ವರದಿ ಲಕ್ಷ್ಮಣ್ ಕಲಾಲ್ ತಾಳಿಕೋಟಿ
ಮೂಲಭೂತ ಸೌಕರ್ಯಕ್ಕಾಗಿ ಮಿಲ್ಲತ್ ನಗರ ನಿವಾಸಿಗಳ ಒತ್ತಾಯ
ವಿಜಯಪುರ : ಅ.
ಜಿಲ್ಲೆಯ ತಾಳಿಕೋಟೆ ಪಟ್ಟಣದ ಮಿಲ್ಲತ್ ನಗರ ವಾರ್ಡ್ ನಂ 4 ರಲ್ಲಿ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿಂದ ವಂಚಿತರಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
ರಸ್ತೆಗಳು ಮಣ್ಣಿನಿಂದ ಕೂಡಿದ್ದು ಸಂಚಾರ ಮಾಡಲು ಸಮಸ್ಯೆ ಉಂಟಾಗುತ್ತಿದೆ.
ಮಳೆಯಿಂದ ಮಣ್ಣಿನ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ವಾರ್ಡ್ ನಿವಾಸಿಗಳು ನಡೆದುಕೊಂಡು ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಂಪ್ರತಿ ವಾರ್ಡ್‌ನ ರಸ್ತೆಗಳಲ್ಲಿ ಓಡಾಡುವಾಗ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಾ ಸಂಚರಿಸುತ್ತಿದ್ದಾರೆ
ಹತ್ತಾರು ವರ್ಷ ಕಳೆದರೂ ಪುರಸಭೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ವಾರ್ಡಿನ ನಿವಾಸಿಗಳು ತಿಳಿಸಿದರು …
ವಾರ್ಡಿನಲ್ಲಿ ವಾಸ ಮಾಡುವುದೇ ಕಷ್ಟವಾಗುತ್ತಿದೆ. ಮಳೆ ಬಂದಾಗ ಮಳೆ ನೀರು ನಿಂತು ವಾಸನೆಯಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದ್ದು, ಸ್ವಚ್ಛತೆ ಇಲ್ಲದೇ ಇರುವುದರಿಂದ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ಖಾಯಿಲೆ ಹರಡುವ ಭೀತಿಯೂ ಎದುರಾಗಿದೆ
ಈ ರಸ್ತೆಯಲ್ಲಿ ಚಿಕ್ಕ ಮಕ್ಕಳು ಹಿರಿಯ ನಾಗರಿಕರು ಮಳೆ ಬಂದಾಗ ಹೊರಗಡೆ ಬರೋದು ತುಂಬಾ ಕಷ್ಟಕರವಾಗಿದೆ. ಕೆಲ ದಿನಗಳ ಹಿಂದೆ ರಸ್ತೆಯಲ್ಲಿ ಬಿದ್ದು ಕೈ ಕಾಲಿಗಳಿಗೆ ಪೆಟ್ಟು ಬಿದ್ದಿದ್ದು ಉದಾಹರಣೆಗಳಿವೆ, ಚುನಾಯಿತ ಪ್ರತಿನಿಧಿಗಳು ಚುನಾವಣೆಗೆ ಬಂದಾಗ ಮಾತ್ರ ವಾರ್ಡಗೆ ಬರುತ್ತಾರೆ ಆಗ ನಾವು ಕೇಳಿದಾಗ ನಮ್ಮನ್ನು ಗೆಲ್ಲಿಸಿ ಆಗ ನಿಮ್ಮೆಲ್ಲಾ ರಸ್ತೆಗಳು ಮಾಡುವದಾಗಿ ಭರವಸೆ ನೀಡಿ ಹೋಗುತ್ತಾರೆ …
ಪುರಸಭೆಗೆ ಐದಾರು ಬಾರಿ ಹೋಗಿ ಹೇಳಿದ್ದರು ಸಹ ಯಾವೊಬ್ಬ ಅಧಿಕಾರಿಗಳು ಸ್ಥಳ ವೀಕ್ಷಣೆಗೆ ಬಂದಿರುವುದಿಲ್ಲ …ಈ ಬಾರಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಸಾರ್ವಜನಿಕರು ಮಾಧ್ಯಮದ ಮುಂದೆ ಅಳಲು ತೋಡಿಕೊಂಡರು