ವರದಿ ನಾರಾಯಣಸ್ವಾಮಿ ಸಿ.ಎಸ್
ಹೊಸಕೋಟೆ ಅ.18
ಗ್ರಾಮೀಣ ಕಲೆಗಳನ್ನು ಜೀವಂತವಾಗಿ ಇಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ರಂಗಭೂಮಿ ಕಲಾವಿದರು ಮತ್ತು ನಾಟಕ ನಿರ್ದೇಶಕರನ್ನು ಗೌರವದಿಂದ ಕಾಣಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಸೂಲಿಬೆಲೆ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂ ಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಯೂರ ವರ್ಮರಾಜ್ಯ ಪ್ರಶಸ್ತಿ ಹಾಗೂಗಾಂಧಿಪುರಸ್ಕಾರರಾಜ್ಯ ಪ್ರಶಸ್ತಿಗೆ ಭಾಜನರಾದ ರಂಗ ನಿರ್ದೇಶಕ ಡಿ.ಲಕ್ಷ್ಮಿ ನಾರಾಯಣ್ ಅವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.
ವಾಲ್ಮೀಕಿ ಸಮುದಾಯದ ಕಲಾವಿದರು ಮಹತ್ತರ ಪ್ರಶಸ್ತಿಗೆ ಭಾಜನರಾಗಿ ಸಮುದಾಯಕ್ಕೆ ಕೀರ್ತಿ ತಂದಿದ್ದಾರೆ. ಇಂತಹ ಮೇರು ಕಲಾವಿದರನ್ನು ಗುರುತಿಸಿ ಸಂಘ ಸಂಸ್ಥೆಗಳು, ಸಂಘಟನೆಗಳು ಆಭಿನಂದಿಸಬೇಕು ಎಂದು ಹೇಳಿದರು.
ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ. ಎನ್.ಗೋಪಾಲಗೌಡ, ಯುವ ಮುಖಂಡ ಜಿ.ನಾರಾಯಣಗೌಡ, ಜನಾರ್ದನರೆಡ್ಡಿ, ಮಂಜುನಾಥ್, ಡಾ. ಡಿ.ಟಿ.ವೆಂಕಟೇಶ್, ಎಸ್. ವೈ.ನಾಗರಾಜ್, ಮುರುಳಿ, ಅಕ್ಟರ್‌ಅಲಿಖಾನ್, ಜಿಯಾವುಲ್ಲಾ, ಮಧುನಾಯಕ್, ಆನಂದ್, ನರಸಿಂಹ ಮೂರ್ತಿ ಇತರರಿದ್ದರು.
ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ವರದಿ: ಲೋಕೇಶ್ ನಾಯ್ಕ .ಭಟ್ಕಳ ಭಟ್ಕಳ : ನವೆಂಬರ್ 23ರಾಜ್ಯದಲ್ಲಿ ನಡೆದ ಉಪಚುನಾವಣೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಭರ್ಜರಿ ಜಯ. ಭಟ್ಕಳದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಸಂಮ್ಸುದ್ದೀನ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ . ಈ ಸಂದರ್ಭದಲ್ಲಿ…