ವರದಿ:ಲೋಕೇಶ್ ನಾಯ್ಕ್ ಭಟ್ಕಳ.
ಭಟ್ಕಳ,ಅಕ್ಟೋಬರ್ 08.
ಅನ್ಯ ಕೋಮಿನವರಿಂದ ಕಂಪೌಂಡ್ ಒಡೆದು ಗೇಟ್ ನಿರ್ಮಿಸಿ ರಸ್ತೆ ನಿರ್ಮಾಣ ಹಾಗೂ ಸರಕಾರಿ ಜಮೀನು ಕಬಳಿಕೆಗೆ ಹುನ್ನಾರ. .
ಗೇಟ್ಎದುರು ಚಿರೆಕಲ್ಲು ಗೋಡೆನಿರ್ಮಿಸಿ ವಿರೋಧ ವ್ಯೆಕ್ತ ಪಡಿಸಿದ ಭಟ್ಕಳ ಶಿರಾಲಿ ಗುಡಿಹಿತ್ತಲ ಗ್ರಾಮಸ್ಥರು .
ಮನೆಗಳಿಗೆ, ಮದರಸಾ ಮಸಿದಿಗಳಿಗೆ ಹೋಗಲು ಎರಡು ಕಡೆ ರಸ್ತೆ ಎರಡು ಗೇಟ್ ಇದ್ದರೂ ಸಹ ಹಿಂಭಾಗದ ಸರ್ಕಾರಿ ಜಮೀನನ್ನು ಕಬಳಿಸುವ ಉದ್ದೇಶದಿಂದ ಸಾರ್ವಜನಿಕರ ಉಪಯೋಗಕ್ಕಾಗಿ ವಿನಿಯೋಗಿಸಲಾಗಿರುವ ಜಮೀನಿಗೆ ಹೊಂದಿಕೊಂಡು ಅನ್ಯಕೋಮಿನವರು ರಾತ್ರೋರಾತ್ರಿ ಕಾಂಪೌಂಡ ಒಳಗಿನಿಂದಲೇ ಗೇಟ್ ನಿರ್ಮಾಣ ಮಾಡಿ ಸರ್ಕಾರಿ ಜಮೀನಿನ ಮೂಲಕದಾರಿಮಾಡಿಕೊಂಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಗೇಟ್ ಗೆ ಅಡ್ಡಲಾಗಿ ಚೀರೆ ಕಲ್ಲು ಜೋಡಿಸಿ ಗೇಟ್ ಮುಚ್ಚಿದ ಘಟನೆ ಭಟ್ಕಳ ತಾಲೂಕಿನ ಶಿರಾಲಿಯ ಗುಡಿಹಿತ್ತಲಿನಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಈ ಹಿಂದೆ ಸ್ಥಳೀಯರು ಗುಡಿಹಿತ್ತಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ 505 ರ ಸರ್ಕಾರಿ ಜಮೀನಲ್ಲಿ ತರಕಾರಿಯನ್ನು ಬೆಳೆಸುತ್ತಿದ್ದರು. ಹಾಗೂ ಜಾನುವಾರುಗಳು ಸಾವನಪ್ಪಿದ್ದರೆ ಈ ಜಾಗದಲ್ಲಿ ಹೂಳುತ್ತಿದ್ದರು.
ಆದರೆ ಗ್ರಾಮಸ್ಥರು ಈ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಿ ಸ್ಥಳೀಯರಿಗೆ ಕೃಷಿ ಉದ್ದೇಶಕ್ಕೆ ಜಾಗವನ್ನು ಬಳಸದಂತೆ ಸೂಚಿಸಿ ಕೃಷಿ ಚಟುವಟಿಕೆಯನ್ನು ನಿಲ್ಲಿಸಲಾಗಿತ್ತು.
ಅದರ ಭಾಗವಾಗಿ ಈ ಜಾಗದಲ್ಲಿ ಸರಕಾರಿ ಯೋಜನೆ ಅಡಿಯಲ್ಲಿ ನೀರಿನ ಟ್ಯಾಂಕ್ ನ್ನು ನಿರ್ಮಿಸಿ ಎಲ್ಲಾ ಜಾತಿ, ಜನಾಂಗಕ್ಕೂ ಅನುಕೂಲವಾಗುವಂತೆ ಮಾಡಲಾಗಿದೆ. ಆದರೆ ಇದೀಗ ಅನ್ಯಕೋಮಿನ ಕೆಲವರು 30 ವರ್ಷದ ಹಿಂದೆ ನಿರ್ಮಿಸಿರುವ ಕಾಂಪೌಂಡ್ ಒಡೆದು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿರುವ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ.
ಇವರು ಸರ್ಕಾರಿ ಜಮೀನನ್ನು ಕಬಳಿಸುವ ದುರುದ್ದೇಶವನ್ನು ಹೊಂದಿದ್ದು ಗ್ರಾಮಸ್ಥರು ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ನೀಡುವುದಿಲ್ಲ.
ಈ ವಿಷಯವನ್ನು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ಹಾಗೂ ಸ್ಥಳಿಯಾಡಳಿತದ ಗಮನಕ್ಕೆ ತಂದಾಗ ಆ ಸಂದರ್ಭದಲ್ಲಿ ಸ್ಥಳಕ್ಕೆ ಬೇಟಿ ನೀಡುವ ಅವರು ಯಥಾಸ್ಥಿತಿ ಕಾಪಾಡುವಂತೆ ಮೌಖಿಕವಾಗಿ ಹೇಳಿ ಹೋಗುತ್ತಾರೆ.
ಆದರೆ ಹಾಗೇ ಹೇಳಿಹೋದ ಕೆಲವೆ ದಿನಗಳಲ್ಲಿ ಅವರು ಮತ್ತೆ ತಮ್ಮ ಕೆಲಸವನ್ನು ಪ್ರಾರಂಭ ಮಾಡುತ್ತಾರೆ ಇದರಿಂದ ಅನ್ಯ ಕೋಮಿನವರಿoದ ಶಾಂತಿ ಕದಡುವ ಎಲ್ಲಾ ಸಾಧ್ಯತೆ ಗಳಿವೆ ಇದಕ್ಕೆ ಗ್ರಾಮಸ್ಥರು ಅವಕಾಶ ನೀಡುವುದಿಲ್ಲ.
ಹತ್ತಿರದಲ್ಲೇ ಸರ್ಕಾರಿ ಶಾಲೆಯೂ ಇರುವುದರಿಂದ ಕಿರಿದಾದ ರಸ್ತೆ ಹಾಗೂ ಮತ್ತೊಂದು ಬಾಗದಲ್ಲಿ ಕಣಿವೆಯಂತ ಪ್ರದೇಶ ಇರುವುದರಿಂದ ಗೇಟ್ ಒಳಗಿಂದ ಬರುವ ವಾಹನಗಳಿಂದ ಶಾಲಾ ವಿದ್ಯಾರ್ಥಿಗಳು ಅಪಾಯಕ್ಕೆ ಸಿಲುಕುವ ಸಂಭವವಿದೆ ಎಂದರು.