ವರದಿ ಲೋಕೇಶ್ ನಾಯ್ಕ್ ಭಟ್ಕಳ್.
2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮವನ್ನು ಗುರುವಾರದಂದು ಅಲಂಕಾರಿಕ ಮೀನುಗಳನ್ನು ಅಕ್ವೆರಿಯಂನಲ್ಲಿ ತುಂಬುವ ಮೂಲಕ ಉದ್ಘಾಟಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು . ಮೀನುಗಾರಿಕೆ ದಿನಾಚರಣೆಯಮತ್ಸ್ಯ ಮೇಳದ ಅಂಗವಾಗಿ ಮತ್ತು ಮೀನುಗಾರರ ಪರವಾಗಿ ನಾನು ಇಲ್ಲಿಗೆ
ಆಗಮಿಸಿದ್ದೇನೆ.
ಶ್ರೀ ಕೊಲ್ಲೂರು ಮುಕಾಂಬಿಕೆ ದೇವಿ,ಇಡುಗುಂಜಿಯ ಶ್ರೀ ಮಾಹಾ ಗಣಪತಿ ಮತ್ತು ಮುರುಡೇಶ್ವರದ ಮಹಾ ಶಿವ ದೇವರ ದರ್ಶನದ ಜೊತೆಗೆ ಈ ಕರಾವಳಿ ಭಾಗದಲ್ಲೊಂದಾದ ಭಟ್ಕಳ ಜನರ ದರ್ಶನ ಮಾಡುವ ಸದಾವಕಾಶ ಇಂದು ನನಗೆ ಲಭಿಸಿದೆ. ಈಗಾಗಲೇ ಸಮೀಕ್ಷೆಯಲ್ಲಿ ಶೇ. 99 ಮೀನುಗಾರರು ಸಂಕಷ್ಟದಲ್ಲಿದ್ದಾರೆ ಎಂಬ ವರದಿ ಇದೆ. ಕ್ರಷಿಗೆ ಸಂಬಂಧಿಸಿದಂತೆ ರೈತ ಭೂಮಿ ಯಲ್ಲಿ ಕೃಷಿ ಮಾಡಿದರೆ ಮೀನುಗಾರರು ನೀರಿನಲ್ಲಿ ಕ್ರಷಿ ಮಾಡಿ ಬದುಕು ಕಟ್ಟಿಕೊಳ್ಳುತ್ತಾರೆ ಈ ಎರಡು ಕೃಷಿಯಲ್ಲಿ . ನಿವೃತ್ತಿ ಮತ್ತು ಪಿಂಚಣಿ ಇಲ್ಲ. ಮೀನು ಹಿಡಿದು ಮಾರಾಟ ಮಾಡಿ ಅವರ ಬದುಕನ್ನು ಕಟ್ಟಿಕೊಂಡವರು. ಮೀನುಗಾರಿಕೆಯಿಂದ ಶ್ರೀಮಂತರಾಗಿರುವುದು ತುಂಬಾ ವಿರಳ.ಜೀವನಕ್ಕೆ,ಮಕ್ಕಳವಿದ್ಯಾಭ್ಯಾಕ್ಕೆ, ಮನೆ ನಿರ್ಮಾಣ ಗಳಿಗೆ ಬರುವ ಆದಾಯ ಸರಿಹೋಗುತ್ತದೆ. ಮೀನುಗಾರರ ಜೀವನ ಕೆರೆ,ನದಿ, ಸಮುದ್ರದಲ್ಲಿ ನೀರಿನ ಏರಿಳಿತಗಳು , ಮಳೆ, ಗಾಳಿ ಲೆಕ್ಕಿಸದೆ ಇತರರಿಗೋಸ್ಕರ ಬದುಕುವುದಾಗಿದೆ, ನಮ್ಮ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ವೇಳೆ ಅವಘಡ ಸಂಭವಿಸಿದಲ್ಲಿ ಅವರ ಕುಟುಂಬಕ್ಕೆ ನೀಡುವ ಸಂಕಷ್ಟ ಪರಿಹಾರ ನಿಧಿಯ ಹಣವನ್ನು 8 ಲಕ್ಷ ದಿಂದ 10 ಲಕ್ಷ ಹಣ ಪರಿಹಾರ ನೀಡುವುದಾಗಿ ವೇದಿಕೆಯಲ್ಲಿ ಘೋಷಣೆ ಮಾಡುತ್ತಿದ್ದೇನೆ.ಆದರಿಂದ ಮೀನುಗಾರರ ಕಷ್ಟಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸದಾ ಬದ್ದವಾಗಿದೆ.ಯುವಕರಿಗೆ ಉದ್ಯೋಗ ಅವಕಾಶ ಸೃಷ್ಟಿಸುವ ಚಿಂತನೆ . ಕರಾವಳಿಯಲ್ಲಿ ಪೃಮುಖ ಭಾಗಗಲ್ಲಿ ಹೊಸ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಹೊಸ ನೀತಿಯನ್ನು ಜಾರಿಮಾಡಿ ಸರಕಾರದ ಜೊತೆ ಸಮಾಲೋಚನೆ ನಡೆಸಿ ಮುಂದಿನ ದಿನದಲ್ಲಿ ಇದರ ರೂಪರೇಷೆಯನ್ನು ಸಿದ್ದಪಡಿಸಲಿದ್ದೇವೆ. ಉದ್ಯೋಗಕ್ಕಾಗಿ ಮೀನುಗಾರರಿಗಾಗಿ ಖಾಸಗಿ ಬಂದರು ನಿರ್ಮಾಣ ಮಾಡುವುದು ನಮ್ಮ ಸರಕಾರದ ಮುಖ್ಯ ಉದ್ದೇಶವಾಗಿದೆ.
ಕಾಂಗ್ರೆಸ್ ಸರಕಾರ ಚುನಾವಣೆ ಯಲ್ಲಿ ನೀಡಿದ 5 ಗ್ಯಾರಂಟಿ ಯೋಜನೆಯನ್ನು ಪಕ್ಷಾತೀತವಾಗಿ ಕಾರ್ಯರೂಪಕ್ಕೆ ತಂದಿದ್ದೇವೆ. ಇದಕ್ಕೆ ಬಿಜೆಪಿ ಅವರು ಹಿಯಾಳಿಸಿದ್ದರು. ಆದರೆ ಈಗ ಇದೇ ಬಿಜೆಪಿ ನಾಯಕರು ಮಹಾರಾಷ್ಟ್ರದಲ್ಲಿ ಚುನಾವಣೆ ಗೋಸ್ಕರ ಮಹಿಳೆಯರಿಗೆ ರೂ.2100 ರೂ ಮಾಸಿಕವಾಗಿ ಹಣ ನೀಡುವ ಮೂಲಕ . ಈಗ ಇವರು ನಮ್ಮ ಗ್ಯಾರಂಟಿ ಯೋಜನೆಯು ಜನಸಾಮಾನ್ಯರಿಗೆ ಎಷ್ಟು ಅನುಕೂಲಕರ ಏನ್ನುವುದು ಅವರದ್ದೇ ಬಿಜೆಪಿ ಸರಕಾರ ತೋರಿಸಿಕೊಡುತ್ತಿದೆ.ಬೆಲೆ ಏರಿಕೆಯ ಪ್ರಭಾವ ಬಿಜೆಪಿಯವರು ಅರಿತ್ತಿದ್ದಾರೆ ಎಂದು ಕೂಟುಕಿದರು.
