ವರದಿ ನಾರಾಯಣಸ್ವಾಮಿ ಸಿ.ಎಸ್ ಚಿಕ್ಕಕೋಲಿಗ
ಗ್ರಾಮೀಣ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿ : ಜನಾರ್ದನರೆಡ್ಡಿ
ಹೊಸಕೋಟೆ ಅ. 10
ಗ್ರಾಮೀಣ ಭಾಗದಲ್ಲಿ ಜನಪದ ಕಲೆಗಳು ನಶಿಸಿ ಹೊಗುತ್ತಿದ್ದು, ಕಲೆಗಳು ಉಳಿಯಬೇಕಾದರೆ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ ಹೇಳಿದರು.
ಇಲ್ಲಿಯ ಸಂತೆ ಮೈದಾನದ ವಿನಾಯಕ ದೇವಾಲಯ ಸಂಭಾಗಣದಲ್ಲಿ ಜೇನುಗೂಡು ರೂರಲ್ ಡೆವಲಪ್ಮೆಂಟ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿ ಕೊಂಡಿದ್ದ ಜನಪದ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಜೇನುಗೂಡು ಸಂಸ್ಥೆ ಸದಾ ಗ್ರಾಮೀಣ ಕಲೆಯನ್ನು, ಕಲಾವಿದ ರನ್ನು ಗುರುತಿಸಿ ವೇದಿಕೆ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು
ಟ್ರಸ್ಟಿನ ಉಪಾಧ್ಯಕ್ಷ ಕೆ.ಎಂ. ಚೌಡೇಗೌಡ ಮಾತನಾಡಿ, ಜನಪದ ಕಲೆ ಮತ್ತು ರಂಗಗೀತೆಗಳನ್ನು ನಾಟಕದ ಮೂಲಕ ಕಾಪಾಡಿಕೊಳ್ಳಬೇಕು. ಪೌರಾಣಿಕ ನಾಟಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ನಶಿಸುವ ಹಂತದಲ್ಲಿರುವ ಕಲೆಗಳಿಗೆ ವೇದಿಕೆ ಗಳನ್ನು ಕಲ್ಪಿಸಬೇಕು ಎಂದರು.
ರಂಗ ನಿರ್ದೇಶಕ ಡಿ.ಲಕ್ಷ್ಮೀ ನಾರಾಯಣ್ ಮಾತನಾಡಿ, ಕಲಾ ಸರಸ್ವತಿಯನ್ನು ಆರಾಧಿಸಬೇಕು. ಯಾವುದೇ ಅಪೇಕ್ಷೆ ಇಲ್ಲದೇ ತನ್ನಲ್ಲಿ ಅಡಗಿರುವ ಕಲಾ ಸರಸ್ವತಿಯನ್ನು ಸಮಾಜಕ್ಕೆ ಹಂಚಿಕೊಳ್ಳಬೇಕು. ಕಲಾ ಪ್ರೇಮಿಗಳು ಕಲಾವಿದರಿಗೆ ನೆರವು, ಪ್ರೋತ್ಸಾಹ ನೀಡಬೇಕು ಎಂದರು.
ಸುಗಮ ಸಂಗೀತ, ಜನಪದ ಸಂಗೀತ, ರಂಗಗೀತೆಗಳು, ಭರತ ನಾಟ್ಯ, ನಾದಸ್ವರ, ಸೀತಾರ ವಾದನ, ಸಮೂಹ ನೃತ್ಯ, ಜನಪದ ನೃತ್ಯ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ರಂಗ ಕಲಾವಿದ ಸ್ಟುಡಿಯೋ ಆನಂದ್, ಟ್ರಸ್ಟಿನ ಉಪಾಧ್ಯಕ್ಷ ಚೌಡೇಗೌಡ, ಸಂಘಟನಾ ಕಾರ್ಯದರ್ಶಿ ಎಸ್.ಕೆ. ವಸಂತ ಕುಮಾರ್, ನಿರ್ದೇಶಕ ದೇವಿದಾಸ್ ಸುಬ್ರಾಯ್ ಸೇತ್, ಸೈಯದ್ ಮಹಬೂಬ್.ರಂಗ ನಿರ್ದೇಶಕ ಡಿ.ಲಕ್ಷ್ಮಿನಾರಾಯಣ್, ದೇವಾಲಯ ಸಮಿತಿ ಸದಸ್ಯ ಮುನಿರತ್ತಪ್ಪ, ಕಸಾಪ ಮಾಜಿ ಅಧ್ಯಕ್ಷ ಎಂ.ಆರ್.ಉಮೇಶ್, ಅತ್ತಿಬೆಲೆ ಮಂಜುನಾಥ್, ಸಹಕಾರ ಬ್ಯಾಂಕ್ ನಿರ್ದೇಶಕಿ ಕೆ.ವಿ.ವಿಜಯಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್ ಇತರರಿದ್ದರು.