ವರದಿಗಾರರು : ಶರತ್ ಶೇಟ್
ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ (ರಿ) ವತಿಯಿಂದ ಡಿ.ಎಫ್.ಓ. ಗೆ ಮನವಿ ನೀಡಲಾಯಿತು
ಹೊನ್ನಾವರ ಅ.7
ಇಂದು ಮದ್ಯಾಹ್ನ 4 : 30 ಗಂಟೆಗೆ ಹೊನ್ನಾವರ ಡಿ ಎಫ್ ಓ ಕಚೇರಿಯಲ್ಲಿ ಸಂಘಟನೆ ಪ್ರಮುಖರು ರೈತರು ಸೇರಿ ಮನವಿ ನೀಡಲಾಯಿತು
ಮಂಗಗಳು ಹಾಗೂ ಕಾಡು ಪ್ರಾಣಿಗಳು ರೈತರ ಉತ್ಪನ್ನ ತೆಂಗು ಅಡಿಕೆ ಬಾಳೆ ತರಕಾರಿ ಹಾನಿಯ ಕುರಿತು ಸರಕಾರ ಮಟ್ಟದಲ್ಲಿ ಪ್ರಯತ್ನ ಜನ ಪ್ರತಿನಿದಿಗಳು ಕಾನೂನು ತರಬೇಕಾದ ಕುರಿತು ತಿಳಿಸಿದರು
ಸಂದರ್ಭದಲ್ಲಿ ಗೌರವ ಸಲಹೆಗಾರರು ಮಾಜಿ ಬಿ ಜೆ ಪಿ ಜಿಲ್ಲಾ ಅಧ್ಯಕ್ಷರು ರೈತರಾದ ಎಮ್ ಜಿ ನಾಯ್ಕ್ ಗೌರವ ಸಲಹೆಗಾರರಾದ ಡಾ ಎಸ್ ಡಿ ಹೆಗಡೆ ಉಪಾಧ್ಯಕ್ಷರು ನೋಟರಿ ವಕೀಲರು ರೈತರಾದ ಎಸ್ ಏನ್ ನಾಯ್ಕ್ ಉಪಾಧ್ಯಕ್ಷರು ಸಹಕಾರಿಗಳು ರೈತರಾದ ಎಮ್ ಆರ್ ಹೆಗಡೆ ಅಧ್ಯಕ್ಷರು ರೈತರಾದ ಜಿ ಏನ್ ಗೌಡ ಕಾರ್ಯದರ್ಶಿ ಹಾಗೂ ರೈತರಾದ ಪ್ರಭು ಪಟಗಾರ ಸಂಘಟನೆಯ ರಾಘು ಮೇಸ್ತ ರಾಘು ನಾಯ್ಕ್ ಎಸ್ ಕೆ ಮೇಸ್ತ ಪ್ರಗತಿ ಪರ ರೈತರು ನಾಗಪ್ಪ ಕುಪ್ಪಾ ಗೌಡ ಮಾಜಿ ಪಟ್ಟಣ ಪಂಚಾಯತ್ ಸದಸ್ಯರು ಕಾಂಗ್ರೆಸ್ ಮುಖಂಡರು ಉದಯ ಮೇಸ್ತ ಆರ್ ಟಿ ಐ ಕಾರ್ಯಕರ್ತರು ಹಿರಿಯರು ಎಚ್ ಎಸ್ ನಾಯ್ಕ್ ಚಂದಾವರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು ಮಂಜುನಾಥ್ ಗೌಡ ಬಳಕೂರ ವಿ ಎಸ್ ಎಸ್ ನಿರ್ದೇಶಕರು ರೈತರಾದ ಗಜಾನನ ಜಟ್ಟಿ ನಾಯ್ಕ್ ಮಾಳ್ಕೋಡ ಮುಂತಾದವರು ಇದ್ದರು
ಡಿ ಎಫ್ ಒ. ಶ್ರೀ ಯೋಗೀಶ್ ಗೌಡ ಮನವಿ ಸ್ವೀಕರಿಸಿ ಪರಿಹಾರ ಕುರಿತು ಚರ್ಚಿಸಿದರು