ಸಾರ್ವಜನಿಕವಾಗಿ ಮೆಚ್ಚುಗೆಗೆ ವ್ಯಕ್ತವಾದ ನ್ಯಾಯಾಧೀಶರ ಕಾರ್ಯ ವೈಕರಿ

ವರದಿ  :ಲೋಕೇಶ್ ನಾಯ್ಕ್ ಭಟ್ಕಳ.

ಮಾನವೀಯತೆ ಮೆರೆದ ಭಟ್ಕಳ ಜೆ. ಎಂ. ಎಫ್. ಸಿ ನ್ಯಾಯಾಲಯದ ನ್ಯಾಯಧೀಶರು ಶ್ರೀಕಾಂತ್‌ ಕರುಣೆ.

ಭಟ್ಕಳ: ಅಕ್ಟೋಬರ್ :24.
ಭಟ್ಕಳ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತ್‌ ಕರುಣೆಯವರು,  ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ನಡೆಯಬೇಕಿದ್ದ ಕಾರ್ಯಕ್ರಮವೊಂದಕ್ಕೆ ತೆರಳಲು ಸಿದ್ದರಾಗಿ ನಿಂತ ವೇಳೆ . ನ್ಯಾಯಾಲಯದ ಆವರಣದ ಎದುರಗಡೆಯಿದ್ದ 50 ವರ್ಷದ ಈ ನಿರ್ಗತಿಕನ ಮೇಲೆ ಬಿದ್ದಿದೆ. ಈತನ ದಯನೀಯ ಸ್ಥಿತಿ ನೋಡಿ,
ಸಂಭ್ರಮದ ಕಾರ್ಯಕ್ರಮಕ್ಕೆ ತೆರಳುವ ಮನಸ್ಥಿತಿಯಲ್ಲಿದ್ದ ನ್ಯಾಯಾಧೀಶರನ್ನು ಭಾವುಕರನ್ನಾಗಿಸಿದೆ.

ಸಾಮಾನ್ಯವಾಗಿ ನಿರ್ಗತಿಕರನ್ನು, ಭಿಕ್ಷುಕರನ್ನು, ಮಾನಸಿಕ ಅಸ್ವಸ್ಥರನ್ನ ಕಂಡ್ರೆ, ಮೂಗು ಮುರಿಯುವವರೇ ಹೆಚ್ಚು. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎನ್ನುವವರ ಸಂಖ್ಯೆ ತುಂಬಾ ವಿರಳ. . ಈ ಮಾನಸಿಕ ಅಸ್ವಸ್ಥನ ದಯನೀಯ ಸ್ಥಿತಿಗೆ ಮಿಡಿದ ನ್ಯಾಯಾಧೀಶರ ಮನಸ್ಸು ಮಹತ್ಕಾರ್ಯವನ್ನೇ ಮಾಡಿದೆ…

ಕೊಳಕು ಬಟ್ಟೆ, ಕೈಯಲ್ಲಿ ಐದಾರು ಪ್ಲಾಸ್ಟಿಕ್ ವಸ್ತುಗಳನ್ನು ತುಂಬಿದ ಚೀಲಗಳು, ಹೊಲಸು ಗಡ್ಡ, ಕುರುಚಲು ತೆಲೆಗೂದಲಿನ ಈತ ನರಳುತ್ತ ನಿಂತಿದ್ದವನನ್ನು ನೋಡಿ, ನ್ಯಾಯಾಧೀಶರ ಮನಸ್ಸು ಮರುಗಿದೆ. ಈತನಿಗೊಂದು ಸರಿಯಾದ ಮಾರ್ಗ ತೋರಿಸಿಬೇಕು ಎಂದು ನಿರ್ಧರಿಸಿದ ನ್ಯಾಯಾಧಿಶರಾದ ಶ್ರೀಕಾಂತ್‌ ಕರುಣೆಯವರು, ತಕ್ಷಣ ಆತನನ್ನು ಕರೆಸಿ ನ್ಯಾಯಾಲಯದ ಆವರಣದಲ್ಲಿ ಕೂರಿಸಿ
ಈತನನ್ನು ವಿಚಾರಿಸಿದಾಗ ತನ್ನ ಹೆಸರು ನಾಗಭೂಷಣ ಪದ್ಮನಾಭ ಆಚಾರ್ಯ ಎಂದು. ಹಿರಿಯಡಕದ ನಿವಾಸಿ ಎಂದು ಹೇಳಿದ್ದಾನೆ.

