ಕಲ್ಯಾಣ ಕರ್ನಾಟಕದ 3 ಜಿಲ್ಲೆಗಳಿಗೆ ಜೀವನಾಡಿ ತುಂಗಾಭದ್ರ ನದಿಯ ಆಣೆಕಟ್ಟನ್ನು ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ: ಕ.ರ.ವೇ ಖಂಡನೆ……
ಕೊಪ್ಪಳ : ರಾಯಚೂರು, ಬಳ್ಳಾರಿ ಹಾಗೂ ವಿಜಯ ನಗರ ಜಿಲ್ಲೆಗಳಿಗೆ ಜೀವ ನಾಡಿ ತುಂಗಭದ್ರಾ ಜಲಾಶಯದ ಸುರಕ್ಷತೆಗೆ ಕೋಟ್ಯಾಂತರ ರೂಪಾಯಿಗಳನ್ನು ತೆಗೆದುಕೊಂಡು ಅದನ್ನು ಸರಿಯಾದ ರೀತಿಯ ಸುರಕ್ಷತೆಯನ್ನು ಒದಗಿಸುವಲ್ಲಿ ಕರ್ನಾಟಕ ಸರ್ಕಾರ ಹಾಗೂ ಕಾಡಾ ಅಧಿಕಾರಿಗಳು ಸಂಣಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ್ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಜೀವನಾಡಿಯಾದ ತುಂಗಭದ್ರಾ ನದಿಯ ನೀರನ್ನು ಶೇಖರಣೆ ಮಾಡುವಂತಹ ಸಮಯದಲ್ಲಿ ತುಂಗಭದ್ರಾ ಡ್ಯಾಂಗೆ ಯಾವುದೇ ರೀತಿಯ ಸುರಕ್ಷತೆಯನ್ನು ತೆಗೆದುಕೊಳ್ಳದೇ ಇರುವುದರಿಂದ ಈವತ್ತಿನ ಈ ಪರಿಸ್ಥಿತಿಗೆ ಸರ್ಕಾರ ಮತ್ತು ಅಧಿಕಾರಿಗಳು ನೇರ ಹೋಣೆಯಾಗಿರುತ್ತಾರೆ
ತುಂಗಭದ್ರಾ ಡ್ಯಾಂ ನಿರ್ಮಾಣದ ತಾಂತ್ರಿಕ ಕನಿಷ್ಠ ಬುದ್ಧಿ ಇರುವವರು ಆಣೆಕಟ್ಟಿನ ಮೊದಲನೇಯ ಹಾಗೂ ಕೊನೆಯ ಕ್ರಸ್ಟ್ ಗೇಟ್ಗಳನ್ನು ತೆರೆಯಬೇಕು.
ಆದರೆ ಏಕಾಏಕಿ ಆಣೆಕಟ್ಟಿನ ಮಧ್ಯದಲ್ಲಿರುವ ೧೯ನೇ ನಂಬರಿನ ಗೇಟ್ನ್ ತೆಗೆದಿರುವುದು ಬೆಜವಾಬ್ದಾರಿತನವನ್ನು ತೋರಿಸಿರುತ್ತಾರೆ. ಇದರಿಂದ ಆಣೆಕಟ್ಟಿನ ಮಧ್ಯ ಭಾಗದಲ್ಲಿ ನೀರಿನ ಒತ್ತಡ ಅಪಾರ ಪ್ರಮಾಣದಲ್ಲಿರುತ್ತದೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಅವಘಡಕ್ಕೆ ಕಾರಣವಾಗಿರುತ್ತದೆ.
ಆಣೆಕಟ್ಟಿನ ಒಟ್ಟು ಸಾಮರ್ಥ್ಯ ೧೩೦ ಟಿ.ಎಂ.ಸಿ ಆದರೆ ಪ್ರಸ್ತುತ ಆಣೆಕಟ್ಟಿನಲ್ಲಿ ಸಂಗ್ರಹವಾಗಿರುವುದು ೧೦೫ ಟಿ.ಎಂ.ಸಿ. ಗೇಟ್ ಕಿತ್ತು ಹೋಗಿರುವುದನ್ನು ಸರಿಪಡಿಸಬೇಕಾಸದರೆ ನೀರಿನ ಸಂಗ್ರಹವನ್ನು ೭೦ ಟಿ.ಎಂ.ಸಿ. ನದಿಗೆ ಬಿಟ್ಟುಕೊಡುವುದರಿಂದ ಹೆಚ್ಚೆಂದರೆ ೪೦ ಟಿ.ಎಂ.ಸಿ. ನೀರು ಆಣೆಕಟ್ಟಿನಲ್ಲಿ ಸಂಗ್ರಹವಾಗುತ್ತದೆ.
ಈ ರೀತಿಯ ನೀರು ಪೋಲಾಗಿರುವುದರಿಂದ ಎರಡು ಬೆಳೆಗಳಿಗೆ ನೀರನ್ನು ಸರ್ಕಾರು ಎಲ್ಲಿಂದ ತಂದು ಕೊಡುತ್ತಾರೆ? ಇದಲ್ಲದೇ ಇನ್ನೂ ೨-೩ ಕ್ರಸ್ಟ್ ಗೇಟ್ಗಳು ಬಿರುಕುಬಿಟ್ಟಿದೆ ಎಂಬು ಮಾಹಿತಿ ಜಾಲತಾಣದಲ್ಲಿ ಲಭ್ಯವಾಗಿದೆ. ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು. ಮತ್ತು ಇದಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು.
ಆಣೆಕಟ್ಟು ನಿರ್ಮಾಣವಾಗಿ ಸುಮಾರು ೭೦ ವರ್ಷಗಳು ಕಳೆದಿದ್ದು ಅಲ್ಲಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಸುರಕ್ಷತೆ ಮತ್ತು ಭದ್ರತೆಯನ್ನು ನೀಡದೇ ಕಾಟಾಚಾರಕ್ಕೆ ಅಲ್ಲಿ ಹೂಂ ಗಾರ್ಡಗಳನ್ನು ಹಾಕಿ ಯಾವುದೇ ರೀತಿ ಶಿಸ್ತು ಕ್ರಮ ತೆಗೆದುಕೊಳ್ಳದೇ ಪ್ರಭಾವಿ ವ್ಯಕ್ತಿಗಳು ಅಲ್ಲಿಗೆ ಬಂದಾಗ ಕಾರಿನ ಮೂಲಕ ಅವರನ್ನು ಒಳಗಡೆ ಬಿಡುತ್ತಾರೆ.ಆದರೆ ಇದು ರಾತ್ರಿಯ ಸಮಯದಲ್ಲಿ ಈ ದೃಶ್ಯವು ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರು .
ರಾಜ್ಯ ಸರ್ಕಾರದಲ್ಲಿ ಈಗಿರುವ ಎಲ್ಲಾ ಅಧಿಕಾರಿಗಳು ಹಾಗೂ ಇಂಜಿನಿಯರಗಳನ್ನು ಅಮಾನತ್ತುಗೊಳಿಸಬೇಕು.
ಆದ್ದರಿಂದ ನಾಲ್ಕು ಜಿಲ್ಲೆಯ ಸಚಿವರು, ಶಾಸಕರು ಹಾಗೂ ರಾಜಕೀಯ ಮುಖಂಡರುಗಳು ರೈತರಿಗೆ ಒಂದು ಎಕರೆಗೆ ರೂ.೨೫೦೦೦/- ರಂತೆ ಎರಡು ಬೆಳಗಳಿಗೆ ಪರಿಹಾರವನ್ನು ಘೋಷಣೆ ಮಾಡಬೇಕು.
ಒಂದು ವೇಳೆ ಪರಿಹಾರ ಘೋಷಣೆ ಮಾಡದೇ ಇದ್ದ ಪಕ್ಷದಲ್ಲಿ ನಮ್ಮ ಸಂಘಟನೆಯವತಿಯಿಂದ ರೈತರ ಸಮ್ಮಖದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ)ದ ಜಿಲ್ಲಾ ಅದ್ಯಕ್ಷರಾದ ಪಂಪಣ್ಣ ನಾಯಕ ಇವರು ಒತ್ತಾಯಿಸಿದ್ದಾರೆ.
ವರದಿ: ರುದ್ರಪ್ಪ ಭಂಡಾರಿ ಕೊಪ್ಪಳ