ವರದಿ: ಆರತಿ ಗಿಳಿಯಾರು…
ಉಡುಪಿ : ಅ.10
ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಅಧಿಕಾರಿಗಳ ಒಕ್ಕೂಟದ ನೇತೃತ್ವದಲ್ಲಿ ಪ್ರಾರಂಭವಾಗಿರುವ ನಿರ್ದಿಷ್ಟ ಹೋರಾಟ ಮತ್ತಷ್ಟು ತೀವ್ರತೆಯ ದಾರಿಯನ್ನು ಹಿಡಿದಿದ್ದು ನೌಕರರು ತಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ನಾವು ಯಾವುದೇ ಕಾರಣಕ್ಕೂ ಮುಷ್ಕರವನ್ನು ಹಿಂಪಡೆಯದೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ.
ನಾವು ನಮ್ಮ ಬೇಡಿಕೆಯನ್ನು 30 ವರ್ಷದಿಂದಲೂ ಸರ್ಕಾರಕ್ಕೆ ನಮ್ಮ ಬೇಡಿಕೆಯನ್ನು ಇಟ್ಟುಕೊಂಡು ಬಂದಿದ್ದು, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದು ನೌಕರರು ಈ ದಿನ ತಮ್ಮ ಕೈಗಳಿಗೆ ಕಪ್ಪು ಬಣ್ಣದ ರಿಬ್ಬನ್ ಅನ್ನು ಕಟ್ಟಿಕೊಂಡು ತಮ್ಮ ಹೋರಾಟದ ತೀವ್ರತೆಯನ್ನು ಹೆಚ್ಚಿಸಿರುವುದನ್ನು ತೋರ್ಪಡಿಸಿಕೊಂಡಿದ್ದಾರೆ.
ಇದೇ ರೀತಿ ನೌಕರರು ಅನಿರ್ದಿಷ್ಟ ಪ್ರತಿಭಟನೆಯ ಹೋರಾಟದಲ್ಲಿ ತಮಗಾದ ಅವಮಾನ, ನೋವು, ಹಿಂಸೆ,ಮಾನಸಿಕ ಒತ್ತಡ,ಹಿರಿಯ ಅಧಿಕಾರಿಗಳ ಆದೇಶ,ಸರ್ಕಾರದ ಕೆಲವೊಂದು ಆದೇಶ,ಸಂಕಟ, ಅದನ್ನೆಲ್ಲ ಸಹಿಸಿಕೊಂಡು ಸಾರ್ವಜನಿಕ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೂ ಅದರ ನೋವನ್ನು ಸಹಿಸಿಕೊಂಡು 30 ವರ್ಷಗಳಿಂದಲೂ ಇಟ್ಟಿರುವ ಬೇಡಿಕೆ ಸರ್ಕಾರ ಈಡೇರಿಸದಿದ್ದರೂ ಸರಕಾರದ ಆದೇಶಕ್ಕೆ ಬದ್ಧರಾಗಿ ನಿಷ್ಠೆಯಿಂದ ಇಲ್ಲಿಯವರೆಗೂ ಎಲ್ಲವನ್ನು ಸಹಿಸಿಕೊಂಡು ಸರಕಾರದ ಕೆಲಸ ದೇವರ ಕೆಲಸ ಎಂದು ತಿಳಿದು ಸಾರ್ವಜನಿಕರ ಸೇವೆಯನ್ನು ಮಾಡಿಕೊಂಡು ನಮಗಾಗಿರುವ ನೋವು ಸಂಕಟವನ್ನು ಯಾರೊಂದಿಗೂ ಹಂಚಿಕೊಳ್ಳದೆ ಎಲ್ಲವನ್ನು ತಾವೇ ಸಹಿಸಿಕೊಂಡು ನಮ್ಮ ನೋವನ್ನು ಯಾರು ಕೇಳಲು ಇಲ್ಲದಿದ್ದರೂ ತಮಗೆ ತಾವೇ ಸಮಾಧಾನ ಮಾಡಿಕೊಂಡು ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಬಗ್ಗೆ ತಮ್ಮ ನೋವನ್ನು ಈ ಸಭೆಯಲ್ಲಿ ಒಬ್ಬೊಬ್ಬರಾಗಿ ಹಂಚಿಕೊಂಡ ಬಗೆಯನ್ನು ನೋಡಲು ಸಾಧ್ಯವಿಲ್ಲದಂತಾಗಿದೆ.
ಇದೇ ರೀತಿ ಮುಂದುವರಿದರೆ ಆಮರಣ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲು ಸಿದ್ದರಿದ್ದೇವೆ ಎಂದು ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ ಇವರು ನೋವಿನಿಂದ ತಮ್ಮ ಕಷ್ಟವನ್ನು ಸಹಿಸಲಾಗದೆ ಈ ವಿಚಾರವನ್ನು ನೌಕರರ ಮುಂದೆ ಪ್ರಸ್ತಾಪ ಇಟ್ಟಾಗ, ಎಲ್ಲಾ ನೌಕರರು ಅದರ ಬಿಸಿ ಅನುಭವವನ್ನು ಅನುಭವಿಸಿರುವಾಗ ಅವರ ಒಂದು ಮಾತಿಗೆ ಕೈಜೋಡಿಸಿರುತ್ತಾರೆ. ನಮ್ಮ ಬೇಡಿಕೆ ಈಡೇರದಿದ್ದರೆ ನಮ್ಮ ಪ್ರಾಣ ತ್ಯಾಗ ಮಾಡಲು ಸಿದ್ದರಿದ್ದೇವೆ ಎಂದು ನೌಕರರ ಮಾತಾಗಿದೆ.