ಇದೇ ವೇಳೆ ಈ ವರ್ಷ ಸರಕಾರದಿಂದ ಮೀನುಗಾರರಿಗೆ ಕುಟುಂಬಕ್ಕೆ 10 ಸಾವಿರ ಮನೆಯನ್ನು ನೀಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಮಾತನಾಡಿ
1957 ರಲ್ಲಿ ರಾಜ್ಯದಲ್ಲಿ ಮೀನುಗಾರಿಕಾ ಇಲಾಖೆಯು ಆರಂಭಗೊಂಡಿದ್ದು ಅಲ್ಲಿಂದ ನಿರಂತರ ಮೀನುಗಾರರ ಅಭಿವೃದ್ಧಿಗೆ ಸರಕಾರಗಳು ಶ್ರಮಿಸುತ್ತಾ ಬಂದಿದ್ದವು. ಆದರೆ ನಮ್ಮ ಸರಕಾರ ರಚನೆಯಾದ ಮೇಲೆ ಮೀನುಗಾರರ ಸಂಕಷ್ಟಕ್ಕೆ ಅವರ ಸಮಸ್ಯೆಗಳಿಗೆ ಸಾಕಷ್ಟು ಯೋಜನೆಯನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದೇವೆ.
ನಮ್ಮ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಮೀನುಗಾರರ ಅಭಿವೃದ್ಧಿಗೆ ಉತ್ತಮ ಸಹಕಾರ ನೀಡಿದ್ದಾರೆ.
ಒಟ್ಟು ಕರಾವಳಿಯ 320 ಕಿ.ಮೀ. 3 ಜಿಲ್ಲೆಯ ವ್ಯಾಪ್ತಿಯಲ್ಲಿ ಮೀನುಗಾರರಿದ್ದು ಅವರ ಉದ್ಯೋಗಕ್ಕೆ ನಮ್ಮ ಸರಕಾರವು ಈಗ ಹೊಸ ಹೊಸ ಯೋಜನೆಯನ್ನು ರೂಪಿಸುತ್ತಿದೆ.
13 ಬಂದರುಗಳಿದ್ದು ಈ ಪೈಕಿ ಭಟ್ಕಳದ ಅಳ್ವೇಕೋಡಿ ಮತ್ತು ತೆಂಗಿನಗುಂಡಿ ಮೇಲ್ದರ್ಜೆಗೆರಿಸಿದ್ದೇನೆ. ಉಳಿದ ಬಂದರುಗಳ ಅಭಿವೃದ್ಧಿ ಮಾಡಿಸುವ ಚಿಂತನೆ ನಡೆಯುತ್ತಿದೆ. ಮಂಗಳೂರಿನಲ್ಲಿ ಈಗಾಗಲೇ ಬಂದರು ನಿರ್ಮಾಣ ಮುಕ್ತಾಯದ ಹಂತದಲ್ಲಿದೆ. ಮುರುಡೇಶ್ವರದಲ್ಲಿ ಒಟ್ಟು 400 ಕೋಟಿ ರೂ. ಬಂದರು ನಿರ್ಮಾಣ ಚಿಂತನೆ ನಡೆದಿದ್ದು, ಈ ಪೈಕಿ ಒಂದು ಕಡೆ ಬಂದರು ಇನ್ನೊಂದು ಕಡೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರ್ಯಯೋಜನೆ ಮಾಡಲಾಗಿದೆ ಎಂದರು.
ನಮ್ಮ ಮೀನುಗಾರರ ಕೈ ಇನ್ನೊಬ್ಬರಿಗೆ ನೀಡುವಂತಿರಬೇಕು . ಅವರು ಸಮುದ್ರಕ್ಕೆ ತೆರಳಿದ ಸಂಧರ್ಭದಲ್ಲಿ ಅವಘಡ ಸಂಭವಿಸಿದರೆ ಅವರ ರಕ್ಷಣೆಗೆ ಸೀ ಅಂಬ್ಯುಲೆನ್ಸ ವ್ಯವಸ್ಥೆ ಮಾಡಿದ್ದು ವೈದ್ಯರು, ನರ್ಸ್ ಗಳ ತಂಡ ಕಾರ್ಯ ನಿರ್ವಹಿಸಲಿದ್ದು ಇದೊಂದು ನನ್ನ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾಗಿದ್ದು ಇದಕ್ಕಾಗಿನಮ್ಮ ಸರಕಾರ 700 ಕೋಟಿ ಮೀಸಲು ಇಟ್ಟಿದ್ದೇವೆ ಎಂದರು.
