ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಭಟ್ಕಳ ತಹಶೀಲ್ದಾರರ ಮೂಲಕ  ಸರ್ಕಾರಕ್ಕೆ ಮನವಿ

ವರದಿ  :ಲೋಕೇಶ್ ನಾಯ್ಕ್. ಭಟ್ಕಳ.

ಶಿರೂರು  ಗುಡ್ಡ ಕುಸಿತ  ಕಣ್ಮರೆಯಾದ   ಜೀವಗಳ
ಪತ್ತೆ ಕಾರ್ಯಾಚರಣೆ  ಸ್ಥಗಿತ  ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಭಟ್ಕಳ ತಾಲೂಕಾ ನಾಮಧಾರಿ ಸಮಾಜದವರಿಂದ ತಹಶಿಲ್ಧಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ


ಭಟ್ಕಳ :ಅ.25
ನಾಮಧಾರಿ ಯುವಕರು ಬಿದಿಗಿಳಿದು ಹೋರಾಟಕ್ಕೆ ಮುಂದಾದರೆ ಭಟ್ಕಳ ಭಟ್ಕಳವಾಗಿ ಉಳಿಯುವುದಿಲ್ಲ.

ಕೇರಳದ ಯುವಕನ ಶವಪತ್ತೆಗಾಗಿ ಸರ್ಕಾರ ತೋರಿದ ಕಾಳಜಿಯನ್ನು ದುರಂತದಲ್ಲಿ ನಾಪತ್ತೆಯಾದ ಸ್ಥಳೀಯ ವ್ಯಕ್ತಿಗಳ ಶವ ಪತ್ತೆಗೆ ತೋರುತ್ತಿಲ್ಲ ಎಂದು ನಾಮಧಾರಿ ಸಮಾಜದ ಗೌರವಾಧ್ಯಕ್ಷ ಕೃಷ್ಣ ನಾಯ್ಕ ಹೇಳಿದರು.

ಜಲೈ 16 ರಂದು ಅಂಕೋಲಾ ತಾಲೂಕಿನಲ್ಲಿ ಸಂಭವಿಸದ ಶಿರೂರು  ಗುಡ್ಡಕುಸಿತ ಅವಘಡದಲ್ಲಿ
11 ಜನರು ನಾಪತ್ತೆಯಾಗಿದ್ದು ಅದರಲ್ಲಿ  ಇಲ್ಲಿಯವರೆಗೂ 9 ಶವಗಳು ಪತ್ತೆಯಾಗಿದೆ

ನಾಪತ್ತೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಪತ್ತೆಗೆ ಗೋವಾದಿಂದ ಬೃಹತ್ ಯಂತ್ರಗಳನ್ನು ಕರೆಸಿ ಕಾರ್ಯಾಚರಣೆ ಮಾಡಲಾಗಿತ್ತು. ಆದರೆ ನಾಪತ್ತೆಯಾದ ಸ್ಥಳೀಯ ಇಬ್ಬರು ನಾಮಧಾರಿ ಸಮಾಜದ ವ್ಯಕ್ತಿಗಳ ಶವ ಪತ್ತೆ ಮಾಡುವ ಮುನ್ನ ಸರ್ಕಾರ ಕಾರ್ಯಾಚರಣೆಯನ್ನು ಸ್ಥಗಿತ ಗೊಳಿಸಿದೆ

ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಇಂದು ಭಟ್ಕಳ ತಾಲೂಕಾ ನಾಮಧಾರಿ ಸಮಾಜ ತಾಲೂಕಿನ ಆಡಳಿತ ಸೌಧದಲ್ಲಿ ಜಮಾವಣೆಗೊಂಡು ತಹಶಿಲ್ಧಾರರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ಥಳೀಯರ ಜೀವಕ್ಕೆ ಸರ್ಕಾರ ಬೆಲೆ ನೀಡುತ್ತಿಲ್ಲ. ಇದೇ ಧೋರಣೆಯನ್ನು ಮುಂದುವರೆಸಿದರೆ ಇಡೀ ಸಮಾಜ ಒಟ್ಟಾಗಿ ಜಿಲ್ಲೆಯಾದ್ಯಂತ ಪ್ರತಿಭಟನೆಗೆ ಇಳಿಯುತ್ತೇವೆ ಎಂದು ಏಚ್ಚರಿಕೆ ನೀಡಿದರು.