ಈ ರೀತಿಯಾಗಿ ನೌಕರರು ಉಪವಾಸ ಸತ್ಯಾಗ್ರಹ ಮಾಡಿ ಪ್ರಾಣ ತ್ಯಾಗಕ್ಕೂ ಸಿದ್ಧ ಎನ್ನುವಾಗಲೇ ನಾವು ತಿಳಿದ ಸತ್ಯವೆಂದರೆ ಸರಕಾರಿ ನೌಕರರಾಗಿ ಕಚೇರಿಯ ಒಳಗಿರುವ ಎಷ್ಟೊಂದು ಕಿರಿಕಿರಿಯನ್ನು ಅನುಭವಿಸಿಕೊಂಡು ಸಂಕಷ್ಟಕ್ಕೆ ಈಡಾಗಿ ಕೆಲಸದ ಒತ್ತಡದಲ್ಲಿ ತಮ್ಮನ್ನು ತಾವು ಸಾರ್ವಜನಿಕರ ಸೇವೆಯಲ್ಲಿ ದಿನನಿತ್ಯ ತೊಡಗಿಸಿಕೊಂಡು ತಮ್ಮ ಆರೋಗ್ಯದ ಬಗ್ಗೆ ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸದೆ ಸಾರ್ವಜನಿಕರ ಸೇವೆಯನ್ನು ಸರ್ಕಾರ ನೀಡುವ ಸಂಬಳಕ್ಕೆ ನಿಯತ್ತಿನಿಂದ ಸೇವೆ ಸಲ್ಲಿಸುತ್ತಿರುವ ನೌಕರರ ಬದುಕಿಗೆ ದಾರಿ ದೀಪವಾಗಬೇಕಾಗಿದ್ದ ಸರಕಾರ 30 ವರ್ಷಗಳಿಂದ ಇಟ್ಟ ಬೇಡಿಕೆಯನ್ನು ಈಡೇರಿಸದೆ ನೌಕರರಿಗೆ ವಂಚನೆ ಮಾಡಿರುವುದು ಸರಿಯಾದ ವಿಚಾರವಲ್ಲ ಎಂದು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯ ಮುಖಂಡರುಗಳು ತಿಳಿಸಿದ್ದಾರೆ.
ಇದೇ ರೀತಿ ವಿಚಾರ ಮಾಡುತ್ತಾ ಹೋದರೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ನೌಕರರು ಈಗಾಗಲೇ ಒತ್ತಡದಿಂದ ಸಾವನ್ನಪ್ಪಿದ್ದು, ಅಲ್ಲದೆ ಹೆಚ್ಚಿನ ನೌಕರರು ಬಿ.ಪಿ, ಶುಗರ್ ಗಳಂತಹ ಒತ್ತಡದ ಖಾಯಿಲೆಗೆ ಒಳಗಾಗಿದ್ದು ಅವರ ಆರೋಗ್ಯ ಮತ್ತು ಜೀವದ ಬಗ್ಗೆ ಯಾರಿಗೂ ಕಾಳಜಿ ಇಲ್ಲದೆ ಅವರ ಬದುಕು ಬೀದಿ ಪಾಲಾಗಿದೆ ಎನ್ನುವುದು ಸತ್ಯವಾಗಿದೆ.
ಸರ್ಕಾರ ಈ ಕೂಡಲೇ ಜನರ ಹಿತಾಸಕ್ತಿ ಬಯಸುವ ನೌಕರರ ಬಗ್ಗೆ ಕಾಳಜಿ ವಹಿಸಬೇಕು ಅಲ್ಲದೆ ನೌಕರರ ಬೇಡಿಕೆ ಈಡೇರಿಸಿದರೆ ದಿನನಿತ್ಯ ಪರದಾಡುವ ಸಾರ್ವಜನಿಕರಿಗೆ ಅತ್ಯುತ್ತಮವಾದ ಸೇವೆಯನ್ನು ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಾರೆ ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಅಲ್ಲದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ಅಭಿವೃದ್ಧಿಯಾಗುತ್ತದೆ.
