ವರದಿ ನಾರಾಯಣ ಸ್ವಾಮಿ ಹೊಸಕೋಟೆ
ಹೊಸಕೋಟೆ : ಸರಕಾರಿ ಪ್ರಥಮ
ದರ್ಜೆ ಕಾಲೇಜುಗಳಲ್ಲಿ ಪ್ರಸಕ್ತ ವರ್ಷದಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾ ಸಕರನ್ನು ಮುಂದುವರಿಸಿ ಅವರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸಚಾರ್ ಎನ್. ಅವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಹೊಸಕೋಟೆಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಹತ್ತಾರು ವರ್ಷದಿಂದ ಪದವಿ ಕಾಲೇಜುಗಳಲ್ಲಿ ಕನಿಷ್ಠ ವೇತನ(ಗೌರವ ಧನ) ಪಡೆಯುತ್ತಿದ್ದು, ರಾಜ್ಯದ 420 ಪ್ರಥಮ ದರ್ಜೆ ಕಾಲೇಜುಗಳಲ್ಲಿ 13 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇವರನ್ನು ಕಳೆದ ವರ್ಷ ಆನ್‌ಲೈನ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದ್ದು, ಸದರಿ ವರ್ಷದ 2024-25 ನೇ ಸಾಲಿಗೆ ಮತ್ತೆ ಆನ್‌ಲೈನ್ ಮೂಲಕ ತೆಗೆದು ಕೊಳ್ಳುವುದಾಗಿ ಆಯುಕ್ತರು ಆ.5 ರಂದು ತಿಳಿಸಿದ್ದಾರೆ.
2024-25ನೇ ಶೈಕ್ಷಣಿಕ ಸಾಲಿಗೆ ಮುಂದಿನ ತಿಂಗಳಲ್ಲಿ ಆನ್‌ಲೈನ್ ಪ್ರಕ್ರಿಯೆ ಮೂಲಕ ತೆಗೆದುಕೊಳ್ಳುವುದಾಗಿ ತಿಳಿಸಿ ದ್ದಾರೆ. ಇದರಿಂದಾಗಿ ಸಾವಿರಾರು ಅತಿಥಿ ಉಪನ್ಯಾಸಕರ ಕುಟುಂಬಗಳು ಈಗಾ ಗಲೇ ನೆರೆ ಹೊರೆಯ ತಾಲೂಕು ಮತ್ತು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿ ಸುತ್ತಿರು ವುದರಿಂದ ಅವರ ಕುಟುಂಬದ ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗುತ್ತದೆ.
ಬೇರೆ ಕಾಲೇಜುಗಳಿಗೆ ತೆರಳಲು ಕಷ್ಟವಾ ಗುವುದರಿಂದ ಈ ಕೂಡಲೇ ಉನ್ನತ ಶಿಕ್ಷಣ ಮಂತ್ರಿ ಮಧ್ಯ ಪ್ರವೇಶಿಸಿ ಅತಿಥಿ ಉಪನ್ಯಾಸಕರನ್ನು ಮುಂದುವರಿ ಎಂದು ರಾಜ್ಯಾಧ್ಯಕ್ಷರು ಒತ್ತಾಯಿಸಿದ್ದಾರೆ ಪ್ರಸ್ತುತ ಸಾಲಿನಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸದರಿ ಕಾಲೇಜುಗಳಲ್ಲಿಯೇ ಮುಂದು ವರಿಸಬೇಕು. ಸ್ನಾತಕೋತ್ತರ ಪದವಿ ಪಡೆದು ಕಾರ್ ನಿರ್ವಹಣೆ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಹುದ್ದೆ ಎಂಫಿಲ್, ಪಿಎಚ್‌ಡಿ, ನೆಟ್, ಸ್ಟೇಟ್ ಇವುಗಳಲ್ಲಿ ಒಂದನ್ನು ಮಾತ್ರ ಪರಿಗಣಿಸ ಬೇಕು. ಎಂಫಿಲ್ ಪದವಿಯನ್ನು ವೇತನ ನೀಡಲುಪರಿಗಣಿಸಬೇಕು. ಸೇವಾ ಭದ್ರತೆ ನೀಡಿ ಯುಜಿಸಿ ನಿಯಮದಂತೆ ವೇತನ ಹೆಚ್ಚಿಸ ಬೇಕು. ಹಾಗೂ 12 ತಿಂಗಳ ವೇತನ ನೀಡಬೇಕು.
ಅತಿಥಿ ಉಪನ್ಯಾಸಕರಾಗಿ ಹಲವು ವರ್ಷದಿಂದ ಸೇವೆ ಸಲ್ಲಿಸಿ ಕಾರಬಾರ ಇಲ್ಲದೆ ವಂಚಿತರಾದಾಗ 25ಲಕ್ಷ ರೂ. ಇಡಗಂಟು ನೀಡಬೇಕು. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ನೀಡ ಬೇಕು ಎಂದು ಒತ್ತಾ ಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸಪ್ಪ ಡಾ.ಧ್ಯಾವಪ್ಪ, ತುಮಕೂರು ಹರೀಶ್, ಚಿಂತಾಮಣಿ ಪಿ. ಶ್ರೀನಿವಾಸ್, ಕೆ.ಆರ್ ಪುರಂ ಸೌಭಾಗ್ಯ, ರಘನಾಥ್ ಹಾಜರಿದ್ದರು.
ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ
ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…