ಮುರುಡೇಶ್ವರದಿಂದ – ತಿರುಪತಿಗೆ  ರೈಲು ಸಂಚಾರ  ಆರಂಭಿಸಿದ ಭಾರತೀಯ ರೈಲ್ವೆ ಇಲಾಖೆ.

ವರದಿ :ಲೋಕೇಶ್ ನಾಯ್ಕ್,ಭಟ್ಕಳ.

ಕಾಚಿಗುಡ – ಮಂಗಳೂರು ರೈಲು ಮುರುಡೇಶ್ವರಕ್ಕೆ ವಿಸ್ತರಣೆ. ಅಕ್ಟೋಬರ್ 12 ಕ್ಕೆ ಮುರುಡೇಶ್ವರದಿಂದ – ತಿರುಪತಿಗೆ  ರೈಲು ಸಂಚಾರ  ಆರಂಭಿಸಿದ ಭಾರತೀಯ ರೈಲ್ವೆ ಇಲಾಖೆ.

ಭಟ್ಕಳ ಅಕ್ಟೋಬರ್ 12.
ವಿಜಯದಶಮಿಯ ಶುಭ ದಿನದಂದು ಭಾರತೀಯ ರೈಲ್ವೆ ಮುರುಡೇಶ್ವರ ದಿಂದ ತಿರುಪತಿಗೆ  ಅಕ್ಟೋಬರ್ 12 ರಿಂದ ರೈಲು ಸೇವೆ ಆರಂಭಗೊಳಿಸಿದ್ದು ಮಧ್ಯಾಹ್ನ 3-20 ಕ್ಕೆ ಮುರುಡೇಶ್ವರ ಜಂಕ್ಷನ್ ನಿಂದ ಹೊರಡುವ ಮುನ್ನ ರೈಲಿಗೆ ಬಾಳೆ ಮತ್ತು ಹೂವಿನ ಹಾರ ದಿಂದ ಅಲಂಕಾರ ಗೊಳಿಸಿ ಪೂಜಾ ಕೈoಕರ್ಯ ವನ್ನು ನೆರವೇರಿಸಿ ಮಾತನಾಡಿದ
ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸಮೀತಿಯ ಸೆಕ್ರೆಟರಿ ರಾಜೀವ ಗಾವoಕರ್ ಹಿರೇಗುತ್ತಿ ಮಾತನಾಡಿ  ಉಡುಪಿ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿಯವರ ಸತತ ಪ್ರಯತ್ನ ಹಾಗೂ  ಕುಮಟಾ ಶಾಸಕರಾದ ದಿನಕರ ಶೆಟ್ಟಿ ಮತ್ತು ಉತ್ತರ ಕನ್ನಡ ಜಿಲ್ಲೆ ರೈಲು ಸೇವಾ ಸಮಿತಿ ಹಾಗೂ ಕುಂದಾಪುರ ರೈಲ್ವೆ ಹಿತ ರಕ್ಷಣ ಸಮಿತಿ ವತಿಯಿಂದ  ಹೋರಾಟದ ಫಲವಾಗಿ ರೈಲು ಮುರುಡೇಶ್ವರ ದವರಿಗೆ ವಿಸ್ತರಣೆ ಯಾಗಿದೆ.

ಕರಾವಳಿಯ ಭಾಗದಲ್ಲಿ ಅಸಂಖ್ಯಾತ ತಿರುಪತಿಯ ತಿಮ್ಮಪ್ಪನ ಭಕ್ತರು ಇದ್ದು ಜನಸಾಮಾನ್ಯರು ಕಡಿಮೆ ಖರ್ಚಿನಲ್ಲಿ ಉತ್ತಮವಾಗಿ ಪ್ರಯಾಣಿಸಿ ತಿರುಪತಿ ದರ್ಶನ ಪಡೆಯಬೇಕು ಎನ್ನುವ ದಶಕಗಳ ಪ್ರಯತ್ನಕ್ಕೆ ಭಾರತೀಯ ರೈಲ್ವೆ ಇಲಾಖೆ  ಸಂಚಾರ ಸೇವೆ ಕಲ್ಪಿಸಿದೆ.

ಮುಂದಿನ ಹಂತವಾಗಿ ಕಾರವಾರಕ್ಕೂ ಕೂಡ ಈ ರೈಲ್ವೆ ವಿಸ್ತರಿಸುವಂತೆ ಇಲಾಖೆಗೆ ಮನವಿ ಮಾಡುವಲಾಗುವುದು ಎಂದು ತಿಳಿಸಿದರು.

