ವರದಿ :ಲೋಕೇಶ್ ನಾಯ್ಕ್.ಭಟ್ಕಳ.
ಭಟ್ಕಳ ನಾಮಧಾರಿ ಸಮಾಜದ ವತಿಯಿಂದ 2023-2024 ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ.
ಭಟ್ಕಳ ಅಕ್ಟೋಬರ್. 27
ಶ್ರೀ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಸಭಾವನದಲ್ಲಿ 2023-2024 ರ ಸಾಲಿನಲ್ಲಿ ಶೈಕ್ಷಣಿಕ,ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನ, ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದ್ದು.
ವಿಶ್ರಾಂತ ಜಿಲ್ಲಾ ನ್ಯಾಯಾಧಿಶರಾದ ರವಿ,ಎಂ.ನಾಯ್ಕ್
ದೀಪ ಬೆಳಗುವುದರ ಮುಖೇನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು
70 ರ ದಶಕಗಳ ಹಿಂದೆ ನಮ್ಮನಾಮಧಾರಿ ಸಮಾಜ
ಶೈಕ್ಷಣಿಕವಾಗಿ, ಆರ್ಥಿಕವಾಗಿ ,ಸಾಮಾಜಿಕವಾಗಿ ಹಿಂದೆ
ಉಳಿದವರಾಗಿದ್ದೆವು. ನಮ್ಮಲ್ಲಿ ಬಡತನ ಅತೀ ಹೆಚ್ಚಾಗಿತ್ತು. ನಾವು ಕೃಷಿಕರಾಗಿ ಅವಲಂಬಿತವಾಗಿದ್ದವರು . ಈಗಲೂ ಕೃಷಿಕಾರಾಗಿದ್ದೇವೆ ಅದರಲ್ಲಿ ತಪ್ಪೇನಿಲ್ಲ ಎಲ್ಲಿಯಾದರು ನ್ಯಾಯಯುತವಾಗಿ ಉತ್ತಮ ಬದುಕು ಕಟ್ಟಿ ಸಾಗಿಸುತ್ತಿದ್ದಾರೆ ಎಂದರೆ ಅದು ಕೃಷಿಕರು ಮಾತ್ರ.
ಇಂದು ನಮ್ಮ ಸಮಾಜ ಎಲ್ಲಾ ಕ್ಷೇತ್ರ ಗಳಲ್ಲೂ ಮುಂದುವರಿದಿದೆ. ಇಂದಿನ ಯುವಕರಲ್ಲಿ ವಿದ್ಯಾರ್ಥಿಗಳಿಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವುದರ ಬಗ್ಗೆ ವಿವೇಚನೆ ಇದೆ.
ಆದ್ದರಿಂದ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಯಲ್ಲಿ ಭಾಗಿಯಾಗದೆ ಸಂವಿಧಾನ,ಕಾನೂನಿಗೆ ತಲೆಬಾಗಿ,ಗುರು ಹಿರಿಯರನ್ನೂ ತಂದೆ -ತಾಯಿ ಯನ್ನು ಗೌರವಿಸಿ ಸಮಾಜದಲ್ಲಿ ಗೌರವಯುತ ಪ್ರಜೆಗಳಾಗಿ ಸಮಾಜದಲ್ಲಿ ಬದುಕೋಣ,ನಮ್ಮ ನಾಮಧಾರಿ ಸಮಾಜದ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಾವೆಲ್ಲರೂ ಭಾಗಿಯಾಗಬೇಕು ಎಂದು ತಿಳಿಸಿದರು.
ಭಟ್ಕಳ ಹಡೀನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಮಂಜುನಾಥ ನಾಯ್ಕ್ ಮಾತನಾಡಿ ಪ್ರತಿಭಾವಂತ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸುವುದು ಸುಲಭದ ಮಾತಲ್ಲ, ಹಿಂದಿನ ದಿನಗಳಲ್ಲಿ ಸಮಾಜದಲ್ಲಿ ಶಿಕ್ಷಣ, ಕ್ರೀಡೆ,ಸೇರಿ ಹಲವಾರು ಕ್ಷೇತ್ರಗಳಲ್ಲಿ ಸಾಧಿಸಿದ ಸಾಧಕರುಗಳು ಅನೇಕ ಪ್ರತಿಭೆಗಳು,ಕಮರಿ ಹೋಗುತ್ತಿದ್ದವು. ಆದರೆ ಇಂದಿನ ದಿನಗಳಲ್ಲಿ ಅಂತಹ ಪ್ರತಿಭೆಗಳನ್ನು ನಮ್ಮ ಸಮಾಜ ಬಾಂಧವರು ಹುಡುಕಿ ಗುರುತಿಸಿ ಅಂಥವರನ್ನು ಸಮಾಜದಲ್ಲಿ ಮುಖ್ಯ ವಾಹಿನಿಗೆ ತರುವ ಮುಖಾಂತರ ಸ್ಫೂರ್ತಿ ತುಂಬುವುದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಉದ್ದೇಶ. ಆದ್ದರಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ನಮ್ಮ ನಾಮಧಾರಿ ಸಮಾಜದ ಈ ಕಾರ್ಯಕ್ಕೆ ಸಂತಸ ತಂದಿದೆ ಎಂದರು.
ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು
ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಪುರಸ್ಕರಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅರುಣ್ ನಾಯ್ಕ್ ಅಧ್ಯಕ್ಷರು ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ. ಮುಖ್ಯ ಅತಿಥಿ ಮಂಜುನಾಥ್ ನಾಯ್ಕ್ ಉಪನ್ಯಾಸಕರು ಕಾಲೇಜು ಹಾಡೀನ್, ಕೃಷ್ಣ ನಾಯ್ಕ್ ಗೌರವಧ್ಯಕ್ಷರು ನಾಮಧಾರಿ ಸಮಾಜ ಗುರುಮಠ,ಭಟ್ಕಳ. ಸಮಾಜದ ಉಪಾಧ್ಯಕ್ಷರು ಎಂ,ಕೆ.ನಾಯ್ಕ್ ಕಾರ್ಯದರ್ಶಿ ಡಿ.ಎಲ್ ನಾಯ್ಕ್. ಮತ್ತಿತರರು ಇದ್ದರು.
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…