ಅಪ್ಪನ ನೀತಿ ನಮ್ಮ ಬದುಕಿನ ರೀತಿ

*”ಅಪ್ಪನ ನೀತಿ ನಮ್ಮ ಬದುಕಿನ ರೀತಿ “*

ಅಪ್ಪ ಎನ್ನುವ ಪದ ಕೇವಲ ಎರಡಕ್ಷರದ ಪದವಲ್ಲ ಒಂದು ಮನೆ ಮನಸುಗಳ ಜೀವಾಳ… ಮಕ್ಕಳ ಭಾವಂತರಾಳ. ನನ್ನಪ್ಪ ನನ್ನಯ ಜೀವನದ ಮೊದಲ ದೇವರು, ದೇವರೆಂದರೆ ಸರ್ವವನ್ನು ಒಳಗೊಂಡಿರುವ ಸಂಪೂರ್ಣ ಆಕಾರ. ನನ್ನಪ್ಪ ನನ್ನ ದೃಷ್ಟಿಯ ಪರಿಪೂರ್ಣ ವ್ಯಕ್ತಿತ್ವ

ಮಗಳಿಗೆ ಅಪ್ಪಂನೆಂದರೆ ಎಲ್ಲಿಲ್ಲದ ಅಕ್ಕರೆ, ಪ್ರೀತಿ, ನಂಬಿಕೆ ಹಾಗೆಯೇ ನನಗೂ ಕೂಡ. ನನ್ನಪ್ಪ ನನ್ನೆಲ್ಲಾ ರೀತಿ ನೀತಿಯ ರೂವಾರಿ, ಸಲಹೆಗಾರ. ಅಂತಹ ನನ್ನಪ್ಪನೊಂದಿಗೆ ನಾನಿರುವುದು ಮಲೆನಾಡಿನ ಒಂದು ಪುಟ್ಟ ಊರು.
ನನ್ನದು ಮಲೆನಾಡಿನ ಒಂದು ಪುಟ್ಟೂರು. ಸುತ್ತಮುತ್ತಲ ದಟ್ಟ ಕಾಡು ಬೆಟ್ಟಗಳ ಮಧ್ಯ ಇರುವ ಒಂದು ಅಪ್ಪಟ ಮಲೆನಾಡಿನ ಹಳ್ಳಿ. ಇಲ್ಲಿ ಇಂದಿನಷ್ಟು ಉತ್ತಮವಾಗಿ ಅಂದಿನ ದಿನಮಾನಗಳಲ್ಲಿ ಬದುಕುವುದು ಸಾಧ್ಯವಿರಲಿಲ್ಲ ಮಳೆಗಾಲವಂತು ಹೇಳತೀರದು. ಬಿಡದೇ ಸುರಿವ ಮಳೆ,  ಉಕ್ಕಿ ಹರಿವ ನದಿಗಳು, ರಕ್ತ ಹೀರುವ ಜಿಗಣೆ, ,ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳು,ವಾರಗಟ್ಟಲೆ ಇಲ್ಲದ ಕರೆಂಟ್  ಇದೆಲ್ಲದರೊಂದಿಗೆ ನಮ್ಮ ಬಾಲ್ಯದ ಬದುಕಾಗಿತ್ತು.

