ಕುಕನೂರು : ಇಲ್ಲಿಯ ಸರಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ೭೮ ನೆಯ ಸ್ವಾತಂತ್ರ್ಯ ದಿನೋತ್ಸವ ವನ್ನು ಸಂಭ್ರಮದಿಂದ ಆಚರಿಸಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ. ಪ್ರವೀಣದಾಸ್ ಮಾತನಾಡಿ, ಇಂದು ದೇಶದ ಎಲ್ಲೆಡೆ ಸ್ವಾತಂತ್ರ್ಯ ದಿನೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಮಹನೀಯರ ತ್ಯಾಗ ಬಲಿದಾನ ಬಗ್ಗೆ ಸ್ಮರಿಸುತ್ತಾ ಯುವ ಜನತೆಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಜೊತೆಗೆ ಎಲ್ಲರೂ ಸಮಾನರು ಸಮಾನ ಹಕ್ಕು ಜವಾಬ್ದಾರಿ ಹಂಚಿಕೆ ಮೂಲಕ ಉತ್ತಮ ಕೆಲಸ ಮಾಡಲು ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕೆಲಸವಾಗಬೇಕು ದೇಶಕ್ಕಾಗಿ ಹೋರಾಡಿದ ಧೀರರ ಬಗ್ಗೆ ನಿತ್ಯವೂ ಸ್ಮರಿಸೋಣ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಗುರುಗಳಾದ ಧಮ೯ಪ್ಪ ನಾಯಕ್ ಮಾತನಾಡಿ,
ಸ್ವಾತಂತ್ರ್ಯ ದಿನಾಚರಣೆಯನ್ನು ಗೌರವಿಸಿ ಪವಿತ್ರ ಭಾವನೆಯಿಂದ ಸ್ಮರಿ ಸೋಣ,
ಈ ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಿಗೊಳಿಸಲು ಸಹಸ್ರಾರು ಭಾರತೀಯರು ತಮ್ಮ ತನು..ಮನ …ಧನ..ವನ್ನು ತ್ಯಾಗ ಮಾಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ ,
ಜವಾಹರ್ ಲಾಲ್ ನೆಹರು.. ಬಾಲಗಂಗಾಧರ ತಿಲಕ್.. ಸರ್ದಾರ್ ವಲ್ಲಭಬಾಯಿ ಪಟೇಲ್.. ಭಗತ್ ಸಿಂಗ್… ಸುಭಾಷ್ ಚಂದ್ರ ಬೋಸ್.. ಸರೋಜಿನಿ ನಾಯ್ಡು… ಕಿತ್ತೂರು ರಾಣಿ ಚೆನ್ನಮ್ಮ …ಝಾನ್ಸಿರಾಣಿ ಲಕ್ಷ್ಮಿಬಾಯಿ ..
ಮುಂತಾದ ಅನೇಕ ಹೋರಾಟಗಾರರ ಪರಿಶ್ರಮದಿಂದ ನಾವಿಂದು ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ ಎಂದು ವಿವರಿಸಿದರು.
ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಸದಸ್ಯರಾದ ರುದ್ರಪ್ಪ ಭಂಡಾರಿ,ಅಡಿವೆಪ್ಪ ಬೋರಣ್ಣ ವರ್, ಉಪಾಧ್ಯಕ್ಷೆ ಮುಮ್ತಾಜ್ ಬೇಗಂ, ಶಿಕ್ಷಕರಾದ ವೀರನಗೌಡ ಪಾಟೀಲ್, ಕೃಷ್ಣವೇಣಿ, ಗವಿಸಿದ್ದ ಮ್ಮ ಹಿರೇಮಠ, ರೇಣುಕಾ ಬಡಿಗೇರ್, ಶಿವಪ್ಪ, ವೀಣಾ, ಸೇರಿದಂತೆ ಅತಿಥಿ ಶಿಕ್ಷಕರು, ಅನೇಕ ಪ್ರಮುಖರು, ಶಿಕ್ಷಣ ಪ್ರೇಮಿಗಳು ಭಾಗವಹಿಸಿದ್ದರು. ನಂತರ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾಯ೯ಕ್ರಮಗಳು ಜರುಗಿದವು.
ವರದಿ: ರುದ್ರಪ್ಪ ಭಂಡಾರಿ ಕೊಪ್ಪಳ