ವರದಿ : ಲೋಕೇಶ್ ನಾಯ್ಕ್.ಭಟ್ಕಳ.
ಕೆ.ಎಸ್.ಹೆಗಡೆ ಮಂಗಳೂರು ಆಸ್ಪತ್ರೆಯ ಖ್ಯಾತ ವೈದ್ಯರಿಂದ
ಭಟ್ಕಳ್ ತಾಲೂಕಾ ಆಸ್ಪತ್ರೆಯಲ್ಲಿ ನವೆಂಬರ್ 24 ರಂದು ವೈದ್ಯಕೀಯ ಶಿಬಿರ.
ಭಟ್ಕಳ ನವೆಂಬರ್ 20 ತಾಲೂಕಿನ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ತಾಲೂಕಾ ಆಸ್ಪತ್ರೆ ಭಟ್ಕಳ,ಹಾಗೂ ಕ್ರೀಯಾಶೀಲ ಗೆಳೆಯರ ಸಂಘ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಖ್ಯಾತ ವೈದ್ಯರಿಂದ ಭಟ್ಕಳದ ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಭಟ್ಕಳ ತಾಲೂಕಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ರವರು ಇಂದು ತಾಲೂಕಾ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನವೆಂಬರ್ 24 ರ ಬೆಳಿಗ್ಗೆ 9:00ಗಂಟೆಯಿಂದ ಮದ್ಯಾಹ್ನ 12:00 ಗಂಟೆಯವರೆಗೂ ಮಂಗಳೂರು ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಎಲುಬು ಹಾಗೂ ಕೀಲೂ ತಜ್ಞರಾದ ಡಾ. ವಿಕ್ರಮ್ ಶೆಟ್ಟಿ,
ಡಾ. ಪ್ರಥ್ವಿ ಕೆ.ಪಿ , ಶಸ್ತ್ರಚಿಕಿತ್ಸೆ ತಜ್ಞರಾದ ಡಾ. ಅಭಿಜಿತ್ ಶೆಟ್ಟಿ, ಪ್ಲಾಸ್ಟಿಕ್ ಸರ್ಜನ್ ಡಾ. ಭರತ್ ಜೆ ನಾಯ್ಕ ಲಭ್ಯವಿದ್ದು ಈ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಭಟ್ಕಳದ ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನಂತರ ಮಾತನಾಡಿದ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಸವಿತಾ ಕಾಮತ್,ಈ ಹಿಂದೆ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳು ಪ್ರತ್ಯೇಕವಾಗಿ ತಪಾಸಣೆ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದವು.ಆದರೆ ಇದೀಗ ಸರ್ಕಾರದ ಯೋಜನೆಗಳಾದ ಆಯುಷ್ಮಾನ ಭಾರತ, ಯಶಸ್ವಿನಿ ಕಾರ್ಡ್ ಮುಂತಾದ ಆರೋಗ್ಯಕ್ಕೆ ಸಂಬಂಧಿಸಿದ ವಿಮೆ ಪಾಲಿಸಿಗಳನ್ನು ಹೊಂದಿರುವದರಿಂದ ಎರಡು ಆಸ್ಪತ್ರೆಗಳು ಒಂದಕ್ಕೊಂದು ಸಂಯೋಜನಾತ್ಮಕವಾಗಿ ಕೆಲಸ ಮಾಡುವಂತಾಗಿದೆ. ತಾಲೂಕಾ ಆಸ್ಪತ್ರೆಯ, ಜಿಲ್ಲಾ ಆಸ್ಪತ್ರೆಯ ಮಟ್ಟಕ್ಕೆ ನಡೆಯುವ ವೈಧ್ಯಕೀಯ ಚಿಕಿತ್ಸೆಗಳು ಆಯಾ ಆಸ್ಪತ್ರೆಯಲ್ಲಿಯೇ ನಡೆಸಬೇಕಾಗುತ್ತದೆ. ಅದರ ಹೊರತಾಗಿ ಈ ಎರಡು ಆಸ್ಪತ್ರೆಯಲ್ಲಿ ಲಭ್ಯವಿರದ ಚಿಕಿತ್ಸೆಗಾಗಿ ಸರ್ಕಾರದ ಸೌಲಭ್ಯದೊಂದಿಗೆ ಖಾಸಗಿ ಆಸ್ಪತ್ರೆಗೆ ಸೂಚಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ್ ನಾಯ್ಕ, ತಾಲೂಕಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಮನಮೋಹನ ನಾಯ್ಕ,ಕ್ರಿಯಾಶೀಲ ಗೆಳೆಯರ ಸಂಘದ ಕಾರ್ಯದರ್ಶಿ ಪಾಂಡುರಂಗ ನಾಯ್ಕ್,ಶ್ರೀಕಾಂತ್ ನಾಯ್ಕ್, ಕ್ರಿಯಾಶೀಲ ಗೆಳಯರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…