ಇಂತಹ ಅದಮ್ಯ ಸ್ಥಿತಿಯಲ್ಲಿ ಒಂದು ದಿನವೂ ಕೂಡ ನಮ್ಮನ್ನ ಶಾಲೆಗೆ ರಜೆ ಹಾಕಲು ಬಿಡದೆ ಎತ್ತಿಕೊಂಡೆ ಹೋಗಿ ಶಾಲೆಗೆ ಬಿಡುತ್ತಿದ್ದರು ಅಪ್ಪ. ಒಂದು ವೇಳೆ ಮೇಷ್ಟ್ರು ಬರ್ಲಿಲ್ಲ ಅಂದ್ರೆ ಸಂಜೆ ಅಪ್ಪನೇ ಮೆರ್ಷ್ಟಗಿ ವರ್ಣಮಾಲೆಯಿಂದ ಗುಣಕಾರದ ವರೆಗೂ ಎಲ್ಲವನ್ನು ಬಿಟ್ಟುಬಿಡದೆ ಹೇಳಿಕೊಡುತ್ತಿದ್ದರು ನನ್ನಪ್ಪ.  ಚಿಕ್ಕಂದಿನಿಂದಲೇ ಅಪ್ಪನೊಂದಿಗೆ ಕಲಿತ ಜೀವನ ಪಾಠಗಳು ಇಂದಿನ ಜೀವನಕ್ಕೆ ನಾಂದಿಯಾಗಿವೆ.
ಆಗ ಕೇವಲ ಐದನೇ ತರಗತಿಯವರೆಗಷ್ಟೇ ನಮ್ಮೂರಲ್ಲಿ ಶಾಲೆಯಿತ್ತು ಮುಂದಿನ ದಿನಗಳನ್ನು ಅಂದಿನಿಂದ ಇಂದಿನ ವರೆಗೂ ಹಾಸ್ಟೆಲ್ನಲ್ಲಿಯೇ. ಆಗ ಮನೆಯಲ್ಲಿ ಏನೇ ಮಾಡಿದ್ರು ಅಪ್ಪ ನಮಗೆ ತೊಗೊಂಡು ಬಂದು ಬಿಡ್ತಿದ್ರು. ಏನಿಲ್ಲಾ ಅಂದ್ರು ರೊಟ್ಟಿನಾದ್ರು ಮಾಡ್ಸಿ ತರೋರು ಅಪ್ಪ. ಅಪ್ಪನ ಪ್ರೀತಿ ಅಕ್ಕರೆಯ ಮುಂದೆ ಬೇರೇನೂ ಹೆಚ್ಚು ಎಂದು ಇಂದಿನವರೆಗೂ ಅನಿಸಲೇ ಇಲ್ಲ.


ಅಪ್ಪ ಹೆಚ್ಚೆನೂ ಓದಿಲ್ಲವಾದರೂ ಅಂದಿನ ಕಾಲದಲ್ಲಿಯೇ ಪಿಯುಸಿ ಓದಿದ್ದರೂ ಮನೆಯಲ್ಲಿನ ಸಮಸ್ಯೆಗಳಿಂದಾಗಿ ಮುಂದೆ ಓದಲಿಲ್ಲವಾದರೂ ಇಂದಿನ ಉನ್ನತ ಪದವಿ ಪಡೆದವರಿಗಿಂತ ಏನೂ ನನ್ನಪ್ಪ ಕಡಿಮೆ ಇಲ್ಲ.

ಮುಂದೆ ಸಾವಿರ ಜನ ಇದ್ದರೂ ಧೈರ್ಯವಾಗಿ, ಸ್ಪಷ್ಟವಾಗಿ, ಸರಳವಾಗಿ ತಮ್ಮ ಮಾತಿನ ಮೂಲಕ ಅವರನ್ನೆಲ್ಲ ಮಂತ್ರಮುಗ್ದವಾಗಿಸಬಲ್ಲರು. ಅಪ್ಪನಲ್ಲಿ ಇರುವ ಹೊಸ ವಿಷಯಗಳನ್ನು ಕಲಿಯುವ ಉತ್ಸಾಹ ಎಲ್ಲವೂ ಒಂದು ರೀತಿಯ ಅದ್ಭುತವೆನಿಸುತ್ತದೆ.

ನನ್ನಪ್ಪನನ್ನು ನೋಡಿದಾಗೆಲ್ಲ ನನಗನ್ನಿಸುವುದು ಒಂದೇ, ಛಲವೊಂದಿದ್ದರೆ ವಿದ್ಯೆ ಯಾರಪ್ಪನ ಸ್ವತ್ತು ಅಲ್ಲ ಎಂಬುದು.
ನನ್ನಪ್ಪ ಕ್ರಿಯಾಶೀಲ ವ್ಯಕ್ತಿತ್ವದ ಸರಳ ವ್ಯಕ್ತಿ. ನಾನು ಪದವಿಯಲ್ಲಿ ಕಲಿತಿದ್ದಕ್ಕಿಂತ ನನ್ನಪ್ಪನನ್ನು ನೋಡಿ ಕಲಿತದ್ದೇ ಹೆಚ್ಚು.

ಅಪ್ಪ ಒಂದು ದಿನವೂ ಕೂಡ ತನ್ನ ಕಷ್ಟವನ್ನು ನೇರವಾಗಿ ನಮ್ಮೊಂದಿಗೆ ಹೇಳುತ್ತಿರಲಿಲ್ಲ ಆದರೆ ತನ್ನ ಮಕ್ಕಳಿಗೆ ಕಷ್ಟದ ಪರಿಚಯವಿಲ್ಲದೆ ಬೆಳೆಸಬಾರದೆಂಬ ತಿಳುವಳಿಕೆಯಿತ್ತಾದ್ದರಿಂದ ಒತ್ತಡವಾಗದಂತೆ ಅರ್ಥೈಸುತ್ತಿದ್ದರು.

ನನ್ನಪ್ಪ ಲತ್ತೆಯ ಏಟನ್ನು ಕೊಟ್ಟದ್ದಕಿಂತ ಬುದ್ದಿಮಾತಿನ ಏಟನ್ನು ಕೊಟ್ಟದ್ದೇ ಜಾಸ್ತಿ. ಆ ಏಟುಗಳೇ ಇಂದು ನಮಗೆ ಎಲ್ಲವನ್ನು ಎದುರಿಸುವ ಶಕ್ತಿಯನ್ನು ನೀಡಿವೆ ನಮ್ಮೆಲ್ಲ ಹೆಜ್ಜೆಗೆ ಭದ್ರ ಬುನಾದಿಯಾಗಿವೆ. ಇಂದಿಗೂ ಕೂಡ ನನ್ನಪ್ಪ ಹೇಳುವ ಮಾತುಗಳೆ  ವೇದವಾಕ್ಯ ಎನಿಸುತ್ತದೆ. ಅಂದಿನಷ್ಟೇ ಅಕ್ಕರೆ, ಪ್ರೀತಿ, ವಿಶ್ವಾಸ, ನಂಬಿಕೆ, ದೃಢತೆ ಅಪ್ಪನಲ್ಲಿದೆ. ಈ ಎಲ್ಲ ಗುಣಗಳೇ ಇಂದು ಅವಕಾಶಗಳು ಅಪ್ಪನನ್ನು ಹುಡುಕಿಬರುವಂತೆ ಮಾಡಿವೆ.

ಇಂದಿಗೂ ಕೂಡ ಅಪ್ಪನ ತತ್ವಗಳು ಬದಲಾಗಿಲ್ಲ. ಬದುಕಿನ ರೀತಿ ಕಾಲಕ್ಕೆ ತಕ್ಕಂತೆ ಬದಲಾದರು ನೀತಿ ಎಂದಿನಂತೆಯೇ ಇದೆ. ಅವೇ ನಮ್ಮ ಜೀವನಕ್ಕೂ ಆದರ್ಶವಾಗಿವೆ. ಅಪ್ಪ ಪದಗಳಿಗೆ ಸಿಗಲಾರದಷ್ಟು ಅನಂತದ ಆನಂದ.  ನನ್ನ ಅಪ್ಪ ಕೇಳಿದ್ದೆಲ್ಲವನ್ನು ಕೊಡಿಸುವ ಸಾಹುಕಾರ ವರ್ಣನೆಗೆ ಸಿಗಲಾರದ ಬದುಕಿನ ಕಲಾಕಾರ.

ವರದಿ:-ದೀಕ್ಷಾ ತಿಮ್ಮಪ್ಪ
ತೃತೀಯ ಬಿ.ಕಾಂ
ಶ್ರೀಮತಿ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಾಗರ.

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    2022 ಮತ್ತು 23ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದ ವಲಯ ಅರಣ್ಯ ಅಧಿಕಾರಿಗಳು

    ಶಿವಮೊಗ್ಗ ಜೂ 15ಶಿಕಾರಿಪುರದಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರೇವಣಸಿದ್ದಯ್ಯ ಬಿ. ಹಿರೇಮಠ ಅವರಿಗೆ  2023ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಣೆ ಆಗಿದೆ. ಅರಣ್ಯ ಇಲಾಖೆಯ ಸಂಶೋಧನಾ ವಿಭಾಗದಲ್ಲಿ ರೇವಣಸಿದ್ದಯ್ಯ ಅವರು ಮಾಡಿರುವ ಸಾಧನೆಗಾಗಿ  ಈ ಪದಕ ಘೋಷಣೆ ಆಗಿದೆ.ಬೆಂಗಳೂರಿನಲ್ಲಿ …

    ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ ಯವರಿಂದ ಆಶೀರ್ವಾದ ಪಡೆದ ನೂತನ ಸಂಸದ ಬಿ ವೈ ಆರ್

    ಶಿವಮೊಗ್ಗ  ಜೂ 13ಶಿಕಾರಿಪುರದ ಕಾಳೇನಹಳ್ಳಿ-ಕಪ್ಪನಹಳ್ಳಿ ಶಿವಯೋಗಾಶ್ರಮದ ಪರಮ ಪೂಜ್ಯರಾದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅವರನ್ನು ಶ್ರೀಮಠದಲ್ಲಿ ಭೇಟಿ ಮಾಡಿ ಮಠದ ವತಿಯಿಂದ ಅಭಿನಂದನೆ ಸ್ವೀಕರಿಸಿ ಪೂಜ್ಯರ ದಿವ್ಯಾಶೀರ್ವಾದ ಪಡೆದುಕೊಂಡ ಬಿ ವೈ ರಾಘವೇಂದ್ರ ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ…

    You Missed

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಷಷ್ಠಿ ಕುರಿತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಭೆ

    ಷಷ್ಠಿ ಕುರಿತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಭೆ

    ಇನ್ನೋವಾ ಕಾರಿಗೆ ಇನ್ಸುಲೇಟರ್ ಮೀನು ಗಾಡಿ ಡಿಕ್ಕಿ ನಾಲ್ವರ ಸ್ಥಿತಿ ಗಂಭೀರ…!

    ಇನ್ನೋವಾ ಕಾರಿಗೆ ಇನ್ಸುಲೇಟರ್ ಮೀನು ಗಾಡಿ ಡಿಕ್ಕಿ ನಾಲ್ವರ ಸ್ಥಿತಿ ಗಂಭೀರ…!

    ಕುಂದಾಪುರ ತಾಲ್ಲೂಕು ದಂಡಾಧಿಕಾರಿ ಶೋಭಾ ಲಕ್ಷ್ಮಿ  ಕರ್ತವ್ಯ ನಿರ್ವಹಿಸದೆ ಹೈಡ್ರಾಮ  ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿ ಇಲ್ಲದೆ ಅಧಿಕಾರಿಗಳಿಂದ ಪಂಗನಾಮ…!  

    ಕುಂದಾಪುರ ತಾಲ್ಲೂಕು ದಂಡಾಧಿಕಾರಿ ಶೋಭಾ ಲಕ್ಷ್ಮಿ  ಕರ್ತವ್ಯ ನಿರ್ವಹಿಸದೆ ಹೈಡ್ರಾಮ  ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿ ಇಲ್ಲದೆ ಅಧಿಕಾರಿಗಳಿಂದ ಪಂಗನಾಮ…!  

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