ವರದಿ ನಾಗೇಶ್ ಸುಬ್ರಹ್ಮಣ್ಯ
ಸುಬ್ರಹ್ಮಣ್ಯ ನ.20:
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನಿಗೆ ಈ ವರ್ಷ ರಾಷ್ಟ್ರ ಅಧ್ಯಕ್ಷರಾದ ಚಿತ್ರ ಕುಮಾರ್ ಅವರು ಮಂಗಳವಾರ ಅಧಿಕೃತ ಭೇಟಿ ನೀಡಿದರು.
ಆರಂಭದಲ್ಲಿ ರಾಷ್ಟ್ರ ಅಧ್ಯಕ್ಷರನ್ನ ಕುಮಾರಧಾರ ದ್ವಾರದ ಬಳಿ ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ನ ಅಧ್ಯಕ್ಷ ಡಾ.ರವಿಕಕ್ಕೆ ಪದವು ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ ,ಸದಸ್ಯರುಗಳಾದ ಗೋಪಾಲ ಎಣ್ಣೆ ಮಜಲ್, ಅಶೋಕ್ ಕುಮಾರ್ ಮೂಲೆ ಮಜಲು ,ಪ್ರಭಾಕರ ಪಟ್ರೆ, ಮೋಹನದಾಸ್ ರೈ ,ಮಣಿಕಂಠ, ನಾಗೇಶ್ ನೆಕ್ರಾಜ ಮುಂತಾದವರು ಬರಮಾಡಿಕೊಂಡರು.
ರಾಷ್ಟ್ರ ಅಧ್ಯಕ್ಷರೊಂದಿಗೆ ರಾಷ್ಟ್ರೀಯ ಉಪಾಧ್ಯಕ್ಷ ಕಿಶೋರ್ ಫರ್ನಾಂಡಿಸ್, ರಾಷ್ಟ್ರ ಅಧ್ಯಕ್ಷರ ಕಾರ್ಯದರ್ಶಿ ಸುಕುಮಾರ್ ಜೊತೆಗಿದ್ದರು. ಅಲ್ಲಿಂದ ಡಾ. ರವಿ ಕಕ್ಕೆ ಪದವು ಅವರು ನಿರ್ಮಿಸಿಕೊಟ್ಟ ತೀರ ಆರ್ಥಿಕ ಸಂಕಷ್ಟದಲ್ಲಿರುವ ಹಾಗೂ ಆಟೋ ಚಾಲಕಮಾಲಕ ಸಂಘದ ಮಾಜಿ ಅಧ್ಯಕ್ಷರಾದ ದಿ.ಪುಟ್ಟಣ್ಣ ವಾಲಗದಕೇರಿ ಅವರ ಕುಟುಂಬಕ್ಕೆ ನೂತನವಾಗಿ ನಿರ್ಮಿಸಿಕೊಟ್ಟ ಮನೆಯನ್ನ ರಾಷ್ಟ್ರಾಧ್ಯಕ್ಷ ರಿಂದ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ದಿ.ಪುಟ್ಟಣ್ಣ ಅವರ ಪತ್ನಿ ಹೇಮಾವತಿ ಹಾಗೂ ಮಕ್ಕಳು, ಕುಕ್ಕೆ ಶ್ರೀ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರುಗಳು ಕುಟುಂಬಸ್ಥರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಆಟೋ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷ ಉಮೇಶ ಕೆ ಎನ್ ಅವರು ದಿವಂಗತ .ಪುಟ್ಟಣ್ಣ ಅವರ ಕುಟುಂಬಕ್ಕೆ ರೂ.10000/=ವನ್ನು ಹಸ್ತಾಂತರಿಸಿದರು.
ತದನಂತರ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು ಅಲ್ಲಿ ಸಾಧಕರುಗಳಾದ ಕಲ್ಪನೆ, ಕುಶಾಲಪ್ಪ ಗೌಡ ನೂಚೀಲ, ನಾಗೇಶ್ ನೆಕ್ರಾಜ, ಕಡಬ ಶ್ರೀನಿವಾಸ ರೈ ಅವರುಗಳನ್ನ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ರಾಷ್ಟ್ರ ಅಧ್ಯಕ್ಷ ಚಿತ್ರ ಕುಮಾರ್ ,ರಾಷ್ಟ್ರ ಉಪಾಧ್ಯಕ್ಷ ಕಿಶೋರ್ ಪೆರ್ನಾಂಡಿಸ್ ,ರಾಷ್ಟ್ರ ಅಧ್ಯಕ್ಷರ ಕಾರ್ಯದರ್ಶಿ ಸುಕುಮಾರ್, ಕುಮಾರಸ್ವಾಮಿ ಶಾಲಾ ಸಂಚಾಲಕ ಚಂದ್ರಶೇಖರ ನಾಯರ್, ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡು ತೋಟ ,ಪ್ರಭಾರ ಕಾರ್ಯದರ್ಶಿ ಅಶೋಕ ಕುಮಾರ ಮೂಲೆ ಮಜಲು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಅಧ್ಯಕ್ಷ ಡಾ.ರವಿ ಕಕ್ಕೆ ಪದವು ಸ್ವಾಗತಿಸಿದ ಕಾರ್ಯಕ್ರಮದ ಕೊನೆಯಲ್ಲಿ ಗೋಪಾಲ ಎಣ್ಣೆ ಮಜಲ್ ನಿರೂಪಣೆ ವಹಿಸಿದ್ದರು.