ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಭಟ್ಕಳ ವತಿಯಿಂದ ತಹಸೀಲ್ದಾರರಿಗೆ ಮನವಿ

ವರದಿ :ಲೋಕೇಶ್ ನಾಯ್ಕ್ ಭಟ್ಕಳ.

ಭಟ್ಕಳ :ನ.14
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಭಟ್ಕಳ ಘಟಕ ನವೆಂಬರ್ 25 ರಂದು ನಡೆಸಲು ಹೊರಟಿರುವ ಅಹೋರಾತ್ರಿ ಸತ್ಯಾಗೃಹ ಧರಣಿಗೆ ಅನುಮತಿ ನೀಡಲು ತಹಸೀಲ್ದಾರರು ಸಕ್ಷಮ ಪ್ರಾಧಿಕಾರವಲ್ಲವೆಂದು ಹೇಳುತ್ತಿರುವುದು ಬಾಲಿಶತನದಿಂದ ಕೂಡಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಶಂಕರ್ ನಾಯ್ಕ ಹೇಳಿದರು.

ಇಂದು  ತಾಲೂಕಿನ ಆಡಳಿತ ಸೌಧದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕಾರ್ಯಕರ್ತರು ಧರಣಿಗೆ ಅನುಮತಿಯನ್ನು ನಿರಾಕರಿಸಿರುವುದನ್ನು ವಿರೋಧಿಸಿ ತಹಶಿಲ್ದಾರರಿಗೆ ಮನವಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ ಅವರು, ತಾಲೂಕಿನ ಕಂದಾಯ ಇಲಾಖೆಯಲ್ಲಿ ಹಲವಾರು ಸಿಬ್ಬಂದಿಗಳು ವರ್ಗಾವಣೆ ಮಾರ್ಗಸೂಚಿ ಮತ್ತು ಇನ್ನಿತರ ನಿಮಮಾಳಿಗಳನ್ನು ಪಾಲಿಸದೆ ಒಂದೇ ಕಡೆ ಹತ್ತು- ಹದಿನೈದು ವರ್ಷಗಳಿಂದ ಒಂದೇ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಕಾನೂನು ಬಾಹಿರವಾಗಿರುವುದರಿಂದ ಕೆ ಸಿ ಎಸ್‌ ಆರ್ ನಿಯಮಗಳನ್ನು ಉಲ್ಲಂಘಿಸಿ ರಾಜಕೀಯ ಮತ್ತು ಇನ್ನಿತರ ಪ್ರಭಾವವನ್ನು ಬಳಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.  ಸಿಬ್ಬಂದಿಗಳನ್ನೂ ವರ್ಗಾವಣೆಗೊಳಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿರುತ್ತವೆ .  ಸಿಬ್ಬಂದಿಗಳುನ್ನು ವರ್ಗಾವಣೆ ಗೊಳಿಸುವಂತೆ ಸಂವಿಧಾನ ಬದ್ದವಾಗಿ  ಪ್ರತಿಭಟನೆ ನಡೆಸಲು ಅನುಮತಿ ಪಡೆದು ನಾವು ಪ್ರತಿಭಟನೆಯಲ್ಲಿ ನಿರತರಾಗಿದ್ದಾಗ ಈ ಹಿಂದಿನ ತಹಶಿಲ್ದಾರರು ಪ್ರತಿಭಟನಾ ನಿರತ ಸ್ಥಳವನ್ನು ಪೋಲಿಸ್ ಇಲಾಖೆಯ  ಸಹಾಯದೊಂದಿಗೆ ತೆರವುಗೊಳಿದ್ದರು.

ತಹಸೀಲ್ದಾರರ ಈ ನಡೆಯನ್ನು  ಪ್ರಶ್ನಿಸಿ ನಾವು ಹೈಕೋರ್ಟ್ ಗೆ ಮೊರೆಹೋದಾಗ,ಹೈಕೋರ್ಟ್ ಅರ್ಜಿದಾರರು ಪ್ರತಿಭಟನೆ ನಡೆಸಲು ಸ್ವಾತಂತ್ರ್ಯರು ಎಂದು ಅಭಿಪ್ರಾಯಪಟ್ಟಿರುತ್ತದೆ.

