ಜೆಡಿಎಸ್ ನಿಂದ ನೂತನ ಶಾಸಕ ಡಾ.ಧನಂಜಯ ಸರ್ಜಿ ಅವರಿಗೆ ಅದ್ಧೂರಿ ಸನ್ಮಾನ

ಡಾ.ಸರ್ಜಿ ಯವರು ಜನ ಮೆಚ್ಚುವ ಕೆಲಸ ಮಾಡಬಲ್ಲರು : ಕೆ.ಬಿ.ಪ್ರಸನ್ನಕುಮಾರ್

ಶಿವಮೊಗ್ಗ : ಜೂ 8

ವಿಧಾನ ಪರಿಷತ್ ಸದಸ್ಯರಾಗಿ ನೂತನವಾಗಿ ಆಯ್ಕೆಯಾಗಿರುವ ಡಾ.ಧನಂಜಯ ಸರ್ಜಿ ಅವರು ಜನ ಮೆಚ್ಚುವಂತೆ ಸೇವೆ ಸಲ್ಲಿಸುವ ಮೂಲಕ ಪದವೀಧರರು ಹಾಗೂ ಜನರ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.


ಜಿಲ್ಲಾ ಜಾತ್ಯಾತೀತ ಜನತಾ ದಳ ವತಿಯಿಂದ ಶನಿವಾರ ವಿಧಾನ ಪರಿಷತ್ ಗೆ ಆಯ್ಕೆಯಾದ ಶಾಸಕ ಧನಂಜಯ ಸರ್ಜಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಉತ್ತಮ ಸಾಧನೆಯೊಂದಿಗೆ ಜನ ಮಾನಸದಲ್ಲಿರುವ ಡಾ.ಸರ್ಜಿ ಅವರು ಮುಂದಿನ ದಿನಗಳಲ್ಲಿಯೂ ಉತ್ತಮ ಸೇವೆ ಸಲ್ಲಿಸುತ್ತಾರೆ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.


ಅಬಿನಂದನೆ ಸ್ವೀಕರಿಸಿ ಮಾತನಾಡಿದ ನೂತ ಶಾಸಕ ಡಾ.ಧನಂಜಯ ಸರ್ಜಿ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯೊಂದಿಗೆ ಇದು ಕಾರ್ಯಕರ್ತರ ಗೆಲುವು, ಪದವೀಧರರ ಗೆಲುವು, ಜೆಡಿಎಸ್, ಬಿಜೆಪಿ ಮೈತ್ರಿ ಶಕ್ತಿಯ ಗೆಲುವು, ಎಲ್ಲರ ಹಿರಿಯರ ಸಲಹೆ, ಸೂಚನೆ, ಮಾರ್ಗದರ್ಶನ ಪಡೆದು ಪರಿಷತ್ ನಲ್ಲಿ ಪದವೀಧರರ ಧ್ವನಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಹೇಳಿದರು.


ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್, ಗೋಪಾಲ್ ಅವರು, ಶಿಕ್ಷಕ ಕ್ಷೇತ್ರದಿಂದ ಆಯ್ಕೆಯಾದ ಎಸ್.ಎಲ್..ಬೋಜೇಗೌಡರು ಹಾಗೂ ಡಾ.ಧನಂಜಯ ಸರ್ಜಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಕಡಿದಾಳ್ ಗೋಪಾಲ್, ಕಾರ್ಯಾಧ್ಯಕ್ಷರಾದ ರಾಮಕೃಷ್ಣ, ಮಹಾ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ಯುವ ಜನತಾ ದಳ ಅಧ್ಯಕ್ಷ ಮಧು ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಎಸ್ ಸಿ ಘಟಕ ಜಿಲ್ಲಾಧ್ಯಕ್ಷ ಕಾಂತರಾಜ್, ನಗರಾಧ್ಯಕ್ಷ ದೀಪಕ್ ಸಿಂಗ್, ಜಿಲ್ಲಾ ವಕ್ತಾರ ನರಸಿಂಹ ಗಂಧದಮನೆ, ಯುವ ಜನತಾ ಜಿಲ್ಲಾ ಕಾರ್ಯಾಧ್ಯಕ್ಷ ನಿಖಿಲ್, ಮಾಜಿ ಎಪಿಎಂಸಿ ಉಪಾಧ್ಯಕ್ಷ ಮಹೇಶ್, ಮುಖಂಡ ವಿನಯ ಕುಮಾರ್, ಮಾಜಿ ನಗರ ಸಭಾ ಸದಸ್ಯ ಮಂಜುನಾಥ್, ವಿನಯ್, ಗೋಪಿ ಹಾಜರಿದ್ದರು.

