ತೆಯ ಬದಿಯಲ್ಲಿ ಕಂಬಗಳನ್ನು ನೆಟ್ಟು ತಮಗೆ ಗೊತ್ತಿರುವ ಸರ್ಕಾರದ ನಿಯಮಗಳನ್ನು ಪಾಲಿಸದೆ ಎಲ್ಲೆಂದರಲ್ಲಿ ಕಂಬಗಳನ್ನು ನೆಟ್ಟಿದ್ದರಿಂದ ನಮಗೆ ತೊಂದರೆಯಾಗುತ್ತಿದೆ ಎನ್ನುವ ವಿಚಾರವನ್ನು ಮುಂದಿಟ್ಟರು.

ನಂತರ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯವಾದಾಗ ಯಾವ ರೀತಿ ಕ್ರಮಗಳನ್ನು ಕೈಗೊಳ್ಳುತ್ತೇವೆ ಹಾಗೂ ತಾವು ಯಾರನ್ನು ಸಂಪರ್ಕಿಸಬೇಕು ಎಲ್ಲಿ ಸಂಪರ್ಕಿಸಬೇಕು ಎನ್ನುವ ವಿಚಾರದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿರುತ್ತಾರೆ. ನಂತರ ಮಾತನಾಡಿದ ಸಾರ್ವಜನಿಕರು ಹೆಣ್ಣು ಮಕ್ಕಳಿಗೆ ಮಾತ್ರವೇ ಸವಲತ್ತುಗಳನ್ನು ನೀಡುತ್ತೀರಿ ಗಂಡು ಮಕ್ಕಳಿಗೆ ಯಾಕೆ ನೀಡುವುದಿಲ್ಲ ತಾರತಮ್ಯವನ್ನು ಯಾಕೆ ಮಾಡುತ್ತೀರಿ ಎನ್ನುವ ಪ್ರಶ್ನೆಯೊಂದು ಕೇಳಿರುತ್ತಾರೆ ಅದಕ್ಕೆ ಅಧಿಕಾರಿಗಳು ಸರ್ಕಾರದ ನಿಯಮದಲ್ಲಿ ಬಂದಿರುವ ವಿಚಾರವನ್ನು ನಿಮ್ಮ ಎದುರು ಚರ್ಚೆಯನ್ನು ಮಾಡಿ ವಿವರಿಸಿರುತ್ತೇನೆ ಎಂದು ಹೇಳಿರುತ್ತಾರೆ.

ನಂತರ ಮಾತನಾಡಿದ ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರದಿಂದ ಬರುವ ಸವಲತ್ತುಗಳು ಹಾಗೂ ಭೂಮಿಯ ಬಗ್ಗೆ ವಿವರವಾಗಿ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುತ್ತಾರೆ. ಮಾಹಿತಿ ನೀಡಿದ ನಂತರ ಸಾರ್ವಜನಿಕರು ಹೆಚ್ಚಿನ ಸಮಸ್ಯೆಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟದ್ದು ಆಗಿದ್ದು ಅದರಲ್ಲೂ ಅರಣ್ಯ ಮರಗಳು, ಸಾರ್ವಜನಿಕರಿಗೆ ಹೋಗಲು ರಸ್ತೆ, ಕೃಷಿ ಭೂಮಿಗೆ ಹೋಗಲು ರಸ್ತೆ ಹೀಗೆ ಹತ್ತು ಹಲವು ಸಮಸ್ಯೆಗಳಿದ್ದು ಅದನ್ನು ಕೂಡಲೇ ಪರಿಹಾರ ಮಾಡಿಕೊಡಬೇಕು ಅದನ್ನು ಕುಂದಾಪುರದ ತಹಸೀಲ್ದಾರ್ ಗಮನಕ್ಕೆ ತರಬೇಕು ಎಂದು ತಿಳಿಸಿರುತ್ತಾರೆ.

ಗುಲ್ವಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ಹೆಚ್ಚಿನ ವಿಚಾರಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದಾಗಿದ್ದು ಕುಂದಾಪುರ ತಹಶೀಲ್ದಾರ್ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹಾರ ಮಾಡಿಕೊಡಬೇಕು ಎಂದು ಕೇಳಿಕೊಳ್ಳುತ್ತಾರೆ. ಆದರೆ ಸ್ಥಳೀಯ ಅಧಿಕಾರಿಗಳು ಈ ವಿಚಾರವನ್ನು ವರದಿ ಮಾಡಿ ತಹಶೀಲ್ದಾರ್ ಗಮನಕ್ಕೆ ಈಗಾಗಲೇ ತಂದಿದ್ದೇವೆ ಆದರೆ ಅದು ತಹಶೀಲ್ದಾರ್ ಮಟ್ಟದಲ್ಲೇ ಹಾಗೆ ಇದೆ ಎಂದು ತಿಳಿಸಿದ್ದಾರೆ.

