ಹಬ್ಬದ ಬಿಸಿ ಗ್ರಾಹಕರ ಕೈ ಸುಡುತ್ತಿರುವ ಅಡಿಗೆ ಎಣ್ಣೆ

ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ


ದೀಪಾವಳಿ ಹಬ್ಬಕ್ಕೆ  ಗ್ರಾಹಕರ ಕೈ ಸುಡುತ್ತಿರುವ ಅಡುಗೆ ಎಣ್ಣೆ


ಯಾವುದೇ ಅಡುಗೆ ಮಾಡಬೇಕಾದರೂ ಅಡುಗೆ ಎಣ್ಣೆ ಬೇಕೇ ಬೇಕು. ಆದರೆ, ಬೆಲೆ ಏರಿಕೆ ಬಿಸಿ ತಾಗುತ್ತಿದೆ. ದೇಶದಲ್ಲಿ ಎಣ್ಣೆಕಾಳು ಬೆಳೆಯದೆ ಇರುವುದರ ಜತೆಗೆ ಸರ್ಕಾರ ಆಮದು ಸುಂಕ ಹೆಚ್ಚಳ ಮಾಡಿರುವುದರಿಂದ ಬೆಲೆಗಳು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

ಚಿಂತೆಗೀಡು: ಒಂದು ಲೀಟರ್ ಅಡುಗೆ ಎಣ್ಣೆಗೆ 25 ರಿಂದ 30 ರೂ. ಹೆಚ್ಚಾಗಿದ್ದು ಜೀವನ ನಿರ್ವಹಣೆ ಕಷ್ಟಕರವಾಗಿದೆ. ಕಳೆದ ತಿಂಗಳು ಒಂದು ಲೀಟರ್ ಅಡುಗೆ ಎಣ್ಣೆಗೆ 100 ರೂ. ಇದ್ದ ಬೆಲೆ ಈಗ ಒಂದು ಲೀಟರ್ 138 ರಿಂದ 140, 150 ರೂ.ಗೆ ಏರಿಕೆ ಕಂಡಿದೆ. ಸೋಯಾಬಿನ್ 130 ರಿಂದ 150, ಸೂರ್ಯಕಾಂತಿ ಎಣ್ಣೆ 125 ರಿಂದ 150ರೂ., ಸಾಸಿವೆ ಎಣ್ಣೆ 145ರಿಂದ 180 ರೂ., ಕಡಲೆಕಾಯಿ ಎಣ್ಣೆ 185ರಿಂದ 195 ರೂ.ಗೆ ಏರಿಕೆಯಾಗಿದೆ. 5 ಲೀಟರ್ ಗೋಲ್ಡ್ ವಿನ್ನರ್, ಫ್ರೀಡಂ ಸನ್ ಪ್ಯೂರ್ ಎಣ್ಣೆ 560 ರಿಂದ 670 ರೂವರೆಗೆ ಏರಿಕೆಯಾಗಿದೆ. ಸನ್ ಫ್ಲೋರ್ ಎಣ್ಣೆ ಲೀಟ ರ್‌ಗೆ 138 ರಿಂದ 145ರೂ.ವರೆಗೆ ಮಾರಾಟವಾ ಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ದೀ ಪಾವಳಿ ಹಬ್ಬ ಇರುವುದರಿಂದ ಅಡುಗೆ ಎಣ್ಣೆದರಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ. ಇದರಿಂದ ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದೆ. ಹೋಟೆಲ್ ಮಾಲಿಕರಿಗೆ ಬೆಲೆ ಏರಿಕೆ ಬಿಸಿ: ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಬಿಸಿ ಹೋಟೆಲ್ ಮಾಲೀಕರಿಗೆ ತಟ್ಟುತ್ತಿದೆ.

ಒಂದು ಕಡೆ ತೆಂಗಿನಕಾಯಿ ಬೆಲೆ ಏರಿಕೆ ಹೆಚ್ಚಳ, ಮತ್ತೊಂದು ಕಡೆ ಅಡುಗೆ ಎಣ್ಣೆ ಬೆಲೆ ಏರಿಕೆ ಹೆಚ್ಚಾಗಿದ್ದು ಸಾಕಷ್ಟು ಸಂಕಷ್ಟ ಎದುರಾಗಿದೆ. ಅಡುಗೆ ಎಣ್ಣೆ ಬೆಲೆ ಏರಿಕೆ ಹಿನ್ನೆಲೆ ಹೋಟೆಲ್‌ಗಳಲ್ಲಿ ತಿಂಡಿ ಊಟದ ಬೆಲೆ ಏರಿಕೆ ಮಾಡಿದ್ದಾರೆ. 80 ರೂ. ಇದ್ದ ಊಟ ಈಗ 95ರೂ., ತಿಂಡಿ 50 ಇದ್ದದ್ದು 65 ರೂ.ಗೆ ಏರಿಕೆ ಮಾಡಿದ್ದಾರೆ. ವಡೆ ಬೋಂಡಾ ಬಜ್ಜಿ ಇವುಗಳ ಬೆಲೆ 5ರೂ.ನಿಂದ 8ರೂ.ಗೆ ಹೆಚ್ಚಳ ಮಾಡಿದ್ದಾರೆ ಎಂದು ಗ್ರಾಹಕರು ಹೇಳುತ್ತಾರೆ. ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಕಚ್ಚಾ ಸೋ ಯಾಬಿನ್, ತಾಳೆ, ಸೂರ್ಯಕಾಂತಿ ಎಣ್ಣೆ ಮೇಲಿನ ಆಮದು ಸುಂಕ ಹೆಚ್ಚು ಮಾಡಿದೆ. ಅಡುಗೆ ಎಣ್ಣೆ ಬೆಲೆ ಏರಿಕೆಗೆ ಪ್ರಮುಖವಾಗಿದೆ. ಕಚ್ಚಾತಾಳೆ ಸೋ ಯಾಬೀನ್, ಸೂರ್ಯಕಾಂತಿ ಎಣ್ಣೆಗಳ ಮೇಲಿನ ಆಮದು ಸುಂಕ ಶೇಕಡ 5.5ರಿಂದ 27,5ಕ್ಕೆ ಮತ್ತು ಸಂಸ್ಕರಿಸಿದ ಖಾದ್ಯ ತೈಲದ ಮೇಲಿನ 13.7ರಿಂದ ಶೇ 35ಕ್ಕೆ ಏರಿಕೆಯಾಗಿ ಶೇ.22 ಹೆಚ್ಚಳವಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.