ನಾಮಧಾರಿ ಸಮಾಜದ ಶ್ರೀ ಹಳೇಕೋಟೆ  ಹನುಮಂತ  ದೇವಸ್ಥಾನ ಹಾಗೂ  ಮಾವಳ್ಳಿ ಭಾಗದ ನಾಮಧಾರಿ ಅಧ್ಯಕ್ಷರಾದ ಆರ್.ಕೆ ನಾಯ್ಕ ಮಾತನಾಡಿ ಶಿರೂರು ಗುಡ್ಡ ಕುಸಿತಕ್ಕೆ ಐ.ಆರ್.ಬಿ ಕಂಪನಿ ನಡೆಸಿದ ಅವೈಜ್ಞಾನಿಕ ಕಾಮಗಾರಿ ನೇರ ಕಾರಣವಾಗಿದ್ದು, ಚಿಕ್ಕ ಬಾಲಕನಿಗೂ ಕೂಡಾ  ಗುಡ್ಡ ಕೊರೆದಿರುವುದು ಅವೈಜ್ಞಾನಿಕ ಎಂದು ತಿಳಿಯುತ್ತದೆ. ಆದರೆ ಐ.ಆರ್.ಬಿ ಕಂಪನಿ ಇದನ್ನು ಅಲ್ಲಗಳೆಯುತ್ತಿದ್ದು ಈ ಅವಘಡಕ್ಕೆ ಪ್ರಾಕೃತಿಕ ವಿಕೋಪ ಕಾರಣ ಎಂದು ವಾದಿಸುತ್ತಿದೆ. ಐ.ಆರ್.ಬಿ ಕಂಪನಿಯನ್ನು ಬಗ್ಗಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.
ಇಂತಹ ದುರಂತ ಸಂಭವಿಸಿದರೂ ನಮ್ಮ ಸರ್ಕಾರ ಹಾಗೂ ಜನಪ್ರತಿನಿದಿಗಳು ಅವರ ವಿರುದ್ಧ ಮೃದು ಧೊರಣೆ ತೋರುತ್ತಿದ್ದಾರೆ.

ದುರಂತ ಸಂಭವಿಸಿದ ನಂತರ ಸರ್ಕಾರ ಈ ಘಟನೆಯನ್ನು ನಿರ್ಲಕ್ಷ್ಯತನದಿಂದ ನೋಡಿತ್ತು. ಇಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯಾಚರಣೆ ಮಾಡಿದರೆ ಒಂದು ವಾರದಲ್ಲಿ ಕಾರ್ಯಾಚರಣೆ ಮಾಡಬಹುದಿತ್ತು.

ಸರ್ಕಾರ ಕಾರ್ಯಾಚರಣೆಯನ್ನು ಮುಂದುವರೆಸಿ ನಾಮಧಾರಿ ಸಮಾಜದ ಇಬ್ಬರು ಯುವಕರಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ್ ನಾಯ್ಕ ಶವವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ನೊಂದ ಕುಟುಂಬಕ್ಕೆ ಹೆಚ್ಚಿನ ಪರಿಹಾರವನ್ನು ನೀಡಬೇಕು. ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಐ.ಆರ್.ಬಿ ಕಂಪನಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ್ ನಾಯ್ಕ, ಗೋವಿಂದ ನಾಯ್ಕ, ಡಿ.ಎಲ್ ನಾಯ್ಕ, ಸುಬ್ರಾಯ ನಾಯ್ಕ, ವಿಠ್ಠಲ್ ನಾಯ್ಕ, ಶ್ರೀಧರ್ ನಾಯ್ಕ, ಎಮ್.ಕೆ.ನಾಯ್ಕ, ನಾಗೇಶ ನಾಯ್ಕ, ಭವಾನಿಶಂಕರ ಮತ್ತಿತರರು ಇದ್ದರು.

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ವರದಿ ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ ನ 20ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ ಎಂದು ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್ ತಿಳಿಸಿದರು. ತಾಲೂಕಿನ ಅತ್ತಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ…

    Leave a Reply

    Your email address will not be published. Required fields are marked *

    You Missed

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ಕೆ.ಎಸ್.ಹೆಗಡೆ  ಮಂಗಳೂರು ಆಸ್ಪತ್ರೆಯ ಖ್ಯಾತ ವೈದ್ಯರಿಂದಭಟ್ಕಳ್  ತಾಲೂಕಾ  ಆಸ್ಪತ್ರೆಯಲ್ಲಿ ನವೆಂಬರ್ 24 ರಂದು ವೈದ್ಯಕೀಯ ಶಿಬಿರ.

    ಕೆ.ಎಸ್.ಹೆಗಡೆ  ಮಂಗಳೂರು ಆಸ್ಪತ್ರೆಯ ಖ್ಯಾತ ವೈದ್ಯರಿಂದಭಟ್ಕಳ್  ತಾಲೂಕಾ  ಆಸ್ಪತ್ರೆಯಲ್ಲಿ ನವೆಂಬರ್ 24 ರಂದು ವೈದ್ಯಕೀಯ ಶಿಬಿರ.

    ಕನಕದಾಸರು ನಾಡು ಕಂಡ ಅಪ್ರತಿಮ ದಾಸ ಶ್ರೇಷ್ಠರು / ಶಾಸಕ ಶರತ್ ಬಚ್ಚೇಗೌಡ

    ಕನಕದಾಸರು ನಾಡು ಕಂಡ ಅಪ್ರತಿಮ ದಾಸ ಶ್ರೇಷ್ಠರು / ಶಾಸಕ ಶರತ್ ಬಚ್ಚೇಗೌಡ

    ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದ

    ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದ

    ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ / ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಿಂದ ಸನ್ಮಾನ

    ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ / ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಿಂದ ಸನ್ಮಾನ