ಕಾರವಾರ: ಮಾತೆ ಭಾರತಿ ವಿಶ್ವ ಶ್ರೇಷ್ಠಳು, ನಾವೆಲ್ಲರೂ ಭಾರತ ಮಾತೆಯ ಮಕ್ಕಳು, ರಾಷ್ಟ್ರವನ್ನು ಗೌರವಿಸಬೇಕು, ಪೂಜಿಸಬೇಕು ಆರಾಧಿಸಬೇಕು, ನಮ್ಮ ಸಂಸ್ಕೃತಿ ವಿಶ್ವ ಮಾನ್ಯವಾಗಿದೆ ಎಂದು ಮುಂಬೈನ ಖ್ಯಾತ ಉದ್ಯಮಿ ಶ್ರೀ ಕೃಷ್ಣ ಭಟ್ಟ ಗುಡ್ಡೆಬಾಳದವರು ನುಡಿದರು.
ಹೊನ್ನಾವರ ತಾಲೂಕಿನ ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣವನ್ನು ನೆರವೆರಿಸಿ ಮಾತನಾಡಿದರು,
ಮಾಜಿ ಸೈನಿಕರಾದ ಕ್ಯಾಪ್ಟನ್ ಗಜಾನನ ನಾಯ್ಕರವರು ಮಾತನಾಡಿ ಶುಧ್ಧ ಚಿತ್ತರಾಗಿ ಅಭ್ಯಾಸ ಮಾಡಿದರೆ ಸೈನಿಕರಾಗಿ ರಾಷ್ಟ್ರ ಸೇವೆಯನ್ನು ಮಾಡಬಹುದು ಎಂದು ನುಡಿದರು.
ಮತ್ತೋರ್ವ ಮಾಜಿ ಸೈನಿಕ ಶ್ರೀ ಬಾಲಚಂದ್ರ ಭಟ್ ರವರು ಮಾತನಾಡಿ ಸತತ ಪರಿಶ್ರಮದಿಂದ ಶ್ರೇಷ್ಠ ಸಾಧನೆಯೆನ್ನು ಮಾಡಬಹುದು ಸೈನಿಕರಾಗಿ ದೇಶ ಸೇವೆಯನ್ನೂ ಗೈಯಬಹುದು ಎಂದರು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ವಿ ಜಿ ಹೆಗಡೆ ಗುಡ್ಗೆಯವರು ವಹಿಸಿದ್ದರು.ಸಂಸ್ಥೆಯ ಅಧ್ಯಕ್ಷರಾದ ಶ್ರೀ ಉಮೇಶ ಹೆಗಡೆ ಯವರು ವೀರ ಸೈನಿಕರಾದ ಕ್ಯಾಪ್ಟನ್ ಗಜಾನನ ನಾಯ್ಕ, ಶ್ರೀ ಬಾಲಚಂದ್ರ ಭಟ್ ಹಾಗೂ ಖ್ಯಾತ ಉದ್ಯಮಿ ಶ್ರೀ ಕೃಷ್ಣ ಭಟ್ಟರನ್ನು ಸನ್ಮಾನಿಸಿದರು.
ಆಡಳಿತಾಧಿಕಾರಿ ಎಂ ಎಸ್ ಹೆಗಡೆಯವರು ಸ್ವಾಗತಿಸಿದರು, ಶಿಕ್ಷಕ ಶಂಕರ ಶಿಂಗೆ ವಂದಿಸಿದರು.ಶಿಕ್ಷಕಿಯರಾದ ಪ್ರತಿಮಾ ಬಿ ಎಂ ಹಾಗೂ ನಯನ ನಾಯ್ಕ ನಿರೂಪಿಸಿದರು.ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು
ಉತ್ತರ ಕನ್ನಡ ಜಿಲ್ಲಾ ವರದಿಗಾರರು ಅನು (ರೂಪಾ)