ವರದಿ :ಲೋಕೇಶ್ ನಾಯ್ಕ್,ಭಟ್ಕಳ.
ಹೆಜ್ಜೇನು ಕಡಿತಕ್ಕೆ ಒಳಗಾದ ಮಹಿಳೆ ಆಸ್ಪತ್ರೆಗೆ ದಾಖಲು.
ಭಟ್ಕಳ: 5 ನವೆಂಬರ್
ತಾಲೂಕಿನ ಜಾಲಿಕೋಡಿಯಲ್ಲಿ ಮಹಿಳೆಯೊಬ್ಬರು ಜೇನು ಕಡಿತಕ್ಕೆ ಒಳಗಾಗಿ ಗಂಭಿರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.
ಮಾಸ್ತಮ್ಮ ಮಂಜಪ್ಪ ನಾಯ್ಕ ಎಂಬ ಮಹಿಳೆ ತಮ್ಮ ಮನೆಯ ಎದುರು ಬೆಳಿಗ್ಗೆ ಕಸ ಗುಡಿಸುತ್ತಿರುವಾಗ ಹೆಜ್ಜೇನು ಹುಳು ಹಿಂಡೊಂದು ಏಕಾಏಕಿ ದಾಳಿ ನಡೆಸಿದೆ.
ಈ ಸಂದರ್ಭದಲ್ಲಿ ಮಹಿಳೆ ಕೂಗಿಕೊಂಡಾಗ ಮಗ ಸುರೇಶ ಮತ್ತು ಸೊಸೆ ಮಹಿಳೆಯ ಸಹಾಯಕ್ಕೆ ದಾವಿಸಿದ್ದು ಅವರು ಕೂಡ ಜೇನು ನೊಣಗಳ ಕಡಿತಕ್ಕೆ ಒಳಗಾಗಿದ್ದಾರೆ.
ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿ ತಾಲೂಕಾ ಆಸ್ಪತ್ರೆಗೆ ಕರೆತಂದಿದ್ದು,ನೂರಾರು ಹೆಜ್ಜೇನು ಕಡಿತದ ತಿವ್ರತೆಗೆ ಮಹಿಳೆಯನ್ನು ಭಟ್ಕಳ ತಾಲೂಕಾ ಆಸ್ಪತ್ರೆ ಯ ತಿವೃನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಮಹಿಳೆಯ ಮಗ ಹಾಗೂ ಸೊಸೆ ಹೆಜ್ಜೇನು ಕಡಿತದಿಂದ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…