ವರದಿ ನಾರಾಯಣಸ್ವಾಮಿ ಸಿ.ಎಸ್
ಶಿಕ್ಷಣಕ್ಕೆ ಅಂಗನವಾಡಿಗಳ ಗುಣಮಟ್ಟ ಮುಖ್ಯ ಶಾಸಕ ಶರತ್ ಬಚ್ಚೇಗೌಡ
ಹೊಸಕೋಟೆ ಅ.7
ಮನೆಗಳನ್ನು ನಿರ್ಮಾಣ ಮಾಡಲು
ತಳಪಾಯ ಎಷ್ಟು ಮುಖ್ಯವೋ, ಮಕ್ಕಳ ಗುಣ ಮಟ್ಟದ ಶಿಕ್ಷಣಕ್ಕೆ ಅಂಗನವಾಡಿಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಂದಗುಡಿ ಹೋಬಳಿಯ ಬೈಲನರಸಾಪುರದಲ್ಲಿ ನರೇಗಾ ಯೋಜನೆಯಡಿ 18 ಲಕ್ಷರೂ.ವೆಚ್ಚದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಲೋಕಾರ್ಪ ಣೆಗೊಳಿಸಿ ಮಾತನಾಡಿದರು. ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಅಂಗನವಾಡಿಗಳಿಂದಲೇ ಪ್ರಾರಂಭ ವಾಗಬೇಕು, ಆಗಲೇ ಮಕ್ಕಳ ಮನಸ್ಸಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ದಾರಿಯಾಗುತ್ತದೆ.ಈಗಾಗಲ್ಲೇ ಹೊಸಕೋಟೆ ತಾಲ್ಲೂಕಿನಾದ್ಯಂತ ಅಂಗನವಾಡಿಗಳನ್ನು ನವೀಕರಣ ಮಾಡಲಾಗಿದೆ.ಇಲ್ಲಿನ ಶಿಕ್ಷಕರು, ಸಹಾಯಕರು ಅಂಗನವಾಡಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.
ಸರಕಾರ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೂರಕವಾದ ಉತ್ತಮ ವಾತಾವರಣ ಕಲ್ಪಿಸಿ ಆಟದ ಸಾಮಗ್ರಿ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತದೆ.
ಕೇಂದ್ರದಲ್ಲಿ ನೋಡಿಕೊಳ್ಳಲು ಮಕ್ಕಳ ಪಾಲನೆ ಬಗ್ಗೆ ತರಬೇತಿ ಪಡೆದಿರುವ ಮಹಿಳಾ ಆರೈಕೆದಾರರನ್ನು ನಿಯೋಜಿಸಲಾಗಿದ್ದು, ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಸರಕಾರದ ಸವಲತ್ತು ಗಳನ್ನು ಪಡೆಯಲು ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಮೂರು ವರ್ಷದವರೆಗಿನ ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಬಿಟ್ಟು, ನೆಮ್ಮದಿಯಾಗಿ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಬಹುದು. ಇದರಿಂದ ಮಕ್ಕಳನ್ನು ನೋಡಿಕೊಳ್ಳಲೆಂದೇ ಕೆಲಸ ಬಿಟ್ಟು ಮನೆಯಲ್ಲಿರಬೇಕಾದ ಸ್ಥಿತಿ ನಿರ್ಮಾಣವಾಗುವುದರಿಂದ ಮುಕ್ತರಾಗಬಹುದು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ಬ್ಲಾಕ್ ಕಾಂಗ್ರೆಸ್ಅಧ್ಯಕ್ಷಡಾ. ಸಗೀರ್ ಅಹಮದ್, ತಾಪಂನ ಸದಸ್ಯ ಮನ್ಸೂರ್ ಆಲಿಖಾನ್, ಎಸ್ಎಫ್ಸಿಎಸ್ ಅಧ್ಯಕ್ಷ ರವಿಶಂಕರ್, ನಿರ್ದೇಶಕರಾದಎಸ್. ಮಂಜುನಾಥ್, ಎನ್. ಶ್ರೀನಿವಾಸ್, ಗ್ರಾಪಂನ ಅಧ್ಯಕ್ಷೆ ಹಸೀನಾ ಖಾನಂ, ಸದಸ್ಯರಾದ ಬೈರೇಗೌಡ, ಗುರು, ತಾಪಂನ ಇಒ ಡಾ.ಸಿ.ಎನ್. ನಾರಾಯಣಸ್ವಾಮಿ, ಸಿಡಿಪಿಒ ಶಿವಮ್ಮ, ಪಿಡಿಒ ಸುರೇಶ್ ಕುಮಾರ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.