ವರದಿ : ಮೆಟ್ರೋ ನ್ಯೂಸ್

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ಅಪ್ಪನ ನೀತಿ ನಮ್ಮ ಬದುಕಿನ ರೀತಿ

    *”ಅಪ್ಪನ ನೀತಿ ನಮ್ಮ ಬದುಕಿನ ರೀತಿ “* ಅಪ್ಪ ಎನ್ನುವ ಪದ ಕೇವಲ ಎರಡಕ್ಷರದ ಪದವಲ್ಲ ಒಂದು ಮನೆ ಮನಸುಗಳ ಜೀವಾಳ… ಮಕ್ಕಳ ಭಾವಂತರಾಳ. ನನ್ನಪ್ಪ ನನ್ನಯ ಜೀವನದ ಮೊದಲ ದೇವರು, ದೇವರೆಂದರೆ ಸರ್ವವನ್ನು ಒಳಗೊಂಡಿರುವ ಸಂಪೂರ್ಣ ಆಕಾರ. ನನ್ನಪ್ಪ ನನ್ನ…

    2022 ಮತ್ತು 23ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದ ವಲಯ ಅರಣ್ಯ ಅಧಿಕಾರಿಗಳು

    ಶಿವಮೊಗ್ಗ ಜೂ 15ಶಿಕಾರಿಪುರದಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರೇವಣಸಿದ್ದಯ್ಯ ಬಿ. ಹಿರೇಮಠ ಅವರಿಗೆ  2023ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಣೆ ಆಗಿದೆ. ಅರಣ್ಯ ಇಲಾಖೆಯ ಸಂಶೋಧನಾ ವಿಭಾಗದಲ್ಲಿ ರೇವಣಸಿದ್ದಯ್ಯ ಅವರು ಮಾಡಿರುವ ಸಾಧನೆಗಾಗಿ  ಈ ಪದಕ ಘೋಷಣೆ ಆಗಿದೆ.ಬೆಂಗಳೂರಿನಲ್ಲಿ …

    You Missed

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಷಷ್ಠಿ ಕುರಿತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಭೆ

    ಷಷ್ಠಿ ಕುರಿತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಭೆ

    ಇನ್ನೋವಾ ಕಾರಿಗೆ ಇನ್ಸುಲೇಟರ್ ಮೀನು ಗಾಡಿ ಡಿಕ್ಕಿ ನಾಲ್ವರ ಸ್ಥಿತಿ ಗಂಭೀರ…!

    ಇನ್ನೋವಾ ಕಾರಿಗೆ ಇನ್ಸುಲೇಟರ್ ಮೀನು ಗಾಡಿ ಡಿಕ್ಕಿ ನಾಲ್ವರ ಸ್ಥಿತಿ ಗಂಭೀರ…!

    ಕುಂದಾಪುರ ತಾಲ್ಲೂಕು ದಂಡಾಧಿಕಾರಿ ಶೋಭಾ ಲಕ್ಷ್ಮಿ  ಕರ್ತವ್ಯ ನಿರ್ವಹಿಸದೆ ಹೈಡ್ರಾಮ  ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿ ಇಲ್ಲದೆ ಅಧಿಕಾರಿಗಳಿಂದ ಪಂಗನಾಮ…!  

    ಕುಂದಾಪುರ ತಾಲ್ಲೂಕು ದಂಡಾಧಿಕಾರಿ ಶೋಭಾ ಲಕ್ಷ್ಮಿ  ಕರ್ತವ್ಯ ನಿರ್ವಹಿಸದೆ ಹೈಡ್ರಾಮ  ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿ ಇಲ್ಲದೆ ಅಧಿಕಾರಿಗಳಿಂದ ಪಂಗನಾಮ…!  

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