ಬೆಲೆ ಏರಿಕೆಯ ಬಿಸಿ ಪ್ರತಿ ಹೋಟೆಲ್ ಮಾಲಿಕರಿಗೆ ತಟ್ಟುತ್ತಿದೆ. ಯಾವುದೇ ಅಡುಗೆ ಮಾಡಬೇಕಾದರೆ ಅಡುಗೆ ಎಣ್ಣೆ ಬೇಕು. ಈಗ ಬೆಲೆ ಹೆಚ್ಚಳದಿಂದ ಆಹಾರ ಪದಾರ್ಥ ಹೆಚ್ಚಳ ಅನಿವಾರ್ಯ.

• ರಂಜಿತ್ ಭಟ್ , ಹೋಟೆಲ್ ಮಾಲಿಕರು ಹೊಸಕೋಟೆ




ಸಮರ್ಪಕ ಅಡುಗೆ ಎಣ್ಣೆಮಾರುಕಟ್ಟೆಗೆ ಬರುತ್ತಿಲ್ಲ. ಅಡುಗೆ ಎಣ್ಣೆಯನ್ನು ವಿವಿಧ ಕಡೆಗಳಿಂದ ತರಿಸಿಕೊಳ್ಳಲಾಗುತ್ತಿದೆ. . ಪ್ರತಿ ಎಣ್ಣೆಯ ದರ ಹೆಚ್ಚಳವಾಗಿದೆ. ದೀಪಾವಳಿ ಹಬ್ಬಕ್ಕೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

• ಬಸವರಾಜು , ವ್ಯಾಪಾರಿ, ಎಸ್ ವಿ ಆರ್ ಪ್ರಾವಿಜನ್ ಸ್ಟೋರ್ ಸೂಲಿಬೆಲೆ



ಅಡುಗೆ ಎಣ್ಣೆ ಹೆಚ್ಚಳವಾಗಿದೆ ಎಂದು ಉಪಯೋಗಿಸದೇ ಇರುವುದು ಆಗುವುದಿಲ್ಲ. ಎಷ್ಟೇ ಬೆಲೆಯಾದರೂ ಅಡುಗೆ ಎಣ್ಣೆ ಬಳಸಬೇಕು.

• ರಂಜಿತಾ , ಗೃಹಿಣಿ ಚಿಕ್ಕಕೋಲಿಗ

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ವರದಿ ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ ನ 20ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ ಎಂದು ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್ ತಿಳಿಸಿದರು. ತಾಲೂಕಿನ ಅತ್ತಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ…

    Leave a Reply

    Your email address will not be published. Required fields are marked *

    You Missed

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ಕೆ.ಎಸ್.ಹೆಗಡೆ  ಮಂಗಳೂರು ಆಸ್ಪತ್ರೆಯ ಖ್ಯಾತ ವೈದ್ಯರಿಂದಭಟ್ಕಳ್  ತಾಲೂಕಾ  ಆಸ್ಪತ್ರೆಯಲ್ಲಿ ನವೆಂಬರ್ 24 ರಂದು ವೈದ್ಯಕೀಯ ಶಿಬಿರ.

    ಕೆ.ಎಸ್.ಹೆಗಡೆ  ಮಂಗಳೂರು ಆಸ್ಪತ್ರೆಯ ಖ್ಯಾತ ವೈದ್ಯರಿಂದಭಟ್ಕಳ್  ತಾಲೂಕಾ  ಆಸ್ಪತ್ರೆಯಲ್ಲಿ ನವೆಂಬರ್ 24 ರಂದು ವೈದ್ಯಕೀಯ ಶಿಬಿರ.

    ಕನಕದಾಸರು ನಾಡು ಕಂಡ ಅಪ್ರತಿಮ ದಾಸ ಶ್ರೇಷ್ಠರು / ಶಾಸಕ ಶರತ್ ಬಚ್ಚೇಗೌಡ

    ಕನಕದಾಸರು ನಾಡು ಕಂಡ ಅಪ್ರತಿಮ ದಾಸ ಶ್ರೇಷ್ಠರು / ಶಾಸಕ ಶರತ್ ಬಚ್ಚೇಗೌಡ

    ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದ

    ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದ

    ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ / ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಿಂದ ಸನ್ಮಾನ

    ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ / ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಿಂದ ಸನ್ಮಾನ