ಬ್ರಹ್ಮಾವರ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕ  ಸಭೆ.

ಉಡುಪಿ : ಬ್ರಹ್ಮಾವರ ತಾಲೂಕಿನಲ್ಲಿ ಹೈವೆಯ ಅಂಡರ್ ಪಾಸ್ ಹಾಗೂ ಸರ್ವಿಸ್ ರೋಡ್ ಗಳ ಬಗ್ಗೆ ಯಶ್ಪಾಲ್ ಸುವರ್ಣ ರವರ ನೇತೃತ್ವದಲ್ಲಿ ಸಭೆ ನಡೆಯಿತು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಇವರು ಈಗಾಗಲೇ ಅಭಿವೃದ್ಧಿಯಾಗುತ್ತಿರುವ ಬ್ರಹ್ಮಾವರ ಈ ತಾಲ್ಲೂಕಿಗೆ ಹೆಚ್ಚು ಸಮಸ್ಯೆಯಾಗಿ ಎದುರಾಗಿರುತ್ತಿರುವುದು ಹೈವೇಯ ಅಂಡರ್ ಪಾಸ್  ಮತ್ತು ಹೈವೇಯ ಸರ್ವಿಸ್ ರೋಡ್ ನಿಂದ ಇಂದಿನ ದಿನಗಳಲ್ಲಿ ಸುಸಜ್ಜಿತವಾಗಿ ವ್ಯವಸ್ಥಿತವಾದ ರೀತಿಯಲ್ಲಿ ಬ್ರಹ್ಮಾವರದ ಅಭಿವೃದ್ಧಿಗೆ ಪೂರಕವಾದ ಹೈವೇ,ಸರ್ವಿಸ್ ರೋಡ್ ಇದರ ಕಾಮಗಾರಿ ನಿರ್ಮಾಣ ಮಾಡುವುದರ ಬಗ್ಗೆ ಸ್ಥಳೀಯ ಸಾರ್ವಜನಿಕರ ಅಭಿಪ್ರಾಯ ಪಡೆದು ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಇಲಾಖಾಧಿಕಾರಿಗಳು ತಮ್ಮದೇ ಅನುಭವದಲ್ಲಿ ಕೆಲಸ ಮಾಡುವಾಗ ಈ ಭಾಗದ ಸಾರ್ವಜನಿಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಇರಬೇಕು ಅಲ್ಲದೆ ಈ ಭಾಗದ ಶಾಲಾ ಕಾಲೇಜುಗಳ ಇರುವುದರಿಂದ  ವಿದ್ಯಾರ್ಥಿಗಳು ಹಾಗೂ ದಿನನಿತ್ಯ ಓಡಾಡುವ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು ಮತ್ತು ವ್ಯವಸ್ಥಿತ ರೀತಿಯಲ್ಲಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಸಭೆಯನ್ನು ಕರೆದಿದ್ದು, ಅಲ್ಲದೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡು ತಮಗೆ ಅನುಕೂಲವಾಗುವ ರೀತಿಯಲ್ಲಿ ಸಲಹೆಯನ್ನು ನೀಡುವುದಾಗಿ  ತಿಳಿಸಿದರು.
ನಂತರ ಶಾಸಕರು ಹಾಗೂ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಾರ್ವಜನಿಕರು ಈಗಾಗಲೇ ಸಾಕಷ್ಟು ಕಡೆಗಳಲ್ಲಿ ರಸ್ತೆಯ ಸಮಸ್ಯೆಯನ್ನು ಅನುಭವಿಸುತ್ತಿದ್ದು ಎಲ್ಲೆಂದರಲ್ಲಿ
ಹೊಂಡ ಕಣಿಗಳಿಂದ ತುಂಬಿಕೊಂಡಿದ್ದು ಇದರ ಬಿಸಿಯನ್ನು ಸಾರ್ವಜನಿಕರಾದ ನಾವು ಅನುಭವಿಸುವ ಹಾಗೆ ಆಗಿದೆ ಇಂತಹ ವಿಚಾರಗಳನ್ನು ಸದನದಲ್ಲಿ ಇಡಬೇಕಾದದ್ದು ನಿಮ್ಮ ಜವಾಬ್ದಾರಿ ಕೂಡಲೇ ಸಾರ್ವಜನಿಕರಿಗೆ ತೊಂದರೆಯಾಗಿರುವ ಅಗತ್ಯ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡುವ ಅಗತ್ಯವಿದೆ ಅದು ನಿಮ್ಮ ಜವಾಬ್ದಾರಿ ಕೂಡಲೇ ಅದನ್ನು ನಿಭಾಯಿಸಬೇಕು ಎಂದು ಸಾರ್ವಜನಿಕರು ಶಾಸಕರಿಗೆ ತಿಳಿಸಿದರು. 

