ವರದಿ :ಲೋಕೇಶ್ ನಾಯ್ಕ್ ಭಟ್ಕಳ.
ಉತ್ತರ ಕನ್ನಡ ಲೋಕಾಯುಕ್ತ ಎಸ್.ಪಿ ಕುಮಾರ್ ಚಂದ್ರ ನೇತೃತ್ವದಲ್ಲಿ ದಿಢೀರ್ ದಾಳಿ ಭಟ್ಕಳ ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ.
ಭಟ್ಕಳ ನ.15
ಜಿಲ್ಲೆಯ ಸೂಸಗಡಿ ನಿವಾಸಿ ಮೊಹಮ್ಮದ್ ಇದ್ರೀಶ್ ಮೋತಿ ಶ್ಯಾಮ್ ನಿನ್ನೆ ದಿ.14 ರಂದು ಕಾರವಾರದ ಲೋಕಾಯುಕ್ತಕ್ಕೆ ದೂರು ನೀಡಿದ್ದ ಕಾರಣ ಇಂದು ಜಿಲ್ಲಾ ಲೋಕಾಯುಕ್ತ ಎಸ್.ಪಿ ಕುಮಾರ ಚಂದ್ರ ಇನ್ಸ್ಪೆಕ್ಟರ್ ವಿನಾಯಕ ಮತ್ತು ಇನ್ಸ್ಪೆಕ್ಟರ್ ಪ್ರಸಾದ ಹಾಗೂ 14 ಸಿಬ್ಬಂದಿಗಳ ನೇತ್ರತ್ವದ ತಂಡ ಭಟ್ಕಳಕ್ಕೆ ಆಗಮಿಸಿದ್ದರು.
ದೂರುದಾರರ ಖಚಿತ ಮಾಹಿತಿಯ ಮೇರೆಗೆ ₹ 50 ಸಾವಿರ ರೂಪಾಯಿ ನಗದು ಲಂಚವನ್ನು ತಮ್ಮ ಕಚೇರಿಯಲ್ಲಿ ಸ್ವಿಕರಿಸುತ್ತಿರುವ ವೇಳೆ ಹಟಾತ್ ದಾಳಿ ನಡೆಸಿ ಪುರಸಭಾ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಲೋಕಾಯುಕ್ತ ಪೋಲಿಸ್ ಬಲೆಗೆ ಬಿದ್ದು ವಿಚಾರಣೆಗೆ ಒಳಪಟ್ಟಿದ್ದಾರೆ.
ಈ ಪ್ರಕರಣದ ಹಿನ್ನೆಲೆ: ಭಟ್ಕಳದ ಸೂಸಗಡಿ ಭಾಗದಲ್ಲಿ 20 ಗುಂಟೆ ಜಮೀನಿನಲ್ಲಿ 2003 ರಲ್ಲಿ ಮನೆ ನಿರ್ಮಾಣಕ್ಕಾಗಿ ಮೊಹಮ್ಮದ್ ಇದ್ರಿಶ್ ಮೋತಿಶ್ಯಾಮ್ ಎನ್ನುವವರು ಪುರಸಭೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದಿದ್ದರು.
ಕೇಲಸದ ನಿಮಿತ್ತ ಚೆನೈ ನಲ್ಲಿ ವಾಸ ವಿರುವುದರಿಂದ ಕಾರಾಣಾಂತರದಿಂದ ಮನೆ ನಿರ್ಮಾಣ ಸ್ಥಗಿತಗೋಳಿಸಿ 2015 ರಲ್ಲಿ ಮನೆ ಪೂರ್ಣಗೋಳಿಸಿದ್ದು ವಾಸ್ಥವ್ಯ ಹೊಂದಿರಲಿಲ್ಲ.
ನಂತರ ಈ ವರ್ಷದ ಜುಲೈ ನಲ್ಲಿ ವಾಸ್ತವ್ಯ ಮಾಡಲು ಮುಂದಾಗಿ ಪುರಸಭಾ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ವಿಚಾರಿಸಿದಾಗ ಪಾರಂನಂ-3 ಪಡೆಯಲು ಮನೆ ತೆರಿಗೆ ಭಾಕಿ ಯಾಗಿದ್ದು ಭಾಕಿ ಇರುವ ಮನೆ ತೆರಿಗೆ ದಂಡ ಸಹಿತ ಭರ್ತಿ ಮಾಡಿ ಪುನ್ಹ ಅರ್ಜಿ ಸಲ್ಲಿಸಿದರೆ ,ಪಾರಂ ನಂ-3 ಕೋಡಬಹುದು ಎಂದು ಪುರಸಭೆಯಲ್ಲಿ ತಿಳಿಸಿದ್ದರು
ಅದರಂತೆ ಇದ್ರೀಶ ಮೋತಿ ಸ್ಯಾಂ ಪುರಸಭಾ ಮುಖ್ಯಾಧಿಕಾರಿಯವರ ಜೋತೆ ಮಾತನಾಡಿದಾಗ,₹ 2 ಲಕ್ಷ ರುಪಾಯಿ ಗಳನ್ನು ಮನೆ ತೆರಿಗೆ ಮತ್ತು ದಂಡ ಬರಿಸುವಂತೆ ತಿಳಿಸಿದ್ದರು.
ಅದರಂತೆ ತಮ್ಮ ಸಂಬಂದಿ ಶಕೀಲ್ ರವರ ಬಳಿ ಹಣವನ್ನು ಕಳುಹಿಸಿದ್ದರು ದೂರುದಾರರ ಸಂಬಂದಿ ಶಕೀಲ್ ಪುರಸಭಾ ಮುಖ್ಯಧಿಕಾರಿಯವರ ಗಮನಕ್ಕೆ ತಂದಾಗ ಹಣವನ್ನು ಮನೆಗೆ ತಂದು ತಲುಪಿಸುವಂತೆ ತಿಳಿಸಿದ್ದರು ಅದರಂತೆ ₹ 2 ಲಕ್ಷ ಗಳನ್ನು ಕಳೆದ ಜುಲೈ ತಿಂಗಳಲ್ಲಿ ಪುರಸಭೆ ಮುಖ್ಯಾಧಿಕಾರಿಗೆ ನೀಡಿದ್ದು ಅದರಲ್ಲಿ ಕಟ್ಟಡ ತೆರಿಗೆಗೆ ₹ 90,068 ರೂ ಗಳ ರಷೀದಿ ನಿಡಿದ್ದು. ಉಳಿದ ಮೋತ್ತ ಒಂದು ಲಕ್ಷದ ಒಂಬತ್ತು ಸಾವಿರದ ಒಂಬೈನೂರ ಮುವತ್ತೆರಡು ರುಪಾಯಿ ₹(1,09,932)ರೂ ಹಿಂತಿರುಗಿಸದೆ ಕಳೆದ ಒಂದು ವರ್ಷ ದಿಂದ ಪಾರಂ ನಂ 3 ನ್ನು ನೀಡದೆ ಮತ್ತು ಅತ್ಯವಶ್ಯಕ ಯು.ಜಿ.ಡಿ ಸಂಪರ್ಕವನ್ನು ಕೂಡಾ ಕಲ್ಪಿಸದೆ ಇರುವುದರಿಂದ 11/12/2024 ರಂದು ಮರಳಿ ಮುಖ್ಯಾ ಧಿಕಾರಿಯವರಿಗೆ ಭೇಟಿ ಮಾಡಿ ಮನವಿ ಮಾಡಿದ್ದು ಅವೇಳೆ ಇನ್ನೂ ಒಂದು ಲಕ್ಷ ಹಣ ಪಾವತಿ ಮಾಡಿ ಎಂದಿದ್ದರು ಇದರಿಂದ ಗೋಂದಲಕ್ಕಿಡಾಗಿ ಪುರಸಭಾ ಆಧ್ಯಕ್ಷರನ್ನು ನೇರವಾಗಿ ಬೇಟಿಯಾಗಿ ಈ ವಿಚಾರ ಪ್ರಸ್ತಾಪಿಸಿದ್ದು ಅಧ್ಯಕ್ಷರು ಮುಖ್ಯಾಧಿಕಾರಿಯವರಿಗೆ ಕರೆದು ಅವರ ಕೆಲಸ ಈಗಾಗಲೇ ತುಂಬಾ ವಿಳಂಬ ವಾಗಿದೆ ಅದನ್ನು ಮಾಡಿ ಕೊಡುವಂತೆ ತಿಳಿಸಿರುತ್ತಾರೆ.
ನಂತರ ದೂರುದಾರರಾದ ಮೊಹಮ್ಮದ್ ಇದ್ರೀಷ್ ಮೋತಿ ಸ್ಯಾಂ 13/11/2024 ರಂದು ಮುಖ್ಯಾಧಿಕಾರಿಯ ಜೋತೆ ಮಾತನಾಡಿದಾಗ ಮತ್ತೆ ಒಂದು ಲಕ್ಷಕ್ಕೆ₹ (1,00,000) ಬೇಡಿಕೆ ಇಟ್ಟು ಕೂಡಲೆ ಮುಂಗಡವಾಗಿ 5೦,೦೦೦ ಸಾವಿರ ನೀಡಿ ಉಳಿದ ೫೦,೦೦೦ ಸಾವಿರ ಬಾಕಿ ಮೊತ್ತ ನಂತರ ನೀಡುವಂತೆ ತಿಳಿಸಿದ್ದು ಲಂಚ ನೀಡಲು ಮನಸ್ಸಿಲ್ಲದೆ ದೂರುದಾರ ನೇರವಾಗಿ ಕಾರವಾರದ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ದಾಖಲಿಸಿದ್ದಾರೆ.
ದೂರಿನನ್ವಯ ಇಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು ಸ್ಥಳ ಮಹಜರ್ ಹಾಗೂ ಪ್ರಥಮ ಹಂತದ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಲೋಕಾಯುಕ್ತ ಎಸ್.ಪಿ ಕುಮಾರ ಚಂದ್ರ ರವರು ಮಾದ್ಯಮ ದವರಿಗೆ ತಿಳಿಸಿದರು.