ಈ ರೈಲು ಮುರುಡೇಶ್ವರ ಜಂಕ್ಷನ್ ನಿಂದ ಕುಂದಾಪುರ ಮಾರ್ಗವಾಗಿ ಮಂಗಳೂರು ಜಂಕ್ಷನಿಗೆ ರಾತ್ರಿ 8 ಗಂಟೆಗೆ ತಲುಪಿ,ತಿರುಪತಿ ಗೆ ರವಿವಾರ ಮುಂಜಾನೆ 11-30 ಕ್ಕೆ ತಿರುಪತಿಯ ರೇಣೀಗುಂಟ ಫ್ಲಾಟ್ ಫಾರ್ಮ್  ಗೆ ತಲುಪಲಿದೆ.ಹಾಗೆಯೇ ರೈಲು  ಮುಂದಿನ ಮಾರ್ಗ ವಾಗಿ ಹೈದರಾಬಾದನ  ಕಾಚಿಗುಡ ಜಂಕ್ಷನಿಗೆ  ಸಂಜೆ 6-00 ಗಂಟೆಗೆ ತಲುಪುವುದು.. ಮುರುಡೇಶ್ವರದಿಂದ ಪ್ರತಿ ಬುಧವಾರ ಮತ್ತು ಶನಿವಾರ ತಿರುಪತಿಗೆ  ರೈಲು ಹೋರಡಲಿದೆ.

ಮಂಗಳವಾರ ಮತ್ತು ಶುಕ್ರವಾರ ಹೈದ್ರಾಬಾದಿನಿಂದ ಮುರುಡೇಶ್ವರಕ್ಕೆ ಹೊರಡುವ ರೈಲು  ತಿರುಪತಿಯ ರೇಣುಗುಂಟೆ ಫ್ಲಾಟ್ ಫಾರ್ಮ್ ಗೆ  ಸಂಜೆ 5 ಗಂಟೆಗೆ  ಬರಲಿದ್ದು ಮರುದಿನ ಮದ್ಯಾಹ್ನ 2:00 ಗಂಟೆಗೆ ಮುರುಡೇಶ್ವರಕ್ಕೆ ಗೆ ಬಂದು ತಲುಪಲಿದೆ.

ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ನಾಗರಿಕರು ಭಟ್ಕಳದ ಜನತೆ ಅಭಿನಂದನೆಗಳೊಂದಿಗೆ ಸಂತಸವ್ಯೆಕ್ತ ಪಡಿಸಿದ್ದಾರೆ.

ಈ ಸಂದರ್ಭದಲ್ಲಿ  ಬಿಜೆಪಿಪ್ರಮುಖರಾದ ಹಿರಿಯ ಎಸ್ ಎಸ್ ಕಾಮತ್.ಜಮೀನ್ದಾರ್ ಕೃಷ್ಣ ನಾಯ್ಕ್, ಬಿಜೆಪಿ ಮುಖಂಡ ಸುಬ್ರಯ ನಾಯ್ಕ್ ತೆರ್ನಮಕ್ಕಿ. ಮಾರುತಿ ನಾಯ್ಕ್ , ಹಾಗೂ ಬಿಜೆಪಿಯ  ಸದಸ್ಯರು ಊರ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ

    ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್‌ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…

    ನಟ ಡಾಲಿ ಧನಂಜಯ ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್

    ವರದಿ: ಲೋಕೇಶ್ ನಾಯ್ಕ.ಭಟ್ಕಳ. ನಟ ಡಾಲಿ ಧನಂಜಯ  ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್. ಭಟ್ಕಳ: ನ.23ಮುರುಡೇಶ್ವರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿಶ್ವ ಮೀನುಗಾರಿಕಾ ದಿನಾಚರಣೆ(ಮತ್ರ್ಯಮೇಳ) ಕಾರ್ಯಕ್ರಮಕ್ಕೆ ಶನಿವಾರ ಆಗಮಿಸಿದ ಡಾಲಿ ಧನ ಧನಂಜಯ ನೇತ್ರಾಣಿ ದ್ವೀಪದಲ್ಲಿ ಸ್ಕೂಬ್ ಡೈವಿಂಗ್ ಮಾಡುವ…

    You Missed

    ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ

    ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ

    ನಟ ಡಾಲಿ ಧನಂಜಯ ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್

    ನಟ ಡಾಲಿ ಧನಂಜಯ ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