ವರದಿಗಾರರು: ಆರತಿ ಗಿಳಿಯಾರು
ಉಡುಪಿ : ಅ.14
ಕುಂದಾಪುರ ತಾಲೂಕಿನಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಸುವರ್ಣ ಮಹೋತ್ಸವ 2024 ರ’ 50ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವನ್ನು ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಿಸಿದ್ದು ಸರ್ವರಿಗೂ ಸ್ವಾಗತವನ್ನು ಬಯಸಿದ್ದು ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲಾಗಿತ್ತು.
ಶಾರದೋತ್ಸವಕ್ಕೆ ಗಂಗೊಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದಂತಹ ಶ್ರೀ ಉಮಾಶಂಕರ್ ಹಾಗೂ ಶ್ರೀ ಶೇಖರ್ ಜಿ ಲೆಕ್ಕ ಸಹಾಯಕರು ಇವರಿಗೆ ಆದರದಿಂದ ಬರಮಾಡಿಕೊಂಡು ಸ್ವಾಗತಿಸಿ ಶಾಲು ಹಾಕಿ ಸನ್ಮಾನ ಮಾಡಿ ಗೌರವ ಸ್ಮರಣಿಕೆ ನೀಡಿ ಅಧಿಕಾರಿಗಳಿಗೆ ಗೌರವ ಸಲ್ಲಿಸಲಾಯಿತು .
ಗಂಗೊಳ್ಳಿಯಲ್ಲಿ ನಡೆದ ಉತ್ಸವವು ಭಾರಿ ವಿಜೃಂಭಣೆಯಿಂದ ನಡೆದಿತ್ತು. ಅಲ್ಲದೆ ಬೀದಿ ಬೀದಿಗಳಲ್ಲಿ ಹುಲಿ ವೇಷ ಗಳಂತಹ ವಿವಿಧ ರೀತಿಯ ಕುಣಿತಗಳು ಹಾಗೂ ಭಜನೆಗಳು ಅಲ್ಲದೆ ಟ್ಯಾಬ್ಲೋಗಳು ಇದ್ದು ಇಡೀ ಗಂಗೊಳ್ಳಿಗೆ ಗಂಗೊಳ್ಳಿಯೇ ಶಾರದೋತ್ಸವದ ಮೆರಗನ್ನು ಬೀದಿ ಬೀದಿಗಳಲ್ಲಿ ಸಾರ್ವಜನಿಕರು ವೀಕ್ಷಿಸಿ ಮೈಸೂರಿನಲ್ಲಿ ದಸರಾ ಆಚರಣೆಯನ್ನು ಹೇಗೆ ಮಾಡುತ್ತಾರೋ, ಹಾಗೆ ಗಂಗೊಳ್ಳಿಯಲ್ಲಿ ಶಾರದೆಯನ್ನು ಇಟ್ಟು ಶಾರದೋತ್ಸವ ವನ್ನು ಅದ್ದೂರಿಯಾಗಿ ಅಲ್ಲಿನ ಸಾರ್ವಜನಿಕರು ಆಚರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶಾರದ ಸಮಿತಿಯ ಗೌರವಾಧ್ಯಕ್ಷರಾದ ಲಕ್ಷ್ಮಿಕಾಂತ್ ಮಡಿವಾಳ, ವರುಣ್ ಭಟ್ , ರಾಘವೇಂದ್ರ ಭಟ್, ಅನಿತಾ ಶೇಟ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಪ್ರೇಮಾ ಸಿ.ಎಸ್ ಪೂಜಾರಿ, ಶ್ವೇತಾ ಇವರು ಉಪಸ್ಥಿತರಿದ್ದರು.
ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ವರದಿ: ಲೋಕೇಶ್ ನಾಯ್ಕ .ಭಟ್ಕಳ ಭಟ್ಕಳ : ನವೆಂಬರ್ 23ರಾಜ್ಯದಲ್ಲಿ ನಡೆದ ಉಪಚುನಾವಣೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಭರ್ಜರಿ ಜಯ. ಭಟ್ಕಳದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಸಂಮ್ಸುದ್ದೀನ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ . ಈ ಸಂದರ್ಭದಲ್ಲಿ…