ವರದಿ ನಾರಾಯಣಸ್ವಾಮಿ ಸಿ.ಎಸ್
ಹೊಸಕೋಟೆ : ಅ.17
ಮಹರ್ಷಿ ವಾಲ್ಮೀಕಿ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಎತ್ತಿ ತೋರಿಸಿದವರು.
ಸಚ್ಚಾರಿತ್ರ್ಯ, ಸದ್ಭಾವನಾಶೀಲ ರಾಮ, ಲಕ್ಷ್ಮಣ ಮತ್ತು ಸೀತೆಯನ್ನು ಪರಿಚಯಿಸಿದ ವಾಲ್ಮೀಕಿ ಅವರ ಜೀವನವೇ ಉನ್ನತ ಮೌಲ್ಯಗಳಿಂದ ಕೂಡಿದ್ದು’ ಎಂದು ಕಂಬಳೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಮತಾ ಗೋಪಲ್ ಹೇಳಿದರು.
ಕಂಬಳೀಪುರ ಗ್ರಾಮಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿ
ಭೂಮಿ ಹುಣ್ಣಿಮೆಯ ಶುಭದಿನದಂದು ಮಹಾನ್ ವ್ಯಕ್ತಿಯನ್ನು ಸ್ಮರಿಸುವುದು ಶ್ಲಾಘನೀಯ’
ವಾಲ್ಮೀಕಿ ರಾಮಾಯಣವು ಆದರ್ಶವಾದ ಗ್ರಂಥ. ಪಿತೃವಾಕ್ಯಕ್ಕೆ ಬದ್ಧನಾಗಿ ರಾಮ ಜೀವನದ ಎಲ್ಲ ಮಜಲುಗಳನ್ನು ದಾಟಿ ಪುಣ್ಯ ಪುರುಷೋತ್ತಮನಾದ ಕಾವ್ಯ. ಈ ಕಾವ್ಯ ನಿರಂತರ ಮೌಲ್ಯಗಳನ್ನು ನೀಡುವಲ್ಲಿ ಯಶಸ್ಸು ಗಳಿಸಿದೆ. ಮನುಷ್ಯ ಮನುಷ್ಯನಾಗಿ ಬದುಕುವ ಕಲೆಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕಾಗಿದ’ ಎಂದರು.
ಉಪಾಧ್ಯಕ್ಷರಾದ ಗೀತ ಮುನಿಕೃಷ್ಣಪ್ಪ ಮಾತನಾಡಿ, ಧರ್ಮದಲ್ಲಿರುವ ಅರ್ಥ, ಕಾಮ, ಮೋಕ್ಷಗಳ ಬಗ್ಗೆ ವಿವೇಕ ಪೂರ್ಣವಾದ ಸಂದೇಶವನ್ನು ನೀಡುವಲ್ಲಿ ಮಹರ್ಷಿ ಯಶಸ್ಸು ಗಳಿಸಿದವರು. ಮನುಷ್ಯನಾಗುವುದನ್ನು ಬೆಂಬಲಿಸುವುದೇ ಧರ್ಮ ಸಂಸ್ಥಾಪಕರ ಆಶಯ’ ಎಂದರು.
ಮಾಜಿ ಅದ್ಯಕ್ಷರಾದ ಹಾಗೂ ಹಾಲಿ ಸದಸ್ಯರಾದ ಕೆ.ಎಂ ಮುನಿಯಪ್ಪ ಹಾಗೂ ರಮೇಶ್. ಕಂಬಳೀಪುರ ಗ್ರಾಮದ ಮುಖಂಡರಾದ ಎನ್ ಶ್ರೀರಾಮಯ್ಯ . ಭೀಮಕನಹಳ್ಳಿ ಗ್ರಾಮದ ಮುಖಂಡರಾದ ನಾಗರಾಜ್ . ಪಿಡಿಓ ಟಿ.ಎಸ್ ಮಂಜುನಾಥ್ ಪಂಚಾಯಿತಿ ಸಿಬ್ಬಂದಿ ವರ್ಗ ಇದ್ದರು .
ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ವರದಿ: ಲೋಕೇಶ್ ನಾಯ್ಕ .ಭಟ್ಕಳ ಭಟ್ಕಳ : ನವೆಂಬರ್ 23ರಾಜ್ಯದಲ್ಲಿ ನಡೆದ ಉಪಚುನಾವಣೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಭರ್ಜರಿ ಜಯ. ಭಟ್ಕಳದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಸಂಮ್ಸುದ್ದೀನ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ . ಈ ಸಂದರ್ಭದಲ್ಲಿ…