ವರದಿ ನಾರಾಯಣಸ್ವಾಮಿ ಸಿ.ಎಸ್
ಹೊಸಕೋಟೆ ನ. 13
ಹದಿ ಹರೆಯದ ವಯಸ್ಸಿನಲ್ಲಿ ವ್ಯಸನಕ್ಕೆ ಬಲಿ ಯಾಗಿ ಆರೋಗ್ಯ ಹಾಳು ಮಾಡಿಕೊಳ್ಳುವ ಯುವಜನತೆ ಎಚ್ಚರವಾಗಿ ರಬೇಕು ಎಂದು ವೈದ್ಯಾಧಿಕಾರಿ ಡಾ.ಕಿರಣ್ ಹೇಳಿದರು. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾದಕ ವ್ಯಸನ ಮತ್ತು ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಕಾಲೇಜು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ‘ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ
ಯುವಜನತೆ ಶಿಸ್ತುಬದ್ಧ ಜೀವನ ಶೈಲಿ ರೂಪಿಸಿಕೊಂಡರೆ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ. ಯುವ ಸಮಾಜ ದೇಶದ ಶಕ್ತಿಯಾಗಬೇಕು ಎಂದರು. ವಕೀಲ ಬಿ.ಎಂ.ಪ್ರಭಾಕರ್‌ಮಾತನಾಡಿ, ವ್ಯಸನಕ್ಕೆ ದಾಸರಾಗಿರುವ ವ್ಯಕ್ತಿಗಳು ಸಮಾಜಕ್ಕೆ ಕಂಟಕರಾಗುತ್ತಾರೆ. ಗಾಂಜಾ, ಅಪೀಮು, ಕೊಕೇನ್ನಂತಹ ಮಾದಕ ವಸ್ತುಗಳಸೇವನೆಯಿಂದತನ್ನಸುತ್ತಮುತ್ತಲಿನ ಪರಿಸರ ಹಾಳು ಮಾಡುವ ಚಿಂತನೆಗಳು ಸೃಷ್ಟಿಯಾಗುತ್ತವೆ. ಇದು ಸಮಾಜ ಘಾತಕ ಕೆಲಸಗಳಿಗೆ ನಾಂದಿಯಾಗಿ ಅಪರಾಧಗಳು ಹೆಚ್ಚಾಗುತ್ತವೆ ಎಂದರು.
ಹೆಲ್ತ್ ಇನ್ಸ್‌ಪೆಕ್ಟರ್ ರಘು, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎನ್. ಗೋಪಾಲಗೌಡ, ಪ್ರಾಚಾರ್ಯ ಡಾ.ಕೆ. ಮೋಹನ್‌ಕುಮಾರ್, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಶ್ರೀವಾಣಿಕೋನರೆಡ್ಡಿ, ನೆಹರು ಯುವಕೇಂದ್ರದ ಜಿಲ್ಲಾ ಅಧಿಕಾರಿ ಶ್ರೀವಾಣಿ, ಹೆಲ್ತ್‌ಇನ್ಸ್‌ಪೆಕ್ಟರ್‌ರಘು, ಪ್ರಾಂಶುಪಾಲ ಡಾ.ಮೋಹನ್‌ಕುಮಾರ್, ವಕೀಲಬಿ.ಎಂ. ಅನಂತ ಪ್ರಭಾಕರ್, ನಾಡಪ್ರಭು ಕೆಂಪೇಗೌಡ ಯು ವಕರ ಸಂಘದ ಅಧ್ಯಕ್ಷ ಬಿ.ಎಂ.ಸಾಗರ್, ನಿರ್ದೇಶಕ ರಾಜಶೇಖ ರರೆಡ್ಡಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸೈಯದ್ ಮಹಬೂಬ್, ದೇವಿದಾಸ್ ಸುಬ್ರಾಯ್ ಸೇಲ್, ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ. ಚೌಡೇಗೌಡ, ಜಿಯಾವುಲ್ಲಾ, ಉಪನ್ಯಾಸ ಕರಾದ ಡಾ.ಅಮೀರ್ ಪಾಷ, ಸಂಗೀತಾ, ಶಶಿಕಲಾ, ಕೃಷ್ಣಪ್ಪ ಇತರರಿದ್ದರು.
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…