ವರದಿ : ಆರತಿ ಗಿಳಿಯಾರು
ಉಡುಪಿ ನ.14
ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ವತಿಯಿಂದ ಭಾರತದ ಪ್ರಥಮ ಪ್ರಧಾನಿ, ಭಾರತ ರತ್ನ ಪಂಡಿತ್ ಜವಾಹರಲಾಲ್ ನೆಹರು ಅವರ ಜಯಂತಿಯನ್ನು ದೀಪ ಬೆಳಗಿಸುವುದರ ಮೂಲಕ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಾಯಕರಾದ ನಾಗೇಶ್ ಕುಮಾರ್ ಉದ್ಯಾವರ ಅವರು ಭಾರತಕ್ಕೆ ಪಂಡಿತ್ ಜವಾಹರಲಾಲ್ ನೆಹರು ಅವರ ಕೊಡುಗೆಯನ್ನು ಸ್ಮರಿಸಿ ದೇಶ ಇಂದು ಅಭಿವೃದ್ಧಿ ಕಾಣಲು ಪ್ರಥಮ ಪ್ರಧಾನಿಯಾಗಿ ಜವಾಹರಲಾಲ್ ನೆಹರು ಅವರ ಅಭಿವೃದ್ಧಿಯ ಚಿಂತನೆ ಕಾರಣ. ಬಳಿಕ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು ಅವರು ಮಾತನಾಡಿ ನೆಹರು ಅವರ ಕೈಗಾರಿಕಾ ಕ್ರಾಂತಿಯಿಂದಾಗಿ ಇಂದು ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ನೆಹರು ಅವರಿಗೆ ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದಾಗಿ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ನರಸಿಂಹಮೂರ್ತಿ, ಹರೀಶ್ ಕಿಣಿ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫೂದ್ದೀನ್ ಶೇಖ್, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್, ನಾಯಕರಾದ ಜ್ಯೋತಿ ಹೆಬ್ಬಾರ್, ಅಣ್ಣಯ್ಯ ಶೇರಿಗಾರ್, ಭಾಸ್ಕರ್ ರಾವ್ ಕಿದಿಯೂರು, ಶೇಖ್ ವಾಹೀದ್, ರಿಯಾಝ್ ಬೈಂದೂರು, ಲಕ್ಷ್ಮೀಕಾಂತ್ ಬೆಸ್ಕೂರು, ಲಕ್ಷ್ಮಣ್ ಪೂಜಾರಿ, ಉದಯ್, ಸತೀಶ್ ಕುಮಾರ್ ಮಂಚಿ, ಸತೀಶ್ ಕೊಡವೂರು, ವೆಂಕಟೇಶ್ ಪೆರಂಪಳ್ಳಿ, ಫಾರೂಖ್ ಚಂದ್ರನಗರ, ಅಬೂಬಕ್ಕರ್ ಉಡುಪಿ, ಶಂಶೂದ್ದೀನ್ ಮಜೂರು, ಗೋಪಾಲ್ ಬಂಗೇರ, ಮನ್ನಾ ಇಕ್ಬಾಲ್, ಸಾದಿಕ್ ಹೂಡೆ, ನಝೀರ್ ನೇಜಾರು , ಶ್ರೀಧರ್ ಶೇಟ್, ಅರ್ಚನಾ ದೇವಾಡಿಗ, ಪ್ರಶಾಂತ್ ಸುವರ್ಣ, ಸೂರ್ಯ ಸಾಲ್ಯಾನ್, ನಾಗೇಂದ್ರ ಪುತ್ರನ್, ವಿಲ್ಸನ್ ಸಿಕ್ವೇರಾ, ಸಜ್ಜನ್ ಶೆಟ್ಟಿ, ಸಂಜಯ್ ಆಚಾರ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು…