ವರದಿ :ಲೋಕೇಶ್ ನಾಯ್ಕ್,ಭಟ್ಕಳ.
ಕಾಚಿಗುಡ – ಮಂಗಳೂರು ರೈಲು ಮುರುಡೇಶ್ವರಕ್ಕೆ ವಿಸ್ತರಣೆ. ಅಕ್ಟೋಬರ್ 12 ಕ್ಕೆ ಮುರುಡೇಶ್ವರದಿಂದ – ತಿರುಪತಿಗೆ ರೈಲು ಸಂಚಾರ ಆರಂಭಿಸಿದ ಭಾರತೀಯ ರೈಲ್ವೆ ಇಲಾಖೆ.
ಭಟ್ಕಳ ಅಕ್ಟೋಬರ್ 12.
ವಿಜಯದಶಮಿಯ ಶುಭ ದಿನದಂದು ಭಾರತೀಯ ರೈಲ್ವೆ ಮುರುಡೇಶ್ವರ ದಿಂದ ತಿರುಪತಿಗೆ ಅಕ್ಟೋಬರ್ 12 ರಿಂದ ರೈಲು ಸೇವೆ ಆರಂಭಗೊಳಿಸಿದ್ದು ಮಧ್ಯಾಹ್ನ 3-20 ಕ್ಕೆ ಮುರುಡೇಶ್ವರ ಜಂಕ್ಷನ್ ನಿಂದ ಹೊರಡುವ ಮುನ್ನ ರೈಲಿಗೆ ಬಾಳೆ ಮತ್ತು ಹೂವಿನ ಹಾರ ದಿಂದ ಅಲಂಕಾರ ಗೊಳಿಸಿ ಪೂಜಾ ಕೈoಕರ್ಯ ವನ್ನು ನೆರವೇರಿಸಿ ಮಾತನಾಡಿದ
ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸಮೀತಿಯ ಸೆಕ್ರೆಟರಿ ರಾಜೀವ ಗಾವoಕರ್ ಹಿರೇಗುತ್ತಿ ಮಾತನಾಡಿ ಉಡುಪಿ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿಯವರ ಸತತ ಪ್ರಯತ್ನ ಹಾಗೂ ಕುಮಟಾ ಶಾಸಕರಾದ ದಿನಕರ ಶೆಟ್ಟಿ ಮತ್ತು ಉತ್ತರ ಕನ್ನಡ ಜಿಲ್ಲೆ ರೈಲು ಸೇವಾ ಸಮಿತಿ ಹಾಗೂ ಕುಂದಾಪುರ ರೈಲ್ವೆ ಹಿತ ರಕ್ಷಣ ಸಮಿತಿ ವತಿಯಿಂದ ಹೋರಾಟದ ಫಲವಾಗಿ ರೈಲು ಮುರುಡೇಶ್ವರ ದವರಿಗೆ ವಿಸ್ತರಣೆ ಯಾಗಿದೆ.
ಕರಾವಳಿಯ ಭಾಗದಲ್ಲಿ ಅಸಂಖ್ಯಾತ ತಿರುಪತಿಯ ತಿಮ್ಮಪ್ಪನ ಭಕ್ತರು ಇದ್ದು ಜನಸಾಮಾನ್ಯರು ಕಡಿಮೆ ಖರ್ಚಿನಲ್ಲಿ ಉತ್ತಮವಾಗಿ ಪ್ರಯಾಣಿಸಿ ತಿರುಪತಿ ದರ್ಶನ ಪಡೆಯಬೇಕು ಎನ್ನುವ ದಶಕಗಳ ಪ್ರಯತ್ನಕ್ಕೆ ಭಾರತೀಯ ರೈಲ್ವೆ ಇಲಾಖೆ ಸಂಚಾರ ಸೇವೆ ಕಲ್ಪಿಸಿದೆ.
ಮುಂದಿನ ಹಂತವಾಗಿ ಕಾರವಾರಕ್ಕೂ ಕೂಡ ಈ ರೈಲ್ವೆ ವಿಸ್ತರಿಸುವಂತೆ ಇಲಾಖೆಗೆ ಮನವಿ ಮಾಡುವಲಾಗುವುದು ಎಂದು ತಿಳಿಸಿದರು.
ಈ ರೈಲು ಮುರುಡೇಶ್ವರ ಜಂಕ್ಷನ್ ನಿಂದ ಕುಂದಾಪುರ ಮಾರ್ಗವಾಗಿ ಮಂಗಳೂರು ಜಂಕ್ಷನಿಗೆ ರಾತ್ರಿ 8 ಗಂಟೆಗೆ ತಲುಪಿ,ತಿರುಪತಿ ಗೆ ರವಿವಾರ ಮುಂಜಾನೆ 11-30 ಕ್ಕೆ ತಿರುಪತಿಯ ರೇಣೀಗುಂಟ ಫ್ಲಾಟ್ ಫಾರ್ಮ್ ಗೆ ತಲುಪಲಿದೆ.ಹಾಗೆಯೇ ರೈಲು ಮುಂದಿನ ಮಾರ್ಗ ವಾಗಿ ಹೈದರಾಬಾದನ ಕಾಚಿಗುಡ ಜಂಕ್ಷನಿಗೆ ಸಂಜೆ 6-00 ಗಂಟೆಗೆ ತಲುಪುವುದು.. ಮುರುಡೇಶ್ವರದಿಂದ ಪ್ರತಿ ಬುಧವಾರ ಮತ್ತು ಶನಿವಾರ ತಿರುಪತಿಗೆ ರೈಲು ಹೋರಡಲಿದೆ.
ಮಂಗಳವಾರ ಮತ್ತು ಶುಕ್ರವಾರ ಹೈದ್ರಾಬಾದಿನಿಂದ ಮುರುಡೇಶ್ವರಕ್ಕೆ ಹೊರಡುವ ರೈಲು ತಿರುಪತಿಯ ರೇಣುಗುಂಟೆ ಫ್ಲಾಟ್ ಫಾರ್ಮ್ ಗೆ ಸಂಜೆ 5 ಗಂಟೆಗೆ ಬರಲಿದ್ದು ಮರುದಿನ ಮದ್ಯಾಹ್ನ 2:00 ಗಂಟೆಗೆ ಮುರುಡೇಶ್ವರಕ್ಕೆ ಗೆ ಬಂದು ತಲುಪಲಿದೆ.
ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ನಾಗರಿಕರು ಭಟ್ಕಳದ ಜನತೆ ಅಭಿನಂದನೆಗಳೊಂದಿಗೆ ಸಂತಸವ್ಯೆಕ್ತ ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿಪ್ರಮುಖರಾದ ಹಿರಿಯ ಎಸ್ ಎಸ್ ಕಾಮತ್.ಜಮೀನ್ದಾರ್ ಕೃಷ್ಣ ನಾಯ್ಕ್, ಬಿಜೆಪಿ ಮುಖಂಡ ಸುಬ್ರಯ ನಾಯ್ಕ್ ತೆರ್ನಮಕ್ಕಿ. ಮಾರುತಿ ನಾಯ್ಕ್ , ಹಾಗೂ ಬಿಜೆಪಿಯ ಸದಸ್ಯರು ಊರ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.