ವರದಿ ನಾರಾಯಣಸ್ವಾಮಿ ಸಿ.ಎಸ್
ಧರೆಗುರುಳಿದ ಆಲದ ಮರ ತೆರವಿಗೆ ಅರಣ್ಯ ಸಿಬ್ಬಂದಿ ವಿರೋಧ
ಹೊಸಕೋಟೆ ಅ. 7
ಬಿರುಗಾಳಿ ಸಹಿತ ಭಾರಿ ಮಳೆಗೆ ಧರೆಗುರುಳಿದ ಬೃಹದಾಕಾರದ ಆಲದ ಮರ ತೆರವು ವಿಷವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ತಾಲೂಕಿನ ಕಸಬಾ ಹೋಬಳಿಯ ಕೊಳತೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಬೃಹದಾಕಾರದ ಆಲದ ಮರ ಧರೆಗುರುಳಿದ್ದು, ಸಮೀಪದಲ್ಲಿ ಖಾಸಗಿ ಶಾಲೆ ಇದೆ ಪ್ರತಿದಿನ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ದೇವನಗುಂದಿ ಐಒಸಿ, ಬಿಪಿ ಸಿಎಲ್, ಎಚ್ ಪಿ ಪೆಟ್ರೋಲ್ ಬಂಕ್ ಇದೆ.
ನೂರಾರು ಸಂಖ್ಯೆಯಲ್ಲಿ ಟ್ಯಾಂಕರ್ ಲಾರಿಗಳು ಸಂಚಾರ ಮಾಡುತ್ತವೆ.
ರಾತ್ರಿ ಮರ ಧರೆಗುರುಳಿದ್ದರಿಂದ ಸಂಭವಿಸಬಹುದಾದ ಬಾರಿ ಅನಾಹುತ ಸಹ ತಪ್ಪಿದೆ. ಆದರೆ ರಸ್ತೆಗೆ ಅಡ್ಡಲಾಗಿ ಬಿದ್ದ ಆಲದ ಮರವನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ನಂತರ ಅದನ್ನು ತೆರವು ಮಾಡಬೇಕು ಎಂದಾಗ, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಗ್ರಾಮದ ಮುಖಂಡರಾದ ಬಸವರಾಜ ಮಾತನಾಡಿ, ಹೊಸಕೋಟೆ ಎಂವಿಜೆ ಆಸ್ಪತ್ರೆಯಿಂದ ಮಾಲೂರು ರಸ್ತೆ ವರೆಗೆ ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ರಸ್ತೆಗೆ ಅಡ್ಡಲಾಗಿ ಸಾಕಷ್ಟು ಮರಗಳಿವೆ ಅದನ್ನ ತೆರವುಗೊಳಿಸಲು ಅರಣ್ಯ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖವಾಗಿ ವಿದ್ಯುತ್ ಲೈನ್ ಕೆಳ ಭಾಗದಲ್ಲಿ ಗಿಡಗಳನ್ನು ನೆಟ್ಟು ಅವೈಜ್ಞಾನಿಕವಾಗಿ ಬೆಳೆಸಲಾಗುತ್ತದೆ ಗಿಡಗಳು ಬೆಳೆದು ದೊಡ್ಡದಾದ ನಂತರ ವಿದ್ಯುತ್ ಲೈನ್‌ಗೆ ತಗಲುತ್ತವೆ ಎಂದು ಬೆಸ್ಕಾಂ ಅಧಿಕಾರಿಗಳು ಕತ್ತರಿಸುತ್ತಾರೆ ಎಂದು ದೂರಿದರು.
ಈಗ ಗ್ರಾಮದ ಮುಖ್ಯ ರಸ್ತೆಯಲ್ಲಿನ ಆಲದ ಮರವು ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರ ಪರಿಣಾಮ ವಿದ್ಯುತ್ ಲೈನ್‌ಗಳು ಸಹ ತುಂಡಾಗಿ, ಗ್ರಾಮದಲ್ಲಿ ವಿದ್ಯುತ್ ಸರಬರಾಜಿಗೆ ಅಡಚಣೆ ಉಂಟಾಗಿದ್ದು ಸಾವಿರಾರು ವಾಹನಗಳ ಸಂಚಾರಕ್ಕೆ ತೊಂದರೆಯಾಗಲಿದೆ. ಇಷ್ಟಾದರೂ, ಮರ ತೆರವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿಗಾಗಿ ಸೋಮವಾರದವರೆಗೆ ಕಾಯಬೇಕೆಂಬುದು ಸರಿ ಯಲ್ಲ. ಆದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ವರ್ತನೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂ ಡರಾದ ನಾರಾಯಣಸ್ವಾಮಿ, ರಾಮ ಚಂದ್ರ, ಪ್ರಕಾಶ್. ಎಚ್, ಬಸವರಾಜು. ಎಂ ಮತ್ತಿತರರು ಹಾಜರಿದ್ದರು.