ವರದಿ ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ
ಹೊಸಕೋಟೆ ನ.18
ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಿದ, ಸಮಾಜ ಸುಧಾರಣೆಗೆ ಶ್ರಮಿಸಿದ ಕನಕದಾಸರು ನಾಡು ಕಂಡ ಅಪ್ರತಿಮ ದಾಸ ಶ್ರೇಷ್ಠರು. ಇವರ ಆದರ್ಶಗಳು ಪ್ರತಿಯೊಬ್ಬರಿಗೂ ದಾರಿ ದೀಪವಾಗಿವೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ನಗರದ ತಾಲೂಕು ಕಚೇರಿ ಮುಂಬಾಗ ಕನಕ ದಾಸರ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ಹಾಗೂ ತಾಲೂಕು ಆಡಳಿತವತಿಯಿಂದ ನಡೆದ ಭಕ್ತ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಸಮಾನತೆ ಭಾವವನ್ನು ಬಿತ್ತಿದ ಹಲವಾರು ದಾರ್ಶನಿಕರಲ್ಲಿ ಭಕ್ತ ಕನಕದಾಸರು ಪ್ರಥಮರು, ಕನಕದಾಸರು ಮದ್ವಾಚಾರ್ಯರ ದೈತ ತತ್ವಗಳನ್ನು ಮೈಗೂಡಿಸಿಕೊಂಡು ತಿಮ್ಮಪ್ಪನಾಯಕ, ಕನಕ ನಾಯಕ ಹಾಗೂ ಕನಕ ದಾಸ ಎಂಬ ಹೆಸರುಗಳಿಂದ ವಿಷ್ಣುವಿನ ಆರಾಧಕರಾಗಿ ದಾಸರ ಪದಗಳ ಮೂಲಕ ಸಮಾಜದಲ್ಲಿ ಸಮಾನತೆಯ ಭಾವ ಹಾಗೂ ದೈವ ಭಕ್ತಿಯ ಮೂಲಕ ಸಮಾಜ ಸುಧಾರಕರಾಗಿ ಸಮಾಜದ ಉನ್ನತಿಗೆ ಶ್ರಮಿಸಿದವರಲ್ಲಿ ಅಗ್ರಗಣ್ಯರು.
ಕನಕದಾಸರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು.ಅವರ ತತ್ವಾದರ್ಶಗಳನ್ನು ಪಸರಿಸುವ ಕೆಲಸ ನಿರಂತರವಾಗಿ ಆಗಬೇಕು ಎಂದರು. ತಹಸೀಲ್ದಾರ್ ಸೋಮಶೇಖರ್ ಮಾತನಾಡಿ, ಕನಕದಾಸರು ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡಿದ್ದರು.
ಸಮಾಜದಲ್ಲಿ ಬದುಕಿನ ಅರ್ಥದ
ಅರಿವು ಹೊಂದಿದ್ದರು ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು, ತಾಪಂ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ, ಹಾಲುಮತ ಮಹಾ ಸಭಾದ ತಾಲೂಕು ಅಧ್ಯಕ್ಷ ಅಪ್ಪಸಂದ್ರ ನಾರಾಯಣಸ್ವಾಮಿ, ಸಮುದಾಯದ ಮುಖಂಡರಾದ ಮುನಿಶಾಮಣ್ಣ ಮುನಿರಾಜ್, ಆರ್.ಕೃಷ್ಣಮೂರ್ತಿ ಪಟೇಲ್, ಗಣೇಶ್, ಬೀರಪ್ಪ, ಹಲಸಹಳ್ಳಿ ರವಿರಾಜ್, ನಟರಾಜ್, ಮತ್ತಿತರರು
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…