ಉತ್ತರಕನ್ನಡ:ಕೋಣವೊಂದು ವ್ಯಕ್ತಿಯೋರ್ವರಿಗೆ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಶಿರಸಿಯಲ್ಲಿ ನಡೆದಿದೆ.
ಮಹಿಂದ್ರಾ ಕೊಟಕ್ ನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯನ್ನು ಕಾಡು ಕೋಣ ಇರಿದ ಕಾರಣ ಗಂಬೀರ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಗಾಯಗೊಂಡ ವ್ಯಕ್ತಿ ವಿವೇಕ್ ಗುರುಮೂರ್ತಿ ಮಡಿವಾಳ ಎಂದು ಗುರುತಿಸಲಾಗಿದೆ.
ಕೋಣನಿಂದ ಮಾರಣಾಂತಿಕ ವಾಗಿ ಗಾಯಗೊಂಡ ವಿವೇಕ್ ನನ್ನು ಹೆಚ್ಚನ ಚಿಕಿತ್ಸೆ ಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಶಿರಸಿಯ ಗೋ ರಕ್ಷಣಾ ಪಡೆಯವರು ಈ ಕೋಣವನ್ನು ಶತಾಯಗತಾಯ ಪ್ರಯತ್ನ ಪಟ್ಟು ಕೊನೆಗೂ ಹಿಡಿಯುವಲ್ಲಿ ಯಶಶ್ವಿಯಾಗಿದ್ದಾರೆ.
ಅಕ್ರಮವಾಗಿ ಕೋಣವನ್ನು ಸಾಗಿಸುವ ಸಂಧರ್ಭದಲ್ಲಿ ಪೋಲೀಸರು ಈ ಕೋಣವನ್ನು ವಶಕ್ಕೆ ಪಡೆದಿದ್ದು,ಶಿರಸಿಯಿಂದ ಹಳಿಯಾಳ ಸಾಗಿಸುವ ಸಂಧರ್ಭದಲ್ಲಿ ಈ ಕೋಣ ತಪ್ಪಿಸಿಕೊಂಡಿತ್ತು ಎಂದು ಹೇಳಲಾಗುತ್ತಿದ್ದು, ಇದು ಕಂಡ ಕಂಡ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿತ್ತು.ಈ ಕೋಣ ಹುಚ್ಚು ಹಿಡಿದ ಸ್ಥಿತಿಗೆ ತಲುಪಿದೆ ಎಂಬುದು ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದವು.
ಆದರೆ ಇಂದು ಶಿರಸಿಯ ಗೋ ರಕ್ಷಣಾ ಪಡೆಯ ಯಶಶ್ವಿ ಕಾರ್ಯಾಚರಣೆಯಿಂದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.
ಉತ್ತರ ಕನ್ನಡ ಜಿಲ್ಲಾ ವರದಿಗಾರರು, ರೂಪಾ