ನಿನ್ನೆ ದಿನ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ದೊಡ್ಡ ಮಟ್ಟದ ಚರ್ಚೆಗಳನ್ನು ಮಾಡುವಾಗ ದೊಡ್ಡ ಮಟ್ಟದಲ್ಲಿ ಮಾತಿನ ಚಕಮಕಿ ನಡೆದಿದ್ದು ಅಧಿಕಾರಿಗಳನ್ನು ಹೋಗಲು ಬಿಡುವುದಿಲ್ಲ ಎಂದು ಆಕ್ರೋಶಕ್ಕೆ ಒಳಗಾಗಿದ್ದು ಸ್ಥಳೀಯ ಠಾಣಿ ಸಿಬ್ಬಂದಿಗಳು ಯಾರು ಇಲ್ಲದೆ ದಿಕ್ಕಾಪಾಲಾಗಿ ನೋಡುವಂತಯಿತು.
ಅದರಲ್ಲೂ ಕೆಲವು ಅಧಿಕಾರಿಗಳು ಹಾಗೂ ಪಂಚಾಯಿತಿ ಸದಸ್ಯರು ಸಭೆಗೆ ಬಾರದೆ ಕಣ್ಮರೆಯಾದ್ದದ್ದು ಸತ್ಯವಾಗಿದೆ.

ಗುಲ್ವಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಒಂದು ಗ್ರಾಮ ಸಭೆಯನ್ನು ನಡೆಸಬೇಕಾದರೆ ಎಲ್ಲಾ ಇಲಾಖೆಗೆ ಸಂಬಂದಿಸಿದ ಅಧಿಕಾರಿಗಳನ್ನು ಕರೆಸಿಕೊಂಡು ಸಾರ್ವಜನಿಕರಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಮಾತಿನ ಚಕಮಕಿಯಲ್ಲಿ ಯಾರ ಮೇಲೆ ಹಲ್ಲೆ ತೊಂದರೆ ಆಗದ ಹಾಗೆ ಯಾವ ರೀತಿಯಾಗಿ ಗ್ರಾಮ ಸಭೆಯನ್ನು ಆಯೋಜನೆ ಮಾಡಬೇಕು ಎನ್ನುವ ಎಲ್ಲಾ ರೀತಿಯ ತರಬೇತಿ ಹಾಗೂ ಸುತ್ತೋಲೆಗಳಿದ್ದು ಯಾವ ನಿಯಮಗಳನ್ನು ಅನುಸರಿಸದೆ ಅಭದ್ರತೆಯು ಸ್ಪಷ್ಟವಾಗಿ ಕಂಡು ಬಂದಿದ್ದು ಗ್ರಾಮ ಸಭೆಯಲ್ಲಿ ಯಾರಿಗಾದರು ತೊಂದರೆಯಾದರೆ ಯಾರು ಹೊಣೆ? ಎನ್ನುವ ವಿಚಾರ ತಿಳಿದಿದ್ದು ನಿಯಮ ಪಾಲನೆ ಮಾಡದ ಅಭಿವೃದ್ಧಿ ಅಧಿಕಾರಿಗಳನ್ನು ಹಿರಿಯ ಅಧಿಕಾರಿಗಳು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿದಿದ್ದಾರೆ.

ಇಷ್ಟೆಲ್ಲ ವಿಚಾರವನ್ನು ಚರ್ಚೆ ಮಾಡಿ ಕೂಗಾಡಿ ಸಾರ್ವಜನಿಕರು ಕೇಳುತ್ತಿದ್ದು ಪಂಚಾಯತ್ ಅಧ್ಯಕ್ಷರು ಮುಂದಿನ ದಿನಗಳಲ್ಲಿ ನಿಮ್ಮ ಕೆಲಸವನ್ನು ಮಾಡಿಕೊಳ್ಳುತ್ತೇನೆ ಎನ್ನುವ ವಿಚಾರವನ್ನು ತಿಳಿಸಿರುತ್ತಾರೆ.

