ಮೆಟ್ರೋ ವರದಿ
ದಾವಣಗೆರೆ ನ.5
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ದಾವಣಗೆರೆ ತಾಲೂಕಿನ 42 ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಸಂಸದೆ ಡಾ. ಪ್ರತಿಭಾ ಮಲ್ಲಿಕಾರ್ಜುನ್ ಅವರು ಮಾತನಾಡಿದರು
ಇಲ್ಲಿನ ಹಳ್ಳಿಗಳಲ್ಲಿರುವ ಆಸ್ತಿಗಳ ಸಮಸ್ಯೆಗಳನ್ನು ಮತ್ತು ಹಳ್ಳಿ ಆಸ್ತಿಗಳನ್ನು ಡಿಜಿಟಲ್ ಸ್ವರೂಪಕ್ಕೆ ತರಲು ಜನವರಿ ಅಂತ್ಯಕ್ಕೆ ಪ್ರತಿ ಮನೆಗೆ ಈ ಸ್ವತ್ತು ತಲುಪಿಸುವ ಕಾರ್ಯವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಿಡಿಓ ಮಾಡಬೇಕು ಎಂದು ಸಂಸದೆ ಡಾ. ಪ್ರತಿಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು
ಭೂಮಿ ನಿವೇಶನ ಮನೆಗಳಿಗೆ ಸಂಬಂಧಿಸಿದ ಆಸ್ತಿ ಕಲಹ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿದೆ ಈ ಆಸ್ತಿಗಳ ಭೂ ದಾಖಲೆ ಡಿಜಿಟಲ್ ಸ್ವರೂಪ ಪಡೆದರೆ ವ್ಯಾಜ್ಯಗಳನ್ನು ಕೊಂಚ ಕಡಿಮೆ ಮಾಡಲು ಸಾಧ್ಯವಿದೆ ಇಂತಹ ವ್ಯಾಜ್ಯಗಳಿಗೆ ಸಂಬಂಧಿಸಿ ದೂರುಗಳು ನನ್ನ ಬಳಿಗೆ ಹೆಚ್ಚಾಗಿ ಬರುತ್ತಿವೆ ಈ ಸ್ವತ್ತು ವಿವರಣೆಯ ಕಾರ್ಯ ಆದ್ಯತೆಯ ಮೇರೆಗೆ ನಡೆಯಬೇಕು ಎಂದು ತಾಕೀತು ಮಾಡಿದರು
ಈ ಸ್ವತ್ತು ವಿವರಣೆಗೆ ಮುನ್ನೂರು ರೂಪಾಯಿ ಶುಲ್ಕ ಹಾಗೂ 30 ದಿನಗಳ ಕಾಲಾವಧಿ ಇದೆ ಸರ್ವರ್ ಸಮಸ್ಯೆಯ ನೆಪ ಹೇಳದೆ ಜನರಿಗೆ ಸ್ಪಂದಿಸಬೇಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ವಿಚಾರ ತಲುಪಿಸಿ ತಿಳುವಳಿಕೆ ನೀಡಬೇಕು ಈ ಸ್ವತ್ತು ವಿವರಣೆಗೆ ತರಬೇಕಾಗಿರುವ ಪೌತಿ ಖಾತೆ ಬದಲಾವಣೆಗೆ ಆಂದೋಲನ ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ ಹಿಟ್ನಾಳ್ ಪಿಡಿಒ ಗಳಿಗೆ ಸೂಚಿಸಿದರು
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…