ಜನರ ಹಿತಾಸಕ್ತಿಯನ್ನು ಪರಿಗಣನೆಗೆ ತೆಗೆದುಕೊಂಡು ಮಾನ್ಯ ಸಚಿವರಾದ ಪ್ರಿಯಾಂಕ ಖರ್ಗೆಯವರು ಕೂಡಲೇ ನೌಕರರ ಬೇಡಿಕೆಯನ್ನು ಈಡೇರಿಸಿ ನೌಕರರಿಗೆ ಸಹಕರಿಸಿ ಸಾರ್ವಜನಿಕರ ಬದುಕಿಗೆ ಆಶಾ ಕಿರಣವಾಗಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ತೋರಿಸಿ ಸಾರ್ವಜನಿಕ ಹಿತಾಸಕ್ತಿಯನ್ನು ಮನಗಂಡು ಸಹಕರಿಸಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನೌಕರರ ಹೋರಾಟವು ನ್ಯಾಯಯುತವಾದ ಹೋರಾಟವಾಗಿದ್ದು, ಇವರ ಈ ಹೋರಾಟಕ್ಕೆ ಎಲ್ಲಾ ಸಾರ್ವಜನಿಕರು ಜನಪ್ರತಿನಿಧಿಗಳು ಸಂಸದರು ಸ್ಥಳೀಯ ಶಾಸಕರುಗಳು ಬೆಂಬಲ ಸೂಚಿಸಿದ್ದು ಅಲ್ಲದೆ ನೌಕರರ ಎಲ್ಲಾ ಬೇಡಿಕೆಗಳನ್ನು ಮಂತ್ರಿಗಳ ಮುಂದೆ ಚರ್ಚೆ ಮಾಡಿ ಬಗೆಹರಿಸುವುದಾಗಿ ಮಾತು ನೀಡಿದ್ದು, ಯಥಾ ಪ್ರಕಾರ ತಾವು ಸಾರ್ವಜನಿಕರ ಹಿತಾಸಕ್ತಿಯನ್ನು ಬಯಸಿ ಕೂಡಲೇ ತೀರ್ಮಾನ ತೆಗೆದುಕೊಂಡು ನೌಕರರಿಗೆ ಸಹಕರಿಸುವುದು ಸರ್ಕಾರದ ಉತ್ತಮ ಬೆಳವಣಿಗೆ ಆಗಿರುತ್ತದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ನುಡಿದಂತೆ ನಡೆಯುವ ಸರ್ಕಾರ ಎಂದರೆ ಅದು ಕಾಂಗ್ರೆಸ್ ಸರ್ಕಾರ. ಎನ್ನುವುದನ್ನು ಈಗಾಗಲೇ ರಾಜ್ಯಾದ್ಯಂತ ಸಾಬೀತು ಮಾಡಿದ್ದು, ಜನರಲ್ಲಿ ಒಂದು ವಿಶ್ವಾಸವಿದ್ದು ಅದೇ ರೀತಿ ನೌಕರರ ಹಿತಾಸಕ್ತಿಯನ್ನು ಮನಗೊಂಡು ನೌಕರರ ಬೇಡಿಕೆಗಳನ್ನು ಈಡೇರಿಸಿ ರಾಜ್ಯದ ಜನರ ಪರದಾಟವನ್ನು ನಿಲ್ಲಿಸಿ ಎಲ್ಲರಿಗೂ ಸಹಕರಿಸುವ ಸರ್ಕಾರ ಎಂದೇ ಪ್ರಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರತಿಭಟನೆಯ ಬಿಸಿ ಮುಟ್ಟುತ್ತಿದ್ದಂತೆ ಸ್ಥಳಕ್ಕೆ ವಿನಯ್ ಕುಮಾರ್ ಸೊರಕೆ, ಪ್ರಸಾದ್ ರಾಜ್ ಕಾಂಚನ್, ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ರಮೇಶ್ ಕಾಂಚನ್,ಕಾರ್ಕಳ ಶಾಸಕ ಸುನಿಲ್ ಕುಮಾರ್, ಬೈಂದೂರು ಶಾಸಕ ಗುರುರಾಜ್ ಗಂಟಿ ಹೊಳೆ, ಪ್ರಖ್ಯಾತ್ ಶೆಟ್ಟಿ, ಮುಂತಾದವರು ಆಗಮಿಸಿದ್ದು ಶಿವರಾಜು. ಎಂ
ಗ್ರೇಡ್ -1 ಕಾರ್ಯದರ್ಶಿಗಳ ಉಡುಪಿ ಜಿಲ್ಲಾಧ್ಯಕ್ಷರು ಹಾಗೂ ಆರ್ ಡಿ ಪಿ ಆರ್ ಇಲಾಖೆ ಪ.ಜಾ /ಪ.ಪಂ ಗಳ ಅಧಿಕಾರಿಗಳು & ನೌಕರರ ಕಲ್ಯಾಣ ಸಂಘ(ರಿ.) ಉಡುಪಿ ಜಿಲ್ಲಾಧ್ಯಕ್ಷರು ಇವರು ಸ್ವಾಗತಿಸಿ ಬರಮಾಡಿಕೊಂಡರು.
ನಂತರ ಮಾತನಾಡಿದ ವಿನಯ್ ಕುಮಾರ್ ಸೊರಕೆ ಹಾಗೂ ಶಾಸಕರುಗಳು ನೌಕರರ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ಕೂಡಲೇ ಈಡೇರಿಸುವುದಾಗಿ ಭರವಸೆ ನೀಡಿದರು.