ನಂತರ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ
ಮೀನುಗಾರರು ಒಂದು ವಿಶ್ವದ ಶಕ್ತಿ. ಅವರು ಒಳನಾಡು ಅಥವಾ ಕರಾವಳಿ ಭಾಗದ ಮೀನುಗಾರರಾಗಿರಬಹುದು. ದೇಶದ ಆಸ್ತಿಯಾಗಿ ಮೀನುಗಾರರು ಅಗ್ರಮಾನ್ಯರು.
ಜಾಗತಿಕ ಮಟ್ಟದಲ್ಲಿ ನಡೆದ ವಿಶ್ವ ಮೀನುಗಾರಿಕೆ ಫೆಡರೇಶನ್ ದೆಹಲಿಯಲ್ಲಿ ಮೀನುಗಾರರಿಗೆ ಅವರ ಕಾರ್ಯಕ್ಕೆ ಅಭೂತಪೂರ್ವ ಗೌರವ ಲಭಿಸಿದೆ. ಜಾಗತಿಕವಾಗಿ ಮೀನುಗಾರರ ಸಮಾಜ ಮುಂದೆ ಬರಬೇಕಿದೆ ಎಂದರು.
ಇತ್ತೀಚಿನ ದಿನದಲ್ಲಿ ನಮ್ಮ ಮೀನುಗಾರರು ಮೀನುಗಾರಿಕೆಗೆ
ಗೋವಾ, ರತ್ನಾಗಿರಿ,ಮಹಾರಾಷ್ಟ್ರ ಭಾಗಕ್ಕೆ ತೆರಳಿದ ಸಮಯದಲ್ಲಿ ಈ ಭಾಗದಲ್ಲಿ ನಮ್ಮ ಮೀನುಗಾರರನ್ನು ಮೀನುಗಾರಿಕೆ ನಡೆಸದಂತೆ ಬಂದಿಸುವುದು ,ತೊಂದರೆ ಕೊಡುವಂತ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಗೋವಾ ಮತ್ತು ಮಹಾರಾಷ್ಟ್ರ ಸರಕಾರ ನೇರ ಹೊಣೆ ಯಾಗಿದೆ.ಬೇರೆ ರಾಜ್ಯದ ಮೀನುಗಾರರಿಗೆ ನಮ್ಮ ಕರ್ನಾಟಕ ಸರಕಾರ ಕರ್ನಾಟಕದ ಯಾವುದೇ ಭಾಗದಲ್ಲಿ ಮೀನುಗಾರಿಕೆ ನಡೆಸಲು ಅವಕಾಶಮಾಡಿದೆ.ಈ ರೀತಿಯಾಗಿ ಎಂದೂ ನಡೆದು ಕೊಳ್ಳುವುದಿಲ್ಲ.ಮೀನುಗಾರರಿಗೆ ಯಾವುದೇ ಸಮಸ್ಯೆ ಮಾಡುತ್ತಿಲ್ಲ.ಮಹಾರಾಷ್ಟ್ರ ಸರಕಾರದ ಕ್ರಮ ಸರಿಯಲ್ಲ. ನಮ್ಮ ಮೀನುಗಾರರಿಗೆ ಅಲ್ಲಿನ ಸರಕಾರದಿಂದ ಸಮಸ್ಯೆಯಾಗದಂತೆ,ನಮ್ಮ ಮುಖ್ಯಮಂತ್ರಿ ಗಳು ಹಾಗೂ ಉಪಮುಖ್ಯಮಂತ್ರಿ ಮದ್ಯ ಪ್ರವೇಶಿಸಿ ಕರ್ನಾಟಕ ಸರಕಾರ ಇದಕ್ಕೆ ಇತೀಶ್ರೀ ಹಾಡಬೇಕು ಎಂದು ವಿನಂತಿಸಿದರು.
