ಭೋವಿ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದರೆ ಜಿಲ್ಲಾಧ್ಯಂತ ಉಗ್ರ ಹೋರಾಟ ಶ್ರೀನಿವಾಸ್ ವಡ್ದರ್ಸೆ ಎಚ್ಚರಿಕೆ.
ಉಡುಪಿ : ಭೋವಿ ಜನಾಂಗಕ್ಕೆ ಜಿಲ್ಲಾಡಳಿತ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬಾರದು ಒಂದು ವೇಳೆ ನೀಡಿದರೆ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಬ್ರಹ್ಮಾವರ ತಾಲ್ಲೂಕು ಪ್ರಧಾನ ಸಂಚಾಲಕರಾದ ಶ್ರೀನಿವಾಸ್ ವಡ್ದರ್ಸೆ ಇವರು ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸರ್ಕಾರದ ಸುತ್ತೋಲೆ ಹೊರಡಿಸಿದರು ಜಿಲ್ಲಾಡಳಿತ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ ಎಂದು ಸ್ಪರ್ಶ ಜಾತಿಯ ಭೋವಿ ಜನಾಂಗದವರು ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿಯವರ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಆದರೆ ಸರ್ಕಾರ ಈ ಸುತ್ತೋಲೆ ಹೊರಡಿಸಲು ಸುಳ್ಳು ವರದಿ ಹಾಗೂ ರಾಜಕಾರಣಿಗಳ ಒತ್ತಾಯಕ್ಕೆ ಮಣಿದಿರುತ್ತಾರೆ ಎಂದು ದೂರಿದ್ದಾರೆ.
ಭೋವಿ ಜನಾಂಗದವರು ಉಡುಪಿ ಜಿಲ್ಲೆಯಲ್ಲಿ ಇರಬಹುದು ಹೊರತು ಉಡುಪಿ ಜಿಲ್ಲೆಯಲ್ಲಿ ಮೂಲದಿಂದಲೂ ಇದ್ದವರಲ್ಲ ಈ ಭೋವಿ ಜನಾಂಗದವರು ನಾವು ಇಲ್ಲೇ ಇರುವ ಮೂಲ ನಿವಾಸಿಗಳು ಎಂದು ಹೇಳಿ ಸುಳ್ಳು ದಾಖಲಾತಿಗಳನ್ನು ನೀಡಿ ಪರಿಶಿಷ್ಟ ಜಾತಿ ಪ್ರಮಾಣವನ್ನು ಕೇಳುತ್ತಿದ್ದಾರೆ.
ಆದರೆ ವಾಸ್ತವವಾಗಿ ಭೋವಿ ಜನಾಂಗದವರು ಅಸ್ಪೃಶ್ಯರಲ್ಲ ಮತ್ತು ಇಲ್ಲಿನ ಮೂಲ ನಿವಾಸಿಗಳಲ್ಲ ಎನ್ನುವುದು ಸತ್ಯದ ವಿಚಾರವಾಗಿದ್ದು ಅವರ ಕುಲಕಸುಬು ಮತ್ತು ಇಲ್ಲಿನ ಮೂಲ ನಿವಾಸಿಗಳು ಅಲ್ಲ ಎನ್ನುವ ವಿಚಾರದ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಮಾಡಿದರೆ ಸತ್ಯಾಂಶ ಹೊರಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಜಿಲ್ಲಾಡಳಿತ ಹಾಗೂ ಸರ್ಕಾರದ ದಿಕ್ಕು ತಪ್ಪಿಸಿ ಸುಳ್ಳು ದಾಖಲಾತಿಗಳನ್ನು ನೀಡಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವ ಹುನ್ನಾರ ನಡೆಸುತ್ತಿರುವುದು ನಮ್ಮ ಗಮನಕ್ಕಿದ್ದು ಇದಕ್ಕೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಹಾಗೂ ಉಗ್ರವಾದ ಹೋರಾಟ ಮಾಡುವುದರ ಮೂಲಕ ಇದಕ್ಕೆ ಸರಿಯಾದ ಕಡಿವಾಣ ವನ್ನು ಹಾಕುತ್ತೇವೆ ಎಂದು ತಿಳಿಸುವುದರ ಜೊತೆಗೆ ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬಾರದು ಎಂದು ತಿಳಿಸಿದರು.
✍️ ಆರತಿ ಗಿಳಿಯಾರು