ಶಿವಮೊಗ್ಗ ಜುಲೈ ೨೭
ರಾಜ್ಯ ಬಾಲಾಭವನ ಅಧ್ಯಕ್ಷರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ಕಾಂಗ್ರೆಸ್ ಮುಖಂಡರಾದ ಶ್ರೀಯುತ ಯೋಗೀಶ್ ರವರೊಂದಿಗೆ ರಾಜ್ಯ ಬಾಲ ಭವನ ಸೊಸೈಟಿಯ ಅನುದಾನದಲ್ಲಿ ಮಹಾತ್ಮಾ ಗಾಂಧಿ ಪಾರ್ಕ್ ನಲ್ಲಿ ನಡೆಯುತ್ತಿರುವ ಮಕ್ಕಳ ಪುಟಾಣಿ ರೈಲು, ಈಜು ಕೊಳ ನಿರ್ವಹಣೆ ಪರಿಶೀಲಿಸಿ ಇವುಗಳ ಉತ್ತಮ ನಿರ್ವಹಣೆ ಹಾಗೂ ಉನ್ನತಿಕರಣ ಬಗ್ಗೆ ಮಹಾ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿದರು
ಮಕ್ಕಳ ಉಪಯೋಗಕ್ಕೆ ಯೋಗ್ಯವಾಗುವಂತೆ ಪಾಲಿಕೆ, CSR ಅನುದಾನ ಬಳಸಿಕೊಳ್ಳಲು ಸೂಚಿಸಿದರು ತದನಂತರ ಮಹಿಳಾ ಮತ್ತು ಮಕ್ಕಳ ಉಪ ನಿರ್ದೇಶಕರ ಕಚೇರಿಯಲ್ಲಿ ಬಾಲ ಭವನ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದರು
ಜಿಲ್ಲಾ ಮತ್ತು ತಾಲ್ಲೂಕು ಬಾಲ ಭವನ ನಿರ್ಮಾಣ ಮಾಡಲು ಕನಿಷ್ಠ ಅರ್ಧ ಎಕರೆ ನಿವೇಶನ ರಾಜ್ಯ ಬಾಲ ಭವನ ಸೊಸೈಟಿ ಹೆಸರಿಗೆ ಜಿಲ್ಲಾಧಿಕಾರಿಯವರಿಂದ ಮಂಜೂರಾತಿ ಪಡೆಯಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಿ,ಜಿಲ್ಲಾ ಬಾಲ ಭವನ ಕಾರ್ಯಕ್ರಮ ಸಂಯೋಜಕರ ಮೂಲಕ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ತಿಳಿಸಿದರು
ಈ ಸಂದರ್ಭದಲ್ಲಿ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶ್ರೀ ಬಿ ಹೆಚ್ ಕೃಷ್ಣಪ್ಪ, ಇಲಾಖಾ ಅಧಿಕಾರಿಗಳು, ಮಹಾ ನಗರ ಪಾಲಿಕೆ, ಶಿಕ್ಷಣ, ಯುವ ಜನ ಕ್ರೀಡಾ ಇಲಾಖೆ, ಅಧಿಕಾರಿಗಳು ಹಾಜರಿದ್ದರು ನಂತರ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ಪರಿಶೀಲಿಸಿ ಇಲಾಖಾ ಸಂಕಿರ್ಣದಲ್ಲಿ ಬಾಲ ಭವನ ಆಡಿಟೋರಿಯಂ, ಮಕ್ಕಳ ಉದ್ಯಾನವನ ನಿರ್ಮಾಣ ಮಾಡುವ ಸಾಧ್ಯತೆ ಬಗ್ಗೆ ನಿವೇಶನಗಳ ಸ್ಥಳ ಪರಿಶೀಲನೆ ನಡೆಸಿದರು
ವರದಿ: ಮೆಟ್ರೋ ನ್ಯೂಸ್
ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ವರದಿ: ಲೋಕೇಶ್ ನಾಯ್ಕ .ಭಟ್ಕಳ ಭಟ್ಕಳ : ನವೆಂಬರ್ 23ರಾಜ್ಯದಲ್ಲಿ ನಡೆದ ಉಪಚುನಾವಣೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಭರ್ಜರಿ ಜಯ. ಭಟ್ಕಳದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಸಂಮ್ಸುದ್ದೀನ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ . ಈ ಸಂದರ್ಭದಲ್ಲಿ…