2022 ಮತ್ತು 23ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದ ವಲಯ ಅರಣ್ಯ ಅಧಿಕಾರಿಗಳು


ಶಿವಮೊಗ್ಗ ಜೂ 15
ಶಿಕಾರಿಪುರದಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರೇವಣಸಿದ್ದಯ್ಯ ಬಿ. ಹಿರೇಮಠ ಅವರಿಗೆ  2023ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಣೆ ಆಗಿದೆ. ಅರಣ್ಯ ಇಲಾಖೆಯ ಸಂಶೋಧನಾ ವಿಭಾಗದಲ್ಲಿ ರೇವಣಸಿದ್ದಯ್ಯ ಅವರು ಮಾಡಿರುವ ಸಾಧನೆಗಾಗಿ  ಈ ಪದಕ ಘೋಷಣೆ ಆಗಿದೆ.
ಬೆಂಗಳೂರಿನಲ್ಲಿ  ಶೀಘ್ರದಲ್ಲೇ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಈ ಪದಕ ಪ್ರದಾನ ಮಾಡಲಿದ್ದಾರೆ.

ಅರಣ್ಯ ಸಂರಕ್ಷಣೆ, ಅಕ್ರಮ ಕಡಿತಲೆ ತಡೆಗಟ್ಟುವಿಕೆ, ವನ್ಯಜೀವಿ ಸಂರಕ್ಷಣೆ, ಸಂಶೋಧನೆ, ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸುವುದು, ನೆಡುತೋಪು ಬೆಳಸುವಂತಹ ಸಾಧನೆ, ಅಭಿವೃದ್ಧಿ ಕಾರ್ಯಗಳು, ಮಾನವ ಪ್ರಾಣಿ ಸಂಘರ್ಷ ಹಾಗೂ ಇತರೆ ನವೀನ ಆಲೋಚನೆಗಳನ್ನು ಉಪಯೋಗಿಸಿರುವ ಇತ್ಯಾದಿ ಕೆಲಸ ಕಾರ್ಯಗಳ ಮೂಲಕ ಗಣನೀಯ ಸಾಧನೆ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗೆ ಪ್ರತಿವರ್ಷ ಚಿನ್ನದ ಪದಕ ನೀಡಲಾಗುತ್ತದೆ.


ಮಂಡಗದ್ದೆ ವಲಯ ಅರಣ್ಯಾಧಿಕಾರಿ ಆದರ್ಶ ರವರಿಗೆ ಮುಖ್ಯಮಂತ್ರಿಯ ಚಿನ್ನದ ಪದಕದ ಪುರಸ್ಕಾರ

ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಆದರ್ಶ್ ರವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ 2022– 23ನೇ ಸಾಲಿನ ಚಿನ್ನದ ಪದಕದ ಪುರಸ್ಕಾರವನ್ನು ನೀಡಿ ಘೋಷಣೆ ಮಾಡಲಾಗಿದೆ.

ವಲಯ ಅರಣ್ಯ ಅಧಿಕಾರಿ ಆದರ್ಶ್ ಅವರು ಈ ಹಿಂದೆ ಹೊಸನಗರ ತಾಲೂಕಿನ ಹೊಸನಗರ ,ನಗರದ ವಲಯ ಅರಣ್ಯ ಅಧಿಕಾರಿ ಸೇವೆ ಸಲ್ಲಿಸಿ ಕಳೆದ ಎರಡು ವರ್ಷಗಳಿಂದ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ .ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಅರಣ್ಯ ಮತ್ತು ಅರಣ್ಯ ಭೂಮಿ ಸಂರಕ್ಷಣೆ, ನೈಸರ್ಗಿಕವಾಗಿರುವ ಅರಣ್ಯ ಪುನರುತ್ಪತ್ತಿ ಸೇರಿದಂತೆ ಹತ್ತಾರು ಉತ್ತಮ ಕೆಲಸ ಮಾಡಿದ ವಿಷಯಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಮಂಡಗದ್ದೆಯ ವಲಯ ಅರಣ್ಯ ಅಧಿಕಾರಿ ಯಾಗಿ ಆದರ್ಶ್ ರವರು ಅರಣ್ಯ ಮತ್ತು ಅರಣ್ಯ ಭೂಮಿಯನ್ನು ಸಂರಕ್ಷಣೆ ಮಾಡುವುದರ ಜೊತೆಯಲ್ಲಿ ಅನೇಕ ಭೂ ಒತ್ತುವರಿ, ಕಬಳಿಕೆಯನ್ನು ಪತ್ತೆ ಹಚ್ಚಿ ಕ್ರಮ ಜರುಗಿಸುವುದರೊಂದಿಗೆ ಹೊಸ  ಒತ್ತುವರಿಗಳನ್ನು ತೆರವುಗೊಳಿಸುವುದು ಹಿಂದಿನ ಒತ್ತುವರಿ ,ಕಬಳಿಕೆಗಳನ್ನು ನ್ಯಾಯಾಲಯದಲ್ಲಿ ಮತ್ತು ಇಲಾಖೆಯ ಮಟ್ಟದಲ್ಲಿ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಕ್ರಮ ಜರುಗಿಸಲು ಮುಂದಾಗಿದ್ದರು

ಅರಣ್ಯ ಭೂಮಿಯ  ಅಕ್ರಮ ಮರ ಕಡತಲೆ, ವನ್ಯಜೀವಿಗಳ ಬೇಟೆಯಾಡಿ ಪ್ರಾಣಿ ಗಳ ಹತ್ತೆ, ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಮರಳು, ಮಣ್ಣು ತೆಗೆದು ಸಾಗಿಸುವುದು ಮುಂತಾದ ಅನೇಕ ಗಂಭೀರ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಿಸುವುದರ ಜೊತೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದನ್ನು ಸರ್ಕಾರ ಪರಿಗಣಿಸಿ ಶ್ರೀಯುತರಿಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ  ಪುರಸ್ಕಾರವನ್ನು ನೀಡಿ ಘೋಷಣೆ ಮಾಡಿರುತ್ತದೆ.

