ವರದಿ: ಲೋಕೇಶ್ ನಾಯ್ಕ್ ಭಟ್ಕಳ.
ಭಟ್ಕಳ ಅ.16
ಎನ್.ಎಚ್ 66 ರ ಅವ್ಯಜ್ಞಾನಿಕ ಹೆದ್ದಾರಿ ಕಾಮಗಾರಿ ವಿರುದ್ದ ಕಾನೂನಾತ್ಮಕ ಮತ್ತು ಜನಾಂದೋಲನದ ಮುಖೇನ ಹೋರಾಟದ ಎಚ್ಚರಿಕೆ ನೀಡಿದ ಜಿಲ್ಲಾ ಜನಪರ ಒಕ್ಕೂಟ ಸಂಘಟನೆಯ ಅಧ್ಯಕ್ಷ ನಾಗೇಶ್ ನಾಯ್ಕ್.
ಭಟ್ಕಳ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಉತ್ತರ ಕನ್ನಡ ಜಿಲ್ಲೆಯ ಎನ್ ಎಚ್ 66ರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸುತ್ತಿರುವ 140 ಕಿ. ಮೀ ಅವರು ಅವ್ಯಜ್ಞಾನಿಕ್ ಹೆದ್ದಾರಿ ಕಾಮಗಾರಿ ವಿರುದ್ದ ಕಾನೂನಾತ್ಮಕ ಮತ್ತು ಜನಾಂದೋಲನದ ಮುಖೇನ ಹೋರಾಟ ಮಾಡಲಾಗುವುದು,
ಉತ್ತರ ಕನ್ನಡ ಜಿಲ್ಲೆಯ ಜನತೆಯ ನಿಷ್ಕ್ರಿಯತೆ ಇಲ್ಲಿ ಎದ್ದು ಕಾಣುತ್ತಿದೆ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಮತ್ತು ಐ ಆರ್ ಬಿ ಕಂಪನಿ ಜನರಿಂದ ಹಗಲು ದರೋಡೆ ಮಾಡುತ್ತಿದೆ
ಅವೈಜ್ಞಾನಿಕ ಕಾಮಗಾರಿಗಳಿಂದ ರಸ್ತೆಗಳ ನಿರ್ಮಾಣ,ಚರಂಡಿಗಳು,ಗುಡ್ಡ ಕೊರತಗಳಿಂದಾಗಿ ಸಾಕಷ್ಟು ಅಪಘಾತಗಳು ಸಂಭವಿಸಿ ಜೀವ ಹಾನಿ, ಆಸ್ತಿ ಪಾಸ್ತಿ ಹಾನಿ, ಉಂಟಾಗಿದೆ ಇದಕ್ಕೆಲ್ಲ ಹೊಣೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐ. ಆರ್. ಬಿ.ಕಂಪನಿಯಾಗಿದೆ.ಹೆದ್ದಾರಿ ಕಾಮಗಾರಿಗಳನ್ನು ಮಾಡುವಾಗ ಅನುಸರಿಸಬೇಕಾದ ನಿಯಮಾವಳಿಗಳನ್ನ ಗಾಳಿಗೆ ತೂರಿ ರಸ್ತೆ ಕಾಮಗಾರಿಗಳನ್ನು ಅಪೂರ್ಣಗೊಳಿಸಿ,ಹೆದ್ದಾರಿಗಳಲ್ಲಿ ವಸೂಲಾತಿ ಕೇಂದ್ರವನ್ನ ನಿರ್ಮಿಸಿ ವಾಹನಗಳಿಂದ ಹಗಲು ದರೊಡೆಯನ್ನು ಮಾಡುತ್ತಿದ್ದಾರೆ, ಇವರ ವಿರುದ್ಧ ಧ್ವನಿ ಎತ್ತಿದ ಸಂಘಟನೆಗಳ ವಿರುದ್ಧ ಧ್ವನಿ ಅಡಗಿಸಲು ಸುಮೋಟೋ ಕೇಸುದಾಖಲಿಸಿ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ. ಆದ್ದರಿಂದ ಭಟ್ಕಳದ ನಾಗರಿಕ ಹೋರಾಟ ಸಮಿತಿ ಹೊನ್ನಾವರ, ಕುಮಟಾ, ಅಂಕೋಲ,ಕಾರವಾರದ ಭಾಗವಾಗಿ ಈ ಎಲ್ಲಾ ತಾಲೂಕುಗಳ ರೈತ ಪರ ಸಂಘಟನೆ, ತಾಲೂಕು ಒಕ್ಕೂಟಗಳ,ವಿವಿಧ ಸಂಘಟನೆಗಳ ಅಭಿಪ್ರಾಯ,ಸಲಹೆ ಸೂಚನೆಗಳನ್ನು ಪಡೆದು ಆವೈಜ್ಞಾನಿಕ ಕಾಮಗಾರಿಗಳನ್ನು ನಡೆಸುತ್ತಿರುವ ಮತ್ತು ಕಾಮಗಾರಿ ಪೂರ್ಣಗೊಳಿಸದೆ ಟೋಲ್ ವಸೂಲಾತಿ ಮಾಡುವುದನ್ನು ಈ ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಕಾನೂನಾತ್ಮಕವಾಗಿ ಜನಾಂದೋಲನದ ಮುಖೇನ ಜಿಲ್ಲಾ ಜನಪರ ಹೋರಾಟ ಸಮಿತಿಯ ನೇತೃತ್ವದಲ್ಲಿ ಉಗ್ರ ಹೋರಾಟದ ರೂಪರೇಷೆ ಸಿದ್ಧಪಡಿಸಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರರಾಮಣ್ಣ ಮೊಗೇರ್, ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ ರಾಜೇಶ ನಾಯಕ,
ರೈತಪರ ಸಂಘಟನೆಯ ಅಧ್ಯಕ್ಷ ವಿರಭದ್ರ ನಾಯ್ಕ್. ರಾಘವೇಂದ್ರ ನಾಯ್ಕ್ಸಿದ್ದಾಪುರ , ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಇಮ್ರಾನ್ ಲಂಖಾ, ತಂಜಿಂ ಅಧ್ಯಕ್ಷ ಇನಾಯತುಲ್ಲ ಶಾಬಂದ್ರಿ, ಎಂ. ಡಿ ನಾಯ್ಕ್. ಟಿ.ಡಿ. ನಾಯ್ಕ್, ಗಣಪತಿ ನಾಯ್ಕ್, ವಿವಿಧ ಸಂಘಟನೆಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.