ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

ವಿದ್ಯಾರ್ಥಿಗಳು ಗೌರವಯುತರಾಗಿ ಬದುಕಿ

ವರದಿ ನಾರಾಯಣಸ್ವಾಮಿ ಸಿ.ಎಸ್

ಹೊಸಕೋಟೆ ಅ 7:
ತಾಲೂಕಿನ ಬೇಗೂರು ಸರಕಾರಿ ಪ್ರೌಢ ಶಾಲೆಯಲ್ಲಿ 2006 2007ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಶಿಕ್ಷಕ ವೃಂದ ದಿವ್ಯ ಸಾನಿದ್ಯದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರವನ್ನು ಉದ್ದೇಶಿಸಿ ಶಿಕ್ಷಕರಾದ ಮಹೇಶ್  ಮಾತನಾಡಿ ಈ ರೀತಿಯ ಕಾರ್ಯಕ್ರಮಗಳು ಶಾಲೆಯ ಅಭಿವೃದ್ದಿಗೆ ಮಾದರಿ ಶಿಕ್ಷಣವನ್ನು ಬೆಳೆಸುವ ಕಾರ್ಯಕ್ಕೆ ಸ್ಪೂರ್ತಿ ತುಂಬುವಂತ ಕಾರ್ಯಗಳಾಗಿವೆ ಸದಾ ಶಾಲೆಯನ್ನು ಶಿಕ್ಷಕ ವೃಂದವನ್ನು ಅಭಿನಂದಿಸುವ ಕಾರ್ಯಕ್ರಮಗಳು ಮುಂದಿನ ಯುವ ಪೀಳಿಗೆಗಳಿಗೆ ಮಾದರಿಯಾಗುತ್ತವೆ ಎಂದರು.

ನಮ್ಮ ಕೈಯಲ್ಲಿ ಕಲಿತ ಇದೆ ಶಾಲೆಯಲ್ಲಿ ಓದಿ ದೊಡ್ಡವರಾಗಿ ಶಾಲೆಯಲ್ಲಿ ಕಳೆದ ನೆನಪುಗಳನ್ನು ಮೆಲುಕು ಹಾಕುತ್ತಾ ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಖುಷಿ ಆದರೆ ಈ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಯಲ್ಲಿ ಇದ್ದು ಕಲಿತ ಶಾಲೆಯನ್ನು ಹಾಗೂ ಶಿಕ್ಷಕರನ್ನು ಗೌರವಿಸುವ ನೆನಪಿಸುವ ಈ ಕಾರ್ಯವು ಶಿಕ್ಷಕರ ಕಾರ್ಯಕ್ಕೆ ಸಾರ್ಥಕತೆ ಮೆರೆಗೂ ತಂದುಕೊಟ್ಟಿತು ಎಂದರು.

ಶಿಕ್ಷಕಿ ಭಾರತಿ ಮಾತನಾಡಿ ಈ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಿಂದ ಹಳೆಯ ನೆನಪುಗಳನ್ನು ಮತ್ತೆ ಮರುಕಳಿಸಿದಂತಾಯಿತು ಎಂದರು.

ಹಳೆಯ ವಿದ್ಯಾರ್ಥಿ ಮುರುಳಿ ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿ ಬಲಿಷ್ಠವಾದುದು ಗುರುಬಲ ಬಾಲ್ಯದಲ್ಲಿ ತುಂಟತನ,ಅಜ್ಞಾನ,ಅಶಿಸ್ತಿನಿಂದ ಇರುವ ಮಕ್ಕಳನ್ನು ಒಂದು ಹತೋಟಿಗೆ ತಂದು ವಿದ್ಯೆ ಕಲಿಸುವ ಎಲ್ಲ ಗುರುಗಳಿಗೂ ನಮನ ಅವರ ತಾಳ್ಮೆ ಇರದೇ ಹೋಗಿದ್ದರೆ ನಮಗೆ ವಿದ್ಯೆಯ ಗಂಧವೇ ಇರುತ್ತಿರಲಿಲ್ಲ.

ಅಸಭ್ಯ ಸಂಸ್ಕೃತಿ ಜೀವನದ ಭಾಗವಾಗುತ್ತಿರಿಲ್ಲ  ಅಲ್ಲವೆ. ಆದರೆ ಪ್ರಸ್ತುತ ಕಾಲ ಬದಲಾಗಿದೆ ಜನರ ಮನೋಭಾವವೂ ಬದಲಾಗಿದೆ. ವಿದ್ಯೆ ಕಲಿಸುವ ಗುರು ಒಂದೇಟು ಹೊಡೆದರೆ ದೊಡ್ಡ ಕೋಲಾಹಲವೇ ನಡೆಯುತ್ತದೆ. ಆದರೆ ಒಂದು ಸುಂದರ ಶಿಲ್ಪಿಯ ಉಳಿ ಸುತ್ತಿಗೆಯ ಹಲವು ಪೆಟ್ಟುಗಳು ಬೀಳಲೇಬೇಕು.

ಶಾಲೆಯಲ್ಲಿ ಕಲಿತಿರುವ ಸೂಕ್ಷ್ಮಗಳನ್ನು  ಮೆಲಕು ಹಾಕುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಶಿಕ್ಷಕರೊಂದಿಗೆ ಶಾಲೆಯಲ್ಲಿ ನಡೆದ ಸಿಹಿ ಕಹಿ ವಿಷಯಗಳನ್ನು ಮುಕ್ತ ಮನಸ್ಸಿನಿಂದ ವಿದ್ಯಾರ್ಥಿಗಳು ತಮ್ಮೆಲ್ಲಾ ನೆನಪುಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವ ಮೂಲಕ ಶಾಲೆಯ ನೆನಪುಗಳನ್ನು ಮರುಕಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಹಳೆಯ ವಿದ್ಯಾರ್ಥಿಗಳಾದ ಮೋಹನ್ ಬಾಬು .ಹಾಗೂ ನೀಲಾಂಬಿಕೆ  ಅವರು ಅಚ್ಚು ಕಟ್ಟಾಗಿ ನಡೆಸಿಕೊಟ್ಟರು, ಕಾರ್ಯಕ್ರಮದ ನಂತರ ಶುಚಿ-ರುಚಿಯಾದ ಭೋಜನವನ್ನು ಎಲ್ಲರೂ ಒಟ್ಟಾಗಿ ಸವಿಯುವ ಮೂಲಕ ಸಂಭ್ರಮಾಚರಣೆಯಿಂದ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ..
ಶ್ರೀಮತಿ ಭಾರತಿ (ಕನ್ನಡ)
ಶ್ರೀಮತಿ ರಮಾದೇವಿ (PT & ಇಂಗ್ಲೀಷ್) ಶ್ರೀಮಂತನಿ (ಹಿಂದಿ) ಶ್ರೀಮತಿ ಸವಿತಾ (ವಿಜ್ಞಾನ ಮತ್ತು ಇಂಗ್ಲಿಷ್) ಶ್ರೀ.ಶಿವಾನಂದ್ (ಸಾಮಾಜಿಕ) ಶ್ರೀ.ದಿನೇಶ್ (ಗಣಿತ) ಶ್ರೀಮತಿ ಸೀಮಂತಿನಿ (ಗಣಿತ)
ಅತಿಥಿಗಳಾಗಿ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೋಟ್

ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ..ಅತಿಥಿ ದೇವೋ ಭವ ಎನ್ನುತ್ತದೆ ನಮ್ಮ ಸಂಸ್ಕೃತಿ ತಾಯಿ ತಂದೆ ನಂತರ ಗುರುವೇ ಮುಖ್ಯ ಎಂಬ ಶ್ರದ್ಧಾಪೂರ್ವಕ ನಂಬಿಕೆ ನಮ್ಮದು. ಬದುಕಿನ ಪ್ರಮುಖ ಘಟಗಳಲ್ಲಂತೂ ಮಾರ್ಗದರ್ಶಕರಾಗಿ ಗುರುವಿನ ಸಹಾಯ ಬೇಕೇ ಬೇಕು.
ನಾಗಭೂಷಣ್ ಹಳೆಯ ವಿದ್ಯಾರ್ಥಿ ಸೊಣ್ಣೆಬೈಚನಹಳ್ಳಿ

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ

    ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್‌ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…

    ನಟ ಡಾಲಿ ಧನಂಜಯ ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್

    ವರದಿ: ಲೋಕೇಶ್ ನಾಯ್ಕ.ಭಟ್ಕಳ. ನಟ ಡಾಲಿ ಧನಂಜಯ  ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್. ಭಟ್ಕಳ: ನ.23ಮುರುಡೇಶ್ವರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿಶ್ವ ಮೀನುಗಾರಿಕಾ ದಿನಾಚರಣೆ(ಮತ್ರ್ಯಮೇಳ) ಕಾರ್ಯಕ್ರಮಕ್ಕೆ ಶನಿವಾರ ಆಗಮಿಸಿದ ಡಾಲಿ ಧನ ಧನಂಜಯ ನೇತ್ರಾಣಿ ದ್ವೀಪದಲ್ಲಿ ಸ್ಕೂಬ್ ಡೈವಿಂಗ್ ಮಾಡುವ…

    You Missed

    ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ

    ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ

    ನಟ ಡಾಲಿ ಧನಂಜಯ ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್

    ನಟ ಡಾಲಿ ಧನಂಜಯ ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