ಕಾರವಾರ: ಮಂಗಳೂರಿನ ಎಂಪಾಸಿಸ್ ನ ದೀಪಕ್ ರಾಜ್ ನೇತೃತ್ವದ ಸಿ.ಎಸ್.ಆರ್ ತಂಡದವರು ಹೊನ್ನಾವರ ತಾಲ್ಲೂಕಿನ ಅಳ್ಳಂಕಿಗೆ ಭೇಟಿ ನೀಡಿ ಇತ್ತೀಚಿಗೆ ಶರಾವತಿನದಿಯಲ್ಲಿ ಸಂಭವಿಸಿದ ಕ್ರತಕ ನೆರೆಯಲ್ಲಿ ಭಾದಿತರಾದ ಅಲ್ಲಿನ ಎಲ್ಲಾ 16 ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಂತ್ರಸ್ತ ಕುಟುಂಬಗಳಿಗೆ ತಲಾ ರೂ2500/- ಮೌಲ್ಯದ ಅಕ್ಕಿ ಮತ್ತು ಇತರ ಧವಸಧಾನ್ಯಗಳನ್ನು ವಿತರಿಸಿ ಮಾನವೀಯತೆ ತೋರಿದ್ದಾರೆ.
ಈ ಸಂದರ್ಭದಲ್ಲಿ ಶರಾವತಿ ನೆರೆಸಂತ್ರಸ್ತರ ಹಿತರಕ್ಷಣಾ ಸಮೀತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅವರು ಮಾತನಾಡಿ ಮಂಗಳೂರು ಎಂಪಾಸಿಸ್ ನ ಸಿ.ಎಸ್.ಆರ್ ಟೀಮನ್ನು ಸಂಪರ್ಕಿಸಿ ಲಿಂಗನಮಕ್ಕಿ ಆಣೆಕಟ್ಟಿನಿಂದ ಕೇವಲ 50ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟರೂ ಸಹ ಶರಾವತಿನದಿ ಪಾತ್ರದ ಅಳ್ಳಂಕಿಯ ಗಾಬಿತಕೇರಿ ಮತ್ತು ಕೆಲವು ಜನವಸತಿ ಪ್ರದೇಶಗಳು ಕ್ರತಕ ನೆರೆಯಿಂದ ಬಾಧಿತಗೊಳ್ಳುತ್ತವೆ.
ಇಲ್ಲಿನ ಜನರು ಕ್ರತಕ ನೆರೆಯಿಂದ ನಿರಂತರವಾಗಿ ಬವಣೆ ಪಡುತ್ತಿರುವ ವಿಚಾರವನ್ನು ತಿಳಿಸಿದ್ದೆ. ಅವರು ತಕ್ಷಣ ಸ್ಪಂದಿಸಿ ಈ ವಾರ ತಮ್ಮ ತಂಡ ಭೇಟಿ ಮಾಡಿ ಸಾಧ್ಯವಿರುವ ನೆರವು ನೀಡುವದಾಗಿ ತಿಳಿಸಿದ್ದರು . ಅವರು ನುಡಿದಂತೆ ಸಂತ್ರಸ್ತರಿಗೆ ನೆರವು ನೀಡಿಸಂತ್ರಸ್ತರ ಮುಖದಲ್ಲಿನ ನಗುವನ್ನು ಕಂಡು ಸಂತಸ ಹಂಚಿಕೊಂಡಿದ್ದಾರೆ.
ಇಂದಿನ ಕಾರ್ಯಕ್ರಮದಿಂದ ಮುಂದಿನ ದಿನಗಳಲ್ಲಿ ಬೇರೆಭಾಗಗಳಿಗೆ ಇನ್ನಷ್ಟು ನೆರವು ನೀಡಲು ಅವರ ತಂಡ ಪ್ರೇರಿತರಾದ ಬಗ್ಗೆ ತಿಳಿದು ಸಂತಸವಾಗಿದೆ ಎಂದರು . ಈ ಸಂದರ್ಭದಲ್ಲಿ ಅಳ್ಳಂಕಿ ಪ್ರೌಢಶಾಲೆಯ ಶಿಕ್ಷಕರು ,ಎಂಪಾಸಿಸ್ , ಸಿ.ಎಸ್.ಆರ್ .ತಂಡದ ದೀಪಕ್ ರಾಜ್ ,ಆನಂದ ಆರ್ ,ಯೋಗೇಶ ಬಿ.ಮತ್ತು ಅಳ್ಳಂಕಿಯ ಶರಾವತಿ ನೆರೆ ಸಂತ್ರಸ್ತರು ಇದ್ದರು.
ಉತ್ತರ ಕನ್ನಡ ವರದಿಗಾರರು ಅನು (ರೂಪಾ)