ಇಲ್ಲಿನ ಪಂಚಾಯತ್ ಅಭಿರ್ವದ್ದಿ ಅಧಿಕಾರಿಯವರು ಒಳ ರಾಜಕೀಯ ಮಾಡಿಕೊಂಡು ಇಲ್ಲೇ ತಳ ಉರಬೇಕು ಅನ್ನೋ ಹುನ್ನಾರದಿಂದ ಕಳೆದ 2 ವರ್ಷ ಗಳಿಂದ ಕಾರ್ಯದರ್ಶಿ ಆಗಿ ನೇಮಕಾತಿ ಆದ ಒಬ್ಬ ದಲಿತ ನೌಕರರಿಗೆ ಯಾವುದೇ ಮೂಲ ಭೂತ ಸೌಕರ್ಯ ನೀಡದೆ ಸದಸ್ಯರುಗಳ ಜೊತೆ ಸೇರಿ ಕರ್ತವ್ಯ ಕ್ಕೆ ಅಡ್ಡಿ ಪಡಿಸಿತ್ತಿದ್ದಾರೆ ಈ ಬಗ್ಗೆ ಕುದ್ದು ಕಾರ್ಯದರ್ಶಿಯವರು ಮಾಧ್ಯಮಕ್ಕೆ ಹೇಳಿಕೆ ನೀಡಿರುತ್ತಾರೆ. ಅಲ್ಲದೆ ತನ್ನ ಹಿರಿಯ ಅಧಿಕಾರಿಯವರಾದ ಕಾರ್ಯ ನಿರ್ವಹಣಾಧಿಕಾರಿಯವರ( E. O) ಗಮನಕ್ಕೆ ಈ ವಿಚಾರವನ್ನು ಪತ್ರ ವ್ಯವಹಾರ ಮೂಲಕ ತಿಳಿಸಿರುತ್ತಾರೆ. ಇದೇ ವಿಚಾರವನ್ನು ಕಾರ್ಯ ನಿರ್ವಹಣಾಧಿಕಾರಿಯರಲ್ಲಿ ಮಾಧ್ಯಮದವರು ಕೇಳಿದಾಗ ಈ ವಿಚಾರ ನನ್ನ ಗಮನಕ್ಕೆ ಇದ್ದು ನಾನು ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವ ಉತ್ತರವನ್ನು ಮಾಧ್ಯಮಕ್ಕೆ ತಿಳಿಸಿರುತ್ತಾರೆ.

ಅಲ್ಲದೆ ಕಾರ್ಯದರ್ಶಿಯವರನ್ನು ಗ್ರಾಮ ಪಂಚಾಯತ್ ನಿಂದ ತೆಗೆದು ಹಾಕಬೇಕು ಎಂದು ಇವರು ಸದಸ್ಯರುಗಳ ಜೊತೆ ಸೇರಿ ದಲಿತ ನೌಕರನಿಗೆ ಕಿರುಕುಳ ಕೊಡುತ್ತಿರುವುದು ಇರವುದು ಕಂಡು ಬಂದಿರುತದೆ.

ಒಬ್ಬ ದಲಿತ ನೌಕರರಿಗೆ ಇಲ್ಲಿ ಯಾವುದೇ ರೀತಿಯ. ರಕ್ಷಣೆ ಇಲ್ಲಾದಿರೋದು ನಿನ್ನೆ ದಿನ ಕಂಡು ಬಂದಿದ್ದು ಇದೇ ರೀತಿ ಗುಲ್ವಾಡಿ ಪಂಚಾಯಿತಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಸಮಸ್ಯೆಗಳ ಗುಡಾನವಾಗಿದ್ದು ಒಳಗಿರುವ ಸಿಬ್ಬಂದಿಗಳಿಗೆ ಕುಳಿತುಕೊಳ್ಳಲು ಆಸನಗಳು ಹಾಗೂ ಕಡತಗಳನ್ನು ಇಡಲು ವ್ಯವಸ್ಥಿತವಾದ ಕಾಪಾಟುಗಳಿಲ್ಲದೆ ಬಿದ್ದಿರುವುದಂತೂ ಸತ್ಯವಾಗಿದೆ.

