ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಬಡ್ಡಿ ವ್ಯವಹಾರ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಾಗಿದೆ
ಶಿವಮೊಗ್ಗ ಟೌನ್ ಟ್ಯಾಂಕ್ ಮೊಹಲ್ಲಾದ ಮಹಿಳೆಯೊಬ್ಬರು 4 ವರ್ಷಗಳ ಹಿಂದೆ ಟ್ಯಾಂಕ್ ಮೊಹಲ್ಲಾದ ವಾಸಿ ಸುಪ್ರಿಯಾ ರವರ ಹತ್ತಿರ 10% ಬಡ್ಡಿ ಯಂತೆ ಮತ್ತು ಶಿವಮೊಗ್ಗ ಟೌನ್ ಬಾಪೂಜಿ ನಗರದ ವಾಸಿ ವೆನಿಲಾ ಎಂಬುವವರಿಂದ 15 % ಸಾಲವನ್ನು ಪಡೆದುಕೊಂಡಿದ್ದರು
ಸದರಿ ಮಹಿಳೆಯು ಹಣವನ್ನು ಹಿಂದಿರುಗಿಸಿದರು ಸಹ ಬಡ್ಡಿ ಮೊತ್ತಕ್ಕೆ ಸೇರಿಸಿ ಸಾಲದ ಮೊತ್ತವನ್ನು ಹೆಚ್ಚಿಸಿ ಸದರಿಯವರನ್ನು ಪದೇ ಪದೇ ಹಸಲು ಮತ್ತು ಬಡ್ಡಿಯನ್ನು ಕೊಡುವಂತೆ ಪೀಡಿಸುತ್ತಿದ್ದರು
ಮಹಿಳೆಯ ಮನೆಯ ಹತ್ತಿರವು ಹೋಗಿ ಸಾರ್ವಜನಿಕ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಆಕೆಯ ಮೇಲೆ ಹಲ್ಲೆ ನಡೆಸಿ ಜೀವ ಪಿತರಿಕೆ ಹಾಕಿರುತ್ತಾರೆ
ಸದರಿ ಮಹಿಳೆಯ ದೂರಿನ ಮೇರೆಗೆ ಕೋಟೆ ಪೊಲೀಸ್ ಠಾಣೆಯಲ್ಲಿ “Karnataka prevention of charging exorbitant interest act 2004. SC and ST (PA Act)” ಮತ್ತು ಐಪಿಸಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತಾರೆ
ಶ್ರೀ ನಿತಿನ್ ಕುಮಾರ್ ಜಿ ಕೆ ಐಪಿಎಸ್ ಮಾನ್ಯ ಪೊಲೀಸ್ ಅಧ್ಯಕ್ಷರು ಶಿವಮೊಗ್ಗ ಜಿಲ್ಲೆ, ಶ್ರೀಅನಿಲ್ ಕುಮಾರ್ ಭೀಮರೆಡ್ಡಿ ಹೆಚ್ಚುವರಿ ಪೊಲೀಸ್ ಅಧ್ಯಕ್ಷರು 1, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀಕಾರ್ಯಪ್ಪ ಎಜೆ ಹೆಚ್ಚುವರಿ ಪೊಲೀಸ್ ಅಧ್ಯಕ್ಷರು 2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀಬಾಬು ಅಂಜನಪ್ಪ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀ ಗುರು ಬಸವರಾಜ್ ಪಿ ಐ ಕೋಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವು “The Karnataka prevention of charging exorbitant interest act 2004” ನ ಅಡಿಯಲ್ಲಿ ಆರೋಪಿತರಾದ ಸುಪ್ರಿಯ ಮತ್ತು ವೆನಿಲಾ ರವರ ಮನೆಗಳ ಮೇಲೆ ದಾಳಿ ನಡೆಸಿ ಸದರಿಯವರಿಂದ “54” ಚೆಕ್ ಗಳು, “25” ಬಾಂಡ್ ಪೇಪರ್ ಗಳನ್ನು ಮತ್ತು ಒಂದು ಅಗ್ರಿಮೆಂಟ್ ಪೇಪರನ್ನು ವಶಪಡಿಸಿಕೊಂಡು ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗಿದೆ
ವಿಶೇಷ ಸೂಚನೆ : ಅಕ್ರಮ ಬಡ್ಡಿ ವ್ಯವಹಾರ ಮಾಡುವವರ ಬಗ್ಗೆ ಮಾಹಿತಿ ಇದ್ದಲ್ಲಿ ಅಥವಾ ಅಕ್ರಮ ಬಡ್ಡಿ ವ್ಯವಹಾರ ಮಾಡಿ ತೊಂದರೆ ಕೊಡುತ್ತಿದ್ದಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆ ಅಥವಾ “112” ಸಹಾಯವಾಣಿಗೆ ಮಾಹಿತಿ ಅಥವಾ ದೂರನು ನೀಡಲು ಕೋರಿದೆ
ವರದಿ : ಮೆಟ್ರೋ ನ್ಯೂಸ್
ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು. ಉಡುಪಿ : ಕುಂದಾಪುರ ತಾಲ್ಲೂಕಿನ ದಿನಾಂಕ 20-11-2024 ಗ್ರಾಮ ಸಭೆ ನಡೆದಿದ್ದು ಗ್ರಾಮದ ಕೆಲವೊಂದು ಮೂಲಭೂತ ಸೌಕರ್ಯಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಯೊಂದು ನಡೆದಿತ್ತು.…