ಆದರ್ಶರವರು ಮಂಡ್ಯ ಜಿಲ್ಲೆಯ ನಾಗಮಂಗಲ ,ಶಿವಮೊಗ್ಗ ಹೊಸನಗರ ,ನಗರ ಮುಂತಾದ ಊರುಗಳಲ್ಲಿ ಅರಣ್ಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು .

ಶ್ರೀಯುತರಿಗೆ ರಾಜ್ಯ ಮುಖ್ಯ ಮಂತ್ರಿಗಳ ಚಿನ್ನದ ಪದಕ ಲಭಿಸಿರುವುದು ತೀರ್ಥಹಳ್ಳಿಯ ಹೆಮ್ಮೆಯ ವಿಚಾರವಾಗಿದ್ದು ತೀರ್ಥಹಳ್ಳಿಗೆ ಮತ್ತು ಅರಣ್ಯ ಇಲಾಖೆಗೆ ರಾಜ್ಯಮಟ್ಟದಲ್ಲಿ ಮತ್ತೊಂದು ಕಿರೀಟ ಮತ್ತು ಗೌರವ ಲಭಿಸಿದಂತಾಗಿದೆ.

ವರದಿ : ಮೆಟ್ರೋ ನ್ಯೂಸ್

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ಅಪ್ಪನ ನೀತಿ ನಮ್ಮ ಬದುಕಿನ ರೀತಿ

    *”ಅಪ್ಪನ ನೀತಿ ನಮ್ಮ ಬದುಕಿನ ರೀತಿ “* ಅಪ್ಪ ಎನ್ನುವ ಪದ ಕೇವಲ ಎರಡಕ್ಷರದ ಪದವಲ್ಲ ಒಂದು ಮನೆ ಮನಸುಗಳ ಜೀವಾಳ… ಮಕ್ಕಳ ಭಾವಂತರಾಳ. ನನ್ನಪ್ಪ ನನ್ನಯ ಜೀವನದ ಮೊದಲ ದೇವರು, ದೇವರೆಂದರೆ ಸರ್ವವನ್ನು ಒಳಗೊಂಡಿರುವ ಸಂಪೂರ್ಣ ಆಕಾರ. ನನ್ನಪ್ಪ ನನ್ನ…

    ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ ಯವರಿಂದ ಆಶೀರ್ವಾದ ಪಡೆದ ನೂತನ ಸಂಸದ ಬಿ ವೈ ಆರ್

    ಶಿವಮೊಗ್ಗ  ಜೂ 13ಶಿಕಾರಿಪುರದ ಕಾಳೇನಹಳ್ಳಿ-ಕಪ್ಪನಹಳ್ಳಿ ಶಿವಯೋಗಾಶ್ರಮದ ಪರಮ ಪೂಜ್ಯರಾದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅವರನ್ನು ಶ್ರೀಮಠದಲ್ಲಿ ಭೇಟಿ ಮಾಡಿ ಮಠದ ವತಿಯಿಂದ ಅಭಿನಂದನೆ ಸ್ವೀಕರಿಸಿ ಪೂಜ್ಯರ ದಿವ್ಯಾಶೀರ್ವಾದ ಪಡೆದುಕೊಂಡ ಬಿ ವೈ ರಾಘವೇಂದ್ರ ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ…

    You Missed

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಷಷ್ಠಿ ಕುರಿತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಭೆ

    ಷಷ್ಠಿ ಕುರಿತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಭೆ

    ಇನ್ನೋವಾ ಕಾರಿಗೆ ಇನ್ಸುಲೇಟರ್ ಮೀನು ಗಾಡಿ ಡಿಕ್ಕಿ ನಾಲ್ವರ ಸ್ಥಿತಿ ಗಂಭೀರ…!

    ಇನ್ನೋವಾ ಕಾರಿಗೆ ಇನ್ಸುಲೇಟರ್ ಮೀನು ಗಾಡಿ ಡಿಕ್ಕಿ ನಾಲ್ವರ ಸ್ಥಿತಿ ಗಂಭೀರ…!

    ಕುಂದಾಪುರ ತಾಲ್ಲೂಕು ದಂಡಾಧಿಕಾರಿ ಶೋಭಾ ಲಕ್ಷ್ಮಿ  ಕರ್ತವ್ಯ ನಿರ್ವಹಿಸದೆ ಹೈಡ್ರಾಮ  ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿ ಇಲ್ಲದೆ ಅಧಿಕಾರಿಗಳಿಂದ ಪಂಗನಾಮ…!  

    ಕುಂದಾಪುರ ತಾಲ್ಲೂಕು ದಂಡಾಧಿಕಾರಿ ಶೋಭಾ ಲಕ್ಷ್ಮಿ  ಕರ್ತವ್ಯ ನಿರ್ವಹಿಸದೆ ಹೈಡ್ರಾಮ  ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿ ಇಲ್ಲದೆ ಅಧಿಕಾರಿಗಳಿಂದ ಪಂಗನಾಮ…!  

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