ಹೀಗೆ ಆದರೆ ಗ್ರಾಮದ ಅಭಿವೃದ್ಧಿ ಮಾಡಬೇಕಾದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಒಳಗಿರುವ ಸಿಬ್ಬಂದಿ ಹಾಗೂ ಸಿಬ್ಬಂದಿಯ ವ್ಯವಸ್ಥೆಯನ್ನೇ ನೋಡಿಕೊಳ್ಳಲಾಗದಂತ ಅಧಿಕಾರಿಯಾಗಿದ್ದು ಇನ್ನು ಸಾರ್ವಜನಿಕರ ರಕ್ಷಣೆ ಹೇಗೆ ಮಾಡುತ್ತಾರೆ? ಗ್ರಾಮದ ಅಭಿವೃದ್ಧಿ ಹೇಗೆ ಮಾಡುತ್ತಾರೆ? ಎನ್ನುವ ಪ್ರಶ್ನೆಯು ಕಾಡಿದ್ದು ಅಲ್ಲದೆ ಈ ಅಭಿವೃದ್ಧಿ ಅಧಿಕಾರಿಗಳು ತುಂಬಾ ವರ್ಷಗಳಿಂದ ಇಲ್ಲೇ ಇದ್ದು ಇವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಅಜ್ಜ ನೆಟ್ಟ ಆಲದ ಮರದಂತೆ ಇಲ್ಲೇ ಬೇರಿರುವುದು ಸತ್ಯವಾಗಿದ್ದು ಇಷ್ಟು ವರ್ಷ ಇಲ್ಲೇ ಇದ್ದು ಕರ್ತವ್ಯ ನೆರವೇರಿಸದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಈ ಮೂಲಕ ಸಾರ್ವಜನಿಕರು ತಿಳಿಸಿರುತ್ತಾರೆ.

ವರದಿ : ಆರತಿ ಗಿಳಿಯಾರು

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ವರದಿ ನಾಗೇಶ್ ಸುಬ್ರಹ್ಮಣ್ಯ ಸುಬ್ರಹ್ಮಣ್ಯ ನ.20: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನಿಗೆ ಈ ವರ್ಷ ರಾಷ್ಟ್ರ ಅಧ್ಯಕ್ಷರಾದ ಚಿತ್ರ ಕುಮಾರ್ ಅವರು ಮಂಗಳವಾರ ಅಧಿಕೃತ ಭೇಟಿ ನೀಡಿದರು. ಆರಂಭದಲ್ಲಿ ರಾಷ್ಟ್ರ ಅಧ್ಯಕ್ಷರನ್ನ ಕುಮಾರಧಾರ ದ್ವಾರದ ಬಳಿ ಸುಬ್ರಹ್ಮಣ್ಯ…

    ಷಷ್ಠಿ ಕುರಿತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಭೆ

    ವರದಿ ನಾಗೇಶ್ ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು.ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಬಗ್ಗೆ ಸಭೆ ಸಭೆಯಲ್ಲಿ ಪಾರ್ಕಿಂಗ್, ಲಕ್ಷದೀಪೋತ್ಸವ, ಕುಣಿತ ಭಜನೆ, ಬ್ರಹ್ಮರಥೋತ್ಸವ ಪಾಸ್, ಕೃಷಿ ಸ್ಟಾಲ್, ಸಿಡಿ ಮದ್ದು ಪ್ರದರ್ಶನ ಬಗ್ಗೆ ಚರ್ಚೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ…

    Leave a Reply

    Your email address will not be published. Required fields are marked *

    You Missed

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಷಷ್ಠಿ ಕುರಿತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಭೆ

    ಷಷ್ಠಿ ಕುರಿತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಭೆ

    ಇನ್ನೋವಾ ಕಾರಿಗೆ ಇನ್ಸುಲೇಟರ್ ಮೀನು ಗಾಡಿ ಡಿಕ್ಕಿ ನಾಲ್ವರ ಸ್ಥಿತಿ ಗಂಭೀರ…!

    ಇನ್ನೋವಾ ಕಾರಿಗೆ ಇನ್ಸುಲೇಟರ್ ಮೀನು ಗಾಡಿ ಡಿಕ್ಕಿ ನಾಲ್ವರ ಸ್ಥಿತಿ ಗಂಭೀರ…!

    ಕುಂದಾಪುರ ತಾಲ್ಲೂಕು ದಂಡಾಧಿಕಾರಿ ಶೋಭಾ ಲಕ್ಷ್ಮಿ  ಕರ್ತವ್ಯ ನಿರ್ವಹಿಸದೆ ಹೈಡ್ರಾಮ  ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿ ಇಲ್ಲದೆ ಅಧಿಕಾರಿಗಳಿಂದ ಪಂಗನಾಮ…!  

    ಕುಂದಾಪುರ ತಾಲ್ಲೂಕು ದಂಡಾಧಿಕಾರಿ ಶೋಭಾ ಲಕ್ಷ್ಮಿ  ಕರ್ತವ್ಯ ನಿರ್ವಹಿಸದೆ ಹೈಡ್ರಾಮ  ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿ ಇಲ್ಲದೆ ಅಧಿಕಾರಿಗಳಿಂದ ಪಂಗನಾಮ…!  

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