ಕಾರವಾರ : ಅಂಕೋಲಾ ಶಿರೂರ ಗುಡ್ಡ ಕುಸಿತ ದಿಂದ ಅನ್ಯಾಯವಾದ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಲು
ಈ ದಿನ 17/08/2024ರಂದು ಈಡಿಗ ನಾಮದಾರಿ ಸಮಾಜದಶ್ರೀ ಪ್ರಣವಾನಂದ ಸ್ವಾಮೀಜಿಯವರು ಬೆಂಗಳೂರು ಲೋಕಾಯುಕ್ತ ನ್ಯಾಯಾಲಯದಲ್ಲಿ ಶಿರೂರು ಗುಡ್ಡ ಕುಸಿದು ಬಿದ್ದು ಎಂಟು ಜನ ಮರಣ ಹೊಂದಿರುವುದಕ್ಕೆ ಕಾರಣರಾದ ಎನ್ ಹೆಚ್ ಎ ಐ (ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ) ಹಾಗೂ ಐ ಆರ್ ಬಿ ವೆಸ್ಟ್ ಕೋಸ್ಟ್ ಟೋಲ್ವೇ ಪ್ರವೇಟ್ ಲಿಮಿಟೆಡ್
ಈ ಕಂಪನಿಗಳ ವಿರುದ್ಧ ಸಂಪೂರ್ಣ ದಾಖಲಾತಿಗಳೊಂದಿಗೆ ಈ ದಿನ ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಲಾಯಿತು.
ಎನ್ ಹೆಚ್ ಎ ಐ ನ್ಯಾಷನಲ್ ಚೇರ್ಮನ್ ಶ್ರೀಯುತ ಸಂತೋಷ್ ಕುಮಾರ್ ಯಾದವ್ IAS
ಕರ್ನಾಟಕ ರೀಜನಲ್ ಆಫೀಸರ್ ಶ್ರೀಯುತ ವಿ ಬ್ರಹ್ಮಣಕರ್ ಮತ್ತು ಎರಡು ಜನ ಎನ್ ಹೆಚ್ ಎ ಐ ಸೀನಿಯರ್ ಆಫೀಸರ್ ಗಳ ವಿರುದ್ಧ ಹಾಗೂ ಐಆರ್ ಬಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ವೀರೇಂದ್ರ ಡಿ ಮಾಯಸ್ಕರ್ ಸೇರದಂತೆ
ಐ ಆರ್ ಬಿ ಕಂಪನಿಯ ಎಂಟು ಜನರ ಮೇಲೆ ದೂರು ದಾಖಲಿಸಲಾಯಿತು.
ಐಆರ್ಬಿ ಕಂಪನಿ ಮಾಡಿದ ಕಳಪೆ ಕಾಮಗಾರಿಯಿಂದ ಹಾಗೂ ಇದಕ್ಕೆ ಕೇಂದ್ರ ಸರ್ಕಾರದ ಹಣವನ್ನು ಲೂಟಿ ಹೊಡೆಯಲು ಸಹಕಾರ ನೀಡಿದ ಭ್ರಷ್ಟಾಚಾರಿಗಳಾದ
ಎನ್ ಹೆಚ್ ಎ ಐ ಅಧಿಕಾರಗಳ ವಿರುದ್ಧ ಶ್ರೀಗಳು ದೂರು ದಾಖಲಿಸಲಾಯಿತು.
ಮುಂದಿನ ದಿನಗಳಲ್ಲಿ ಹೆಚ್ಚಿನ ದಾಖಲಾತಿಗಳನ್ನು ಸಂಗ್ರಹಿಸಿ ಲೋಕಾಯುಕ್ತ ಕಚೇರಿಗೆ ನೀಡಲಾಗುವುದು ಮತ್ತು ಈ ಕಂಪನಿಗಳ ಮಾಲೀಕರುಗಳನ್ನು ಜೈಲಿಗೆ ಕಳಿಸುವವರೆಗೂ ಹಾಗೂ ಶಿರೂರು ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಸಿಗುವವರೆಗೂ ಕಠಿಣವಾದ ಕಾನೂನು ಕ್ರಮ ಹೋರಾಟ ಮಾಡಲಾಗುವುದು ಎಂದು ಶ್ರೀ ಪ್ರಣವಾನಂದ ಗುರುಗಳು ತಿಳಿಸಿದರು
ವರದಿಗಾರರು ಅನು (ರೂಪಾ)