ವರದಿ :ಲೋಕೇಶ್ ನಾಯ್ಕ್. ಭಟ್ಕಳ.
ಭಟ್ಕಳ: 1 ನವೆಂಬರ್
ದೀಪಾವಳಿಯ ಸಂದರ್ಭದಲ್ಲಿ ತಮ್ಮ ವ್ಯಾಪಾರ ವಹಿವಾಟುಗಳ ಅಭಿವೃದ್ಧಿಯ ದೃಷ್ಟಿಯಿಂದ ತಾಲೂಕಿನ ಹೆಸರಾಂತ ಉದ್ಯಮಿಗಳಾದ ಈರಪ್ಪ ನಾಯ್ಕ ಗರ್ಡಿಕರ್ ತಮ್ಮ ಕಛೇರಿ ಹಾಗೂ ವಾಹನಗಳಿಗೆ ಶುಕ್ರವಾರ ಅಮಾವಾಸ್ಯೆ ಯಂದು ಪೂಜೆ ಸಲ್ಲಿಸಿದರು.
ಶುಕ್ರವಾರ ಬೆಳಿಗ್ಗೆ ಅವರು ತಮ್ಮ ಕುಟುಂಬ ಸಮೇತರಾಗಿ ಪುರವರ್ಗದ ಸಪರಿವಾರ ಶ್ರೀ ಮಂಡಜಟ್ಕೆಶ್ವರ ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ತಮ್ಮ ಸಿಬ್ಬಂದಿ ವರ್ಗದ ಜತೆಗೂಡಿ ದ್ವಿಚಕ್ರ ವಾಹನ, ಕಾರು, ಲಾರಿ ಹಾಗೂ ಜೆಸಿಬಿ ಗಳಿಗೆ ಪೂಜೆ ಸಲ್ಲಿಸಿ ನರೆದವರಿಗೆ ಪ್ರಸಾದ ವಿತರಣೆ ಮಾಡಿದರು.
ಶ್ರೀಯುತರು ಸರಳ ಸಜ್ಜನಿಕೆಯ ವ್ಯೆಕ್ತಿತ್ವದವರಾಗಿದ್ದು ಸದಾ ಹಸನ್ಮುಖಿಯಾಗಿರುತ್ತಾರೆ ತಾಲೂಕಿನಲ್ಲಿ ಬ್ಯಾಂಕಿಂಗ್, ನಿರ್ಮಾಣ ಕ್ಷೇತ್ರದಲ್ಲಿ ಖ್ಯಾತಿ ಹೊಂದಿದ್ದು. ಎಂ.ಜಿ.ಎಂ ಸೌಹಾರ್ದ ಸೊಸೈಟಿ ಪ್ರೈ. ಲಿಮಿಟೆಡ್ ಹಣಕಾಸು ಸಂಸ್ಥೆಯ ಸಂಸ್ಥಾಪಕರಾಗಿ, ಅಧ್ಯಕ್ಷರಾಗಿ ತಾಲ್ಲೂಕಿನಾದ್ಯoತ ಎಂ. ಜಿ. ಎಂ.ನ ಶಾಖೆ ಯನ್ನು ತೆರೆದಿದ್ದು ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ಕಲ್ಪಿಸುವ ವ್ಯೆವಸ್ಥೆ ಗೆ ರೂವಾರಿಯಾಗಿ ರಾಜಕೀಯ ರಂಗದಲ್ಲಿ, ಹಲವಾರು ಹಣಕಾಸು ಸಂಸ್ಥೆಯ ಅಧ್ಯಕ್ಷರಾಗಿ. ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅನುಭವಿಯಾಗಿದ್ದು. ತಮ್ಮ ದುಡಿಮೆಯಲ್ಲಿ ಬಹುಪಾಲು ಹಣವನ್ನು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಿಗೆ ದಾನದ ರೂಪದಲ್ಲಿ ನೀಡುವ ಮೂಲಕ ಸಮಾಜದಲ್ಲಿ ಗಣ್ಯ ವ್ಯೆಕ್ತಿ ಯಾಗಿದ್ದು ಗಮನಾರ್ಹ.
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…