ನಾಗಭೂಷಣ ಆಚಾರ್ಯ ಸುಮಾರು 10 ವರ್ಷಗಳ ಹಿಂದೆ ಮನೆಯಿಂದ ಕೋಪಗೊಂಡು ಹೊರ ಬಿದ್ದಿದ್ದು ಭಟ್ಕಳ, ಮುರ್ಡೇಶ್ವರ ಹಾಗೂ ಹೊನ್ನಾವರ ಬಸ್ ನಿಲ್ದಾಣ ರಸ್ತೆಯ ಬದಿಯಲ್ಲಿಯೇ ದಿನ ಕಳೆಯುತ್ತಿದ್ದ ಎಂದೂ ಹೇಳಿಕೊಂಡಿದ್ದಾನೆ. 7 ವರ್ಷಗಳ ಹಿಂದೆ ಅಪೆಂಡಿಕ್ಸ ಆಪರೇಶನ್ ಆಗಿದೆ ಎಂದು ಹೊಟ್ಟೆಯಲ್ಲಿ ಹಾಕಲಾಗಿದ್ದ ಹೊಲಿಗೆಯನ್ನು ತೋರಿಸಿದ್ದಾನೆ. ಈತನ ಹೊಟ್ಟೆಯ ಮೇಲೆ ಒಂದು ಗಾಯವಾಗಿದ್ದು ಅದು ಆಪರೇಶನ್ ನಿಂದ ಆಗಿರುವ ಗಾಯ ಎಂದು ಹೇಳುತ್ತಾ ಅದರಿಂದ ನೋವಿಲ್ಲ ಎಂದು ಹೇಳಿದ್ದಾನೆ..

ನಂತರ ಸ್ಥಳಕ್ಕೆ ಕ್ಷೌರಿಕರನ್ನು ಕರೆಸಿದ ನ್ಯಾಯಾಧೀಶರು, ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ತಲೆ ಕೂದಲು ಹಾಗೂ ಶೇವಿಂಗ್ ಮಾಡಿಸಿದ್ದಾರೆ. ಬಳಿಕ ಆರೋಗ್ಯ ಇಲಾಖೆಯವರನ್ನು ಕೆರೆಸಿ, ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ರು. ನಂತರ ಬಟ್ಟೆ ಬದಲಾಯಿಸಿ ಪೊಲೀಸರ ಸಹಾಯದಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ…

ಇನ್ನು ನಾಗಭೂಷಣನಿಗೆ ತಿಳಿಸಿ ಹೇಳಲು ಪೊಲೀಸ್ ಹಾಗೂ ಸಮಾಜ ಸೇವಕ ಮಂಜು ಮುಟ್ಠಳ್ಳಿ ಮತ್ತು ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು, ಆಸ್ಪತ್ರೆಯ ವೈದ್ಯ ಹಾಗೂ ವಿಶ್ವನಾಥ ಸೇರಿದಂತೆ ಹಲವರು ಶ್ರಮಿಸಿದ್ರು.

ಭಟ್ಕಳದಲ್ಲಿ ಕಳೆದ 4 ವರ್ಷಗಳಿಂದ ಯಾರಿಗೂ ತೊಂದರೆ ಕೊಡದೇ ತಿರುಗಾಡುತ್ತಿದ್ದ ಈತನನ್ನು ಈ ಹಿಂದೆ ಆಸ್ಪತ್ರೆಗೆ ಸೇರಿಸಬೇಕು ಎಂದು ಹಲವರು ಬಾರಿ ನೋಡಿದ್ದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ. ಆದ್ರೀಗ  ಆತನ ಮನವೊಲಿಸಿ ಆಸ್ಪತ್ರೆಗೆ ಸೇರಿಸುವಲ್ಲಿ ನ್ಯಾಯಾಧೀಶರ ಪರಿಶ್ರಮಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ವರದಿ ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ ನ 20ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ ಎಂದು ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್ ತಿಳಿಸಿದರು. ತಾಲೂಕಿನ ಅತ್ತಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ…

    Leave a Reply

    Your email address will not be published. Required fields are marked *

    You Missed

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ಕೆ.ಎಸ್.ಹೆಗಡೆ  ಮಂಗಳೂರು ಆಸ್ಪತ್ರೆಯ ಖ್ಯಾತ ವೈದ್ಯರಿಂದಭಟ್ಕಳ್  ತಾಲೂಕಾ  ಆಸ್ಪತ್ರೆಯಲ್ಲಿ ನವೆಂಬರ್ 24 ರಂದು ವೈದ್ಯಕೀಯ ಶಿಬಿರ.

    ಕೆ.ಎಸ್.ಹೆಗಡೆ  ಮಂಗಳೂರು ಆಸ್ಪತ್ರೆಯ ಖ್ಯಾತ ವೈದ್ಯರಿಂದಭಟ್ಕಳ್  ತಾಲೂಕಾ  ಆಸ್ಪತ್ರೆಯಲ್ಲಿ ನವೆಂಬರ್ 24 ರಂದು ವೈದ್ಯಕೀಯ ಶಿಬಿರ.

    ಕನಕದಾಸರು ನಾಡು ಕಂಡ ಅಪ್ರತಿಮ ದಾಸ ಶ್ರೇಷ್ಠರು / ಶಾಸಕ ಶರತ್ ಬಚ್ಚೇಗೌಡ

    ಕನಕದಾಸರು ನಾಡು ಕಂಡ ಅಪ್ರತಿಮ ದಾಸ ಶ್ರೇಷ್ಠರು / ಶಾಸಕ ಶರತ್ ಬಚ್ಚೇಗೌಡ

    ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದ

    ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದ

    ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ / ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಿಂದ ಸನ್ಮಾನ

    ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ / ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಿಂದ ಸನ್ಮಾನ