ಸಹಾಯಕ ಅರಣ್ಯಾಧಿಕಾರಿಗಳಿಗೆ ನಿರ್ದಿಷ್ಟ ಜಾಗದ ಸುತ್ತಲು ಬೇಲಿ ಅಳವಡಿಸುವಂತೆ ಒತ್ತಾಯಿಸಿ ಮನವಿ‌

ವರದಿ :ಲೋಕೇಶ್ ನಾಯ್ಕ್. ಭಟ್ಕಳ.

ಭಟ್ಕಳ : 22 ಅ
ಕುಕನೀರ್ ಗ್ರಾಮದಲ್ಲಿ ಅನಧಿಕೃತ ವ್ಯಕ್ತಿಗಳು ಅರಣ್ಯ ಜಾಗವನ್ನು ಮಾರಾಟ ಮತ್ತು ಸ್ವಾಧಿನ ಪಡಿಸಿಕೊಂಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಇಂದು ಸಹಾಯಕ ಅರಣ್ಯಾಧಿಕಾರಿಗಳ ಕಛೇರಿಗೆ ಆಗಮಿಸಿ ಸ್ವಾಧಿನಪಡಿಸಿಕೊಂಡಿರುವ ಜಾಗವನ್ನು ವಶಪಡಿಸಿಕೊಂಡು ನಿರ್ದಿಷ್ಟ ಜಾಗದ ಸುತ್ತಲು ಬೇಲಿ ಅಳವಡಿಸುವಂತೆ ಒತ್ತಾಯಿಸಿ ಮನವಿ‌ ನೀಡಿದರು.

ಈ ಹಿಂದೆ ಹೆಬಳೆ ಗ್ರಾಮದ ಕುಕನೀರ್ ಮಜಿರೆಯ ಸರ್ವೆ ನಂ. 258 ರಲ್ಲಿರು 2 ಗುಂಟೆ ಜಾಗದಲ್ಲಿ ನಾಗವೇಣಿ ರಾಜು ಶೆಟ್ಟಿ ಎಂಬುವವರು ಅಧೀಕೃತ ಅತಿಕ್ರಮಣಾದಾರರಾಗಿ ವಾಸ್ತವ್ಯ ಹೊಂದಿದ್ದರು. ಕೆಲವು ಸಮಯಗಳ ಹಿಂದೆ ಅವರು ಮನೆ ಬಿಟ್ಟು ಹೋಗಿದ್ದರು. ಆದರೆ ಇತ್ತೀಚೆಗೆ ಆ ಜಾಗವನ್ನು ಮೊಹಮ್ಮದ್ ಸಲಿಂ ಬಾಯಿದ್ ಅಕ್ಬರ್ ಎಂಬುವವರು ಸ್ವಾಧಿನಪಡಿಸಿಕೊಂಡು ಜಾಗವನ್ನು ಅಭಿವೃದ್ಧಿಪಡಿಸುತ್ತಿದ್ದರು. ಈ ಕುರಿತಾಗಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದಾಗ ಪ್ರಕರಣ ದಾಖಲಿಸಿಕೊಂಡು ಕೆಲಸವನ್ನು ಸ್ಥಗಿತಗೊಳಿಸಿದ್ದರು. ಆದರೆ ಇದೀಗ ಆ ವ್ಯಕ್ತಿ ಮತ್ತೆ ಆ ಜಾಗಕ್ಕೆ ಆಗಮಿಸಿ ಮತ್ತೆ ಕಾಮಗಾರಿಯನ್ನು‌ ಪ್ರಾರಂಭಿಸಿ ಗ್ರಾಮಸ್ಥರು ಪ್ರಶ್ನಿಸಿದಾಗ ಜಾಗವನ್ನು  ಹೆಬಳೆಯ ಚಣ್ಣಯ್ಯ ನಾಯ್ಕ ಎಂಬುವವರಿಂದ ಖರೀದಿ ಮಾಡಿರುವುದಾಗಿ ಹೇಳಿಕೊಂಡು ಅರಣ್ಯ ಇಲಾಖೆಯ ಕಣ್ಣು ತಪ್ಪಿಸಿ ತನ್ನ ಕೆಲಸವನ್ನು ಮುಂದುವರೆಸಿದ್ದಾನೆ. ಅರಣ್ಯ ಇಲಾಖೆಯ ಜಾಗವನ್ನು ಅನಧಿಕೃತ ವ್ಯಕ್ತಿಗಳಿಂದ ಸ್ವಾಧಿನವಾಗದಂತೆ ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಕೃಷ್ಣ ನಾಯ್ಕ, ಶ್ರೀಕಾಂತ ನಾಯ್ಕ, ವಸಂತ ದೇವಾಡಿಗ, ರವಿ ನಾಯ್ಕ, ರಾಮ ನಾಯ್ಕ ಹೇಬ್ಳೆ ಹಾಗೂ ಕೂಕ್ಕನಿರ ಗ್ರಾಮಸ್ಥರು ಹಾಜರಿದ್ದರು.

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ವರದಿ ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ ನ 20ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ ಎಂದು ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್ ತಿಳಿಸಿದರು. ತಾಲೂಕಿನ ಅತ್ತಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ…

    You Missed

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ಕೆ.ಎಸ್.ಹೆಗಡೆ  ಮಂಗಳೂರು ಆಸ್ಪತ್ರೆಯ ಖ್ಯಾತ ವೈದ್ಯರಿಂದಭಟ್ಕಳ್  ತಾಲೂಕಾ  ಆಸ್ಪತ್ರೆಯಲ್ಲಿ ನವೆಂಬರ್ 24 ರಂದು ವೈದ್ಯಕೀಯ ಶಿಬಿರ.

    ಕೆ.ಎಸ್.ಹೆಗಡೆ  ಮಂಗಳೂರು ಆಸ್ಪತ್ರೆಯ ಖ್ಯಾತ ವೈದ್ಯರಿಂದಭಟ್ಕಳ್  ತಾಲೂಕಾ  ಆಸ್ಪತ್ರೆಯಲ್ಲಿ ನವೆಂಬರ್ 24 ರಂದು ವೈದ್ಯಕೀಯ ಶಿಬಿರ.

    ಕನಕದಾಸರು ನಾಡು ಕಂಡ ಅಪ್ರತಿಮ ದಾಸ ಶ್ರೇಷ್ಠರು / ಶಾಸಕ ಶರತ್ ಬಚ್ಚೇಗೌಡ

    ಕನಕದಾಸರು ನಾಡು ಕಂಡ ಅಪ್ರತಿಮ ದಾಸ ಶ್ರೇಷ್ಠರು / ಶಾಸಕ ಶರತ್ ಬಚ್ಚೇಗೌಡ

    ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದ

    ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದ

    ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ / ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಿಂದ ಸನ್ಮಾನ

    ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ / ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಿಂದ ಸನ್ಮಾನ