ವರದಿ: ಲೋಕೇಶ್ ನಾಯ್ಕ್. ಭಟ್ಕಳ.
ಭಟ್ಕಳ : 13 ನವೆಂಬರ್
ತಾಲೂಕಿನಲ್ಲಿ ತಲೆದೂರಿರುವ ರೇತಿ ಅಭಾವದ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ.
ಆಟೋ ಚಾಲಕರ ಗಣೇಶೋತ್ಸವದ ಮೈದಾನದಲ್ಲಿ ಸಾವಿರಾರು ಕಾರ್ಮಿಕರು ಜಮಾವಣೆಗೊಂಡು ಪ್ರತಿಭಟನಾ ಮೆರವಣಿಗೆ ಕೈಗೊಂಡರು ಮುಖ್ಯವೃತ್ತದವರೆಗೂ ಸಾಗಿದ ಮೆರವಣಿಗೆ ಬಳಿಕ ಆಡಳಿತ ಸೌಧವನ್ನು ತಲುಪಿತು.
ಮೆರವಣಿಗೆ ಯುದ್ದಕ್ಕೂ ತಾಲ್ಲೂಕು ಮತ್ತು ಜಿಲ್ಲಾಡಳಿತ ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲು ಪ್ರಯತ್ನಿಸಿದರು ಪೋಲಿಸರು ಮದ್ಯಪ್ರವೇಶಿಸಿ ಮೆರವಣಿಗೆ ಮುಂದೆ ಸಾಗುವ ನಿಟ್ಟಿನಲ್ಲಿ ಪ್ರಯತ್ನಿಸಿದರು ಈ ಹಂತದಲ್ಲಿ ಪೋಲಿಸರು ಹಾಗೂ ಪ್ರತಿಭಟನಾಕಾರ ನಡುವೆ ವಾಗ್ವಾದ ನಡೆದೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಯಿತು.
ಕಳೆದ ಆರು ತಿಂಗಳಿಂದ ಇದೇ ರೇತಿ ಅಭಾವದಿಂದ ನಿರ್ಮಾಣ ಕಾರ್ಯಗಳು ಕುಂಠಿತಗೊಂಡಿದೆ ಅದರಿಂದಾಗಿ ಬಡ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಕಾರ್ಮಿಕರು ತಮ್ಮ ಸಂಕಷ್ಟವನ್ನು ತೋಡಿಕೊಂಡರು.
ಒಂದು ಹಂತದಲ್ಲಿ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡು ಕಾರ್ಮಿಕರು, ಕಾರ್ಮಿಕ ಮುಖಂಡರ ವಿರುದ್ಧವೆ ಹರಿಹಾಯ್ದರು. ಕೂಡಲೆ ಜಿಲ್ಲಾಧಿಕಾರಿಗಳು ಅಥವಾ ಉಸ್ತುವಾರಿ ಸಚಿವರು ಪ್ರತಿಭಟನಾನಿರತ ಸ್ಥಳಕ್ಕೆ ಆಗಮಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದು ಕೂತರು.
ಸಂಘಟಕರು ಹಾಗೂ ಪ್ರತಿಭಟನಾಕಾರರ ನಡುವೆ ಸಮನ್ವಯತೆ ಕೊರತೆ ನಡುವೆ ಸಹಾಯಕ ಆಯುಕ್ತರಿಗೆ ರೇತಿ ಅಭಾವ ಸಮಸ್ಯೆಯನ್ನು ನೀಗಿಸುವಂತೆ ಕೊರಿ ಮನವಿಯನ್ನು ನೀಡಲಾಯಿತು.
ಒಟ್ಟಿನಲ್ಲಿ ಕಳೆದ ಆರು ತಿಂಗಳಿನಿಂದ ರೇತಿ ಅಭಾವದ ಕಾರಣದಿಂದ ತೀವೃ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕಾರ್ಮಿಕರು ತಮ್ಮ ಸಂಕಷ್ಟವನ್ನು ಪ್ರತಿಭಟನೆಯ ಮೂಲಕ ಹೊರಹಾಕಿದ್ದು ಮುಂಬರುವ ದಿನಗಳಲ್ಲಿ ರೇತಿ ಸಮಸ್ಯೆ ಬಗೆಹರಿಯದೆ ಇದ್ದರೆ ಸರ್ಕಾರಕ್ಕೆ ಸಂಕಷ್ಟ ತಪ್ಪಿದ್ದಲ್ಲ ಎಂಬ ಸಂದೇಶವನ್ನು ರವಾನಿಸುವಲ್ಲಿ ಕಾರ್ಮಿಕರು ಯಶಸ್ವಿಯಾಗಿದ್ದಾರೆ ಎನ್ನಬಹುದಾಗಿದೆ.