ಭಟ್ಕಳ ತಾಲೂಕಿನ ಸಚಿವರ ಕಾರ್ಯಾಲಯದಲ್ಲಿ ಇಂದು ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಜೆ 4 ಗಂಟೆಗೆ ಪ್ರಾರಂಭವಾದ ಜನತಾ ದರ್ಶನ ಕಾರ್ಯಕ್ರಮಕ್ಕೆ ನೂರಾರು ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಂದಿದ್ದರು. ಆರೋಗ್ಯ ಸಮಸ್ಯೆ, ಉದ್ಯೋಗ ಸಮಸ್ಯೆಗಳು ಸೇರಿದಂತೆ ಇತ್ತಿಚೇಗೆ ವಿಪರಿತ ಮಳೆ ಗಾಳಿಯ ಕಾರಣಕ್ಕಾಗಿ ಮನೆ, ಬೆಳೆಯನ್ನು ಕಳೆದುಕೊಂಡ ಸಂತೃಸ್ತರು ಸಚಿವರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ದಿವ್ಯಾಂಗ ಅಭ್ಯರ್ಥಿಯೊಬ್ಬರಿ ತ್ರಿಚಕ್ರವಾಹನ ನೀಡುವ ಭರವಸೆ ನೀಡಿದರು. ದೇವಸ್ಥಾನ ನಿರ್ಮಾಣಕ್ಕಾಗಿ ಹಣದ ನೆರವಿಗಾಗಿ ಬಂದ ಶೃದ್ಧಾಳುಗಳಿಗೆ ಸರ್ಕಾರದ ಆರಾಧನ ಯೋಜನೆಯ ಮೂಲಕ ನೆರವು ಒದಗಿಸುವ ಜತೆಗೆ ವೈಯುಕ್ತಿಕ ನೆರವಿನ ಭರವಸೆ ಇತ್ತರು.
ಇತ್ತಿಚೆಗೆ ಸುರಿದ ಬಾರಿ ಮಳೆಯ ಕಾರಣದಿಂದಾಗಿ ಮಾವಿನಕುರ್ವೆಯ ಗೊಂಡರಕೇರಿ ರಸ್ತೆಯ ಬಳಿ ಗುಡ್ಡ ಕುಸಿದ ಪರಿಣಾಮವಾಗಿ ಸ್ಥಳಿಯಾಡಳಿತ ಬ್ಯಾರಿಕೇಡ್ ಹಾಕಿ ಜನರ ಓಡಾಟಕ್ಕೆ ತಡೆಹಾಕಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಿಯರು ನೀಡಿದ ಮನವಿಗೆ ಸ್ಪಂದಿಸಿ ತ್ವರಿತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಬೆಳಕೆ ಪಂಚಾಯತ್ ಪ್ರಭಾರಿ ಪಂಚಾಯತ್ ಅಧಿಕಾರಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು. ಒಬ್ಬ ದಕ್ಷ ಅಧಿಕಾರಿಯನ್ನು ಒದಗಿಸುವಂತೆ ಕೇಳಿದಾಗ ಸಚಿವರು ಇಲ್ಲಿಯವರೆಗೂ ನನಗೆ ಅಂತಹ ದಕ್ಷ ಅಧಿಕಾರಿಗಳು ಕಾಣಿಸುತ್ತಿಲ್ಲ ಅಂತವರು ಯಾರಾದರೂ ಇದ್ದರೆ ನೀವೇ ತೋರಿಸಿ ಅವರನ್ನೇ ನಿಯೋಜನೆ ಮಾಡುತ್ತೇನೆ ಎಂದರು.
ಇಂದು ನಡೆದ ಜನಾತಾದರ್ಶನ ಕಾರ್ಯಕ್ರಮದಲ್ಲಿ ಒಟ್ಟು 200 ಕ್ಕೂ ಅಧಿಕ ಅರ್ಜಿಗಳು ಸ್ವೀಕೃತವಾಗಿದ್ದು, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಹರಿಸಿದರು
ವರದಿ :ಲೋಕೇಶ್ ನಾಯ್ಕ್ ಭಟ್ಕಳ.