ವೇದಿಕೆಯಲ್ಲಿ ಅವಗಡ ಸಂಭವಿಸಿದ ಮೀನುಗಾರರ ಕುಟುಂಬಕ್ಕೆ ಚೆಕ್ ವಿತರಣೆ,ಮೀನುಗಾರಿಕೆಗೆ ಕುರಿತಾದ ಮತ್ಸ್ಯವಾಣಿ, ಮತ್ಸ್ಯ ಸಂದೇಶ ಪುಸ್ತಕ ಬಿಡುಗಡೆ, ಸಹಾಯಕವಾದ ಸಲಕರಣೆ ಕಿಟ್, ಜೀವರಕ್ಷಕ ಕಿಟ್,ಮತ್ಸ್ಯವಾಹಿನಿ ತ್ರಿಚಕ್ರ ವಾಹನ ಗಳನ್ನು ಮೀನುಗಾರರ ಪಲಾನುಭವಿಗಳಿಗೆ ನೀಡಿದರು.
ಮೀನುಗಾರಿಕೆ ಇಲಾಖೆ ಯಿಂದ ಉಪಮುಖ್ಯಮಂತ್ರಿ ಕರ್ನಾಟಕ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಡಗುಂಜಿ ಮಹಾಗಣಪತಿಯ ಪ್ರತಿಮೆ ನೀಡಿ ಗೌರವಿಸಿ ಸನ್ಮಾನಿಸಿದರು.ಡಿ. ಸಿ. ಎಮ್. ಡಿ. ಕೆ ಶಿವಕುಮಾರ್ ಪ್ರತಿಮೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಎಲ್ಲರ ಗಮನ ಸೆಳೆದರು.
ಬಳಿಕ ನೆರವೇರಿದ ಸಂಗೀತ ಕಾರ್ಯಕ್ರಮದಲ್ಲಿ
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ ಜನ್ಯಾ, ಖ್ಯಾತ ನಿರೂಪಕಿ ಅನುಶ್ರೀ, ಖ್ಯಾತ ಗಾಯಕಿ ಶಮೀತಾ ಮಲ್ಯಾಡ್, ದಿವ್ಯ ರಾಮಚಂದ್ರ ಸೇರಿದಂತೆ ಇನ್ನು ಹಲವಾರು ಕಲಾವಿದರಿಂದ ಮನರಂಜನೆ ಕಾರ್ಯಕ್ರಮನಡೆಯಿತು.
ಎಲ್ಲಾ ಕಲಾವಿದರನ್ನು ಸಚಿವರು ಮತ್ತು ಪತ್ನಿ ಪುಷ್ಪಲತಾ ಮಗಳು ಬಿನಾವೈದ್ಯ ಮತ್ತು ಶಾಸಕರಾದ ಸತೀಶ್ ಶೈಲ್,ಭೀಮಣ್ಣ ನಾಯ್ಕ್ ಸನ್ಮಾನಿದರು.
ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ
ವರದಿ ನಾಗೇಶ್ ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆ ಕಡಬ ಬಲ್ಪಗ್ರಾಮ.ಡಿ. 31ರಿಂದ ಜ. 1: ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ, ದೈವಗಳ ನೇಮೋತ್ಸವ – ಆಮಂತ್ರಣ ಪತ್ರ ಬಿಡುಗಡೆ ಸುಬ್ರಹ್ಮಣ್ಯ ನ.22: ಬಳ್ಪ ಗ್ರಾಮದ ಎಣ್ಣೆಮಜಲು, ಗುಂಡಾಜೆ…