ಮುಂದುವರೆದ ಭಾಗ ೩
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಗಜೆಟೆಡ್ ಗ್ರೂಪ್ ಬಿ ವೃಂದಕ್ಕೆ ಮೇಲ್ದರ್ಜೆಗೇರಿಸುವಂತೆ ಸಂಘದ ಹಲವಾರು ವರ್ಷದ ಬೇಡಿಕೆ ಇದ್ದರೂ ಅದನ್ನು ಪರಿಗಣಿಸದೆ ಪ್ರಸ್ತುತ ಇರುವ 6021 ಹುದ್ದೆಗಳಲ್ಲಿಯೇ 1500 ಹುದ್ದೆಗಳನ್ನು ಕಡಿಮೆ ಮಾಡಿ ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ( ಗ್ರೂಪ್ ಬಿ ಕಿರಿಯ ವೃಂದ ) ಎಂದು ಮತ್ತೊಂದು ಹುದ್ದೆ ಸೃಷ್ಟಿಸಲಾಗಿದೆ. ಎರಡು ಹುದ್ದೆಗಳು ಮಾಡುವ ಎಲ್ಲಾ ಕೆಲಸಗಳು ಒಂದೇ ಆಗಿದ್ದರೂ ಹಾಗೂ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಆಗದಿದ್ದರೂ ಸಹ ಎಲ್ಲಾ ಹುದ್ದೆಗಳನ್ನು ಗಜೆಟೆಡ್ ಗ್ರೂಪ್ ಬಿ ವೃಂದಕ್ಕೆ ಮೇಲ್ದರ್ಜೆಗೇರಿಸಬೇಕಾದ ಮೂಲ ಆಶಯವನ್ನು ಅರಿಯದ ಇಲಾಖೆ ಇಂತಹ ಎಡವಟ್ಟುಗಳನ್ನು ಮಾಡುತ್ತಿರುತ್ತದೆ. ಆದುದರಿಂದ ಸಂಘವು ಎಲ್ಲಾ 6021 ಹುದ್ದೆಗಳನ್ನು ಗಜೆಟೆಡ್ ಗ್ರೂಪ್ ಬಿ ವೃಂದಕ್ಕೆ ಮೇಲ್ದರ್ಜೆಗೇರಿಸಲು ಇಲಾಖೆಗೆ ಒತ್ತಾಯಿಸುತ್ತಿದೆ.
ಇಲಾಖೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ವರ್ಗಾವಣೆ ಮಾಡಿ ಕೌನ್ಸಿಲಿಂಗ್ ಪದ್ಧತಿಯನ್ನು ಜಾರಿ ಮಾಡುತ್ತಿದ್ದು ಅವುಗಳಲ್ಲಿ ಕೂಡ ಹಲವಾರು ಲೋಪ ದೋಷಗಳಿದ್ದು ವೃಂದ ಸಂಘಗಳ ಯಾವುದೇ ಸಲಹೆ ಅಥವಾ ಆಕ್ಷೇಪಗಳನ್ನು ಪರಿಗಣಿಸದೆ ರೂಪಿಸಲಾಗುತ್ತಿದೆ ಮತ್ತು ಹೊಸದಾಗಿ ಏಳು ವರ್ಷ ಒಂದೇ ತಾಲೂಕಿನಲ್ಲಿ ಕೆಲಸ ಮಾಡುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೂ ಕಾರ್ಯದರ್ಶಿಗಳಿಗೂ ಹಾಗೂ ದ್ವಿತೀಯ ದರ್ಜೆಯ ಸಹಾಯಕರುಗಳ ವರ್ಗಾವಣೆ ಮಾಡುವ ನಿಯಮವನ್ನು ಕೌನ್ಸಿಲಿಂಗ್ ನಿಯಮ ದೊಳಗೆ ಸೇರಿಸುವ ಪ್ರಯತ್ನ ನಡೆಸುತ್ತಿದೆ.
ಇಲಾಖೆ ಈ ಎಲ್ಲಾ ಶೋಷಣೆಗಳಿಂದ ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 21 ಜನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಒತ್ತಡದಿಂದ ಉಂಟಾಗುವ ಮಾನಸಿಕ ಒತ್ತಡದಿಂದ ಆರೋಗ್ಯ ಸಮಸ್ಯೆಯಿಂದ ಖಾಯಿಲೆಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ . ಸಾವಿರಾರು ಅಧಿಕಾರಿಗಳು ರಕ್ತ ದೊಡ್ಡ ಖಾಯಿಲೆಗಳಿಂದ ಬಳಲಿ ಖಿನ್ನತೆಗೆ ಒಳಗಾಗಿದ್ದಾರೆ, ಇದರಿಂದಾಗಿ ಕೌಟುಂಬಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಹೀಗಾಗಿ ಸಾಮೂಹಿಕ ರಾಜೀನಾಮೆಗಾಗಿ ತಯಾರಿ ನಡೆಸುತ್ತಿದ್ದಾರೆ ಇಂತಹ ಸಮಯದಲ್ಲಿ ಇದು ಕೊನೆಯ ಅವಕಾಶ ಎಂಬ ನಂಬಿಕೆಯಲ್ಲಿ ಸೆಪ್ಟಂಬರ್ 30ರ ಒಳಗೆ ನಮ್ಮ ಬೇಡಿಕೆಗಳು ಈಡೇರಬೇಕು ಇಲ್ಲದೆ ಹೋದರೆ ನಮ್ಮ ಅನಿರ್ದಿಷ್ಟ ಅವಧಿ ಹೋರಾಟ ಮುಂದುವರಿಯುವುದು ಎಂದು ತಿಳಿಸಿದರು
ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ
ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…