ಹೆದ್ದಾರಿಯಲ್ಲಿ ಹೊಂಡ ಕಣಿಗಳ ಸಮಸ್ಯೆಯಿಂದಾಗಿ ರಸ್ತೆಯಲ್ಲಿ ಅಪಘಾತವಾಗಿ, ತುಂಬಾ ಜನ ಸಾವಿಗಿಡಾಗಿದ್ದು ಅಲ್ಲದೆ ಹೆಚ್ಚಿನ ಸಾರ್ವಜನಿಕರು ಅಂಗಾಂಗಗಳನ್ನು ಕಳೆದುಕೊಂಡು ಆಸ್ಪತ್ರೆಯಲ್ಲಿ ನರಳುವ ಪರಿಸ್ಥಿತಿ ಉಂಟಾಗಿದೆ ಈ ರೀತಿಯಾದ ದುರ್ಘಟನೆ ಮುಂದೆ ಸಂಭವಿಸಬಾರದು ಎಂದರೆ ಸುಸರ್ಜಿತವಾದ ಹೈವೇಗಳು ಹಾಗೂ ಅಂಡರ್ ಪಾಸ್ ಗಳ ವ್ಯವಸ್ಥೆ ಅಗತ್ಯವಿದೆ; ಅಲ್ಲದೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೀದಿ ದೀಪದ ನಿರ್ವಹಣೆ ಇಲ್ಲದೆ ಸಾರ್ವಜನಿಕರು ತತ್ತರಿಸಿ ಹೋಗಿರುತ್ತಾರೆ ಎಂದು ಹೈವೇ ಪ್ರಾಧಿಕಾರಾಧಿಕಾರಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

ಬ್ರಹ್ಮಾವರ ವ್ಯಾಪ್ತಿಗೆ ಸಂಬಂಧಿಸಿದ ಉಪ್ಪೂರು ಹಾಗೂ ಬಾರ್ಕೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳು ತುಂಬಾ ಹದಗೆಟ್ಟಿದ್ದು ಕೂಡಲೇ ಅದರ ತುರ್ತು ಕಾಮಗಾರಿಯನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಬ್ರಹ್ಮಾವರ ತಾಲ್ಲೂಕು ದಂಡಾಧಿಕಾರಿಯವರಾದ  ಶ್ರೀಕಾಂತ್ ಎಸ್ ಹೆಗ್ಡೆ ಹಾಗೂ   ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಿತ್ಯಾನಂದ ಬಿ. ಆರ್ ಇತರರು ಉಪಸ್ಥಿತರಿದ್ದರು .

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ವರದಿ: ಲೋಕೇಶ್ ನಾಯ್ಕ .ಭಟ್ಕಳ ಭಟ್ಕಳ : ನವೆಂಬರ್‌ 23ರಾಜ್ಯದಲ್ಲಿ ನಡೆದ ಉಪಚುನಾವಣೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಭರ್ಜರಿ ಜಯ. ಭಟ್ಕಳದಲ್ಲಿ  ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಸಂಮ್ಸುದ್ದೀನ ಸರ್ಕಲ್ ನಲ್ಲಿ  ಪಟಾಕಿ ಸಿಡಿಸಿ ಸಂಭ್ರಮಾಚರಣೆ . ಈ ಸಂದರ್ಭದಲ್ಲಿ…

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    ವರದಿ :ಆರತಿ ಗಿಳಿಯಾರು ಉಡುಪಿ : ನ.23ಬ್ರಹ್ಮಾವರ ತಾಲ್ಲೂಕಿನ ಮೂಡು ಗಿಳಿಯಾರು ಶಾಲಾ ಮೈದಾನದಲ್ಲಿ  ದಿನಾಂಕ  ಡಿಸೆಂಬರ್ 14 ಮತ್ತು 15 ರಂದು ನಿಸರ್ಗ ಕ್ರಿಕೆಟರ್ಸ್   ಗಿಳಿಯಾರು ಇವರ ವತಿಯಿಂದ ಪ್ರಥಮ ಬಾರಿಗೆ ರಾಜ್ಯಮಟ್ಟದ ಹೊನಲು ಬೆಳಕಿನ 40 ಗಜಗಳ ಕ್ರಿಕೆಟ್…

    You Missed

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.