ಹೈಕೊರ್ಟ್ ನ ಆದೇಶದ ಮೇರೆಗೆ ಮತ್ತೊಮ್ಮೆ ಪ್ರತಿಭಟನೆಗೆ ಮುಂದಾಗಿ ಅನುಮತಿಗಾಗಿ ಕೇಳಿಕೊಂಡಾಗ ತಹಸೀಲ್ದಾರರು ಭಟ್ಕಳ ತಾಲೂಕಿನಲ್ಲಿ ಪ್ರತಿಭಟನೆಗೆ ಅನುಮತಿ ನೀಡಲು ತಾವು ಸಕ್ಷಮ ಪ್ರಾಧಿಕಾರವಾಗಿರುವುದಿಲ್ಲ ಎಂದು ಹೇಳಿದೆ.

ಹಾಗಾದರೆ ಸಕ್ಷಮ‌ ಪ್ರಾಧಿಕಾರ ಯಾರು ಎಂಬುವುದನ್ನು ತಹಶಿಲ್ದಾರರು ಸ್ಪಷ್ಟಪಡಿಸಬೇಕು ಹಾಗೂ ಸಂಬಂಧಪಟ್ಟ ಪ್ರಾಧಿಕಾರದಿಂದ ನವೆಂಬರ 25 ರಂದು ನಡೆಯುವ ಅಹೋರಾತ್ರಿ ಧರಣಿಗೆ ಅನುಮತಿ ಕೊಡಿಸುವುದು ತಹಶಿಲ್ದಾರರ ಜವಾಬ್ಧಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ತಾಲೂಕಾಧ್ಯಕ್ಷ ನಾಗೇಂದ್ರ ನಾಯ್ಕ, ಉಪಾಧ್ಯಕ್ಷ ವಸಂತ ದೇವಾಡಿಗ, ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ, ದಯಾನಂದ ನಾಯ್ಕ, ಮೋಹನ ನಾಯ್ಕ, ದಯಾನಂದ ಮೊಗೇರ ಇದ್ದರು.

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ವರದಿ ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ ನ 20ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ ಎಂದು ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್ ತಿಳಿಸಿದರು. ತಾಲೂಕಿನ ಅತ್ತಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ…

    Leave a Reply

    Your email address will not be published. Required fields are marked *

    You Missed

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ಕೆ.ಎಸ್.ಹೆಗಡೆ  ಮಂಗಳೂರು ಆಸ್ಪತ್ರೆಯ ಖ್ಯಾತ ವೈದ್ಯರಿಂದಭಟ್ಕಳ್  ತಾಲೂಕಾ  ಆಸ್ಪತ್ರೆಯಲ್ಲಿ ನವೆಂಬರ್ 24 ರಂದು ವೈದ್ಯಕೀಯ ಶಿಬಿರ.

    ಕೆ.ಎಸ್.ಹೆಗಡೆ  ಮಂಗಳೂರು ಆಸ್ಪತ್ರೆಯ ಖ್ಯಾತ ವೈದ್ಯರಿಂದಭಟ್ಕಳ್  ತಾಲೂಕಾ  ಆಸ್ಪತ್ರೆಯಲ್ಲಿ ನವೆಂಬರ್ 24 ರಂದು ವೈದ್ಯಕೀಯ ಶಿಬಿರ.

    ಕನಕದಾಸರು ನಾಡು ಕಂಡ ಅಪ್ರತಿಮ ದಾಸ ಶ್ರೇಷ್ಠರು / ಶಾಸಕ ಶರತ್ ಬಚ್ಚೇಗೌಡ

    ಕನಕದಾಸರು ನಾಡು ಕಂಡ ಅಪ್ರತಿಮ ದಾಸ ಶ್ರೇಷ್ಠರು / ಶಾಸಕ ಶರತ್ ಬಚ್ಚೇಗೌಡ

    ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದ

    ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದ

    ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ / ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಿಂದ ಸನ್ಮಾನ

    ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ / ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಿಂದ ಸನ